ADVERTISEMENT

ಹೊಸ ನಿಯಮಕ್ಕೆ ಬ್ಯಾಂಕ್‌ಗಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST
ಕೋಲ್ಕತ್ತದಲ್ಲಿ ಶನಿವಾರ ನಡೆದ ಬ್ಯಾಂಕಿಂಗ್‌ ಶೃಂಗಸಭೆಯಲ್ಲಿ ಐಸಿಸಿ ರಾಷ್ಟ್ರೀಯ ಬ್ಯಾಂಕಿಂಗ್‌ ತಜ್ಞರ ಸಮಿತಿ ಅಧ್ಯಕ್ಷ ಆತನು ಸೇನ್‌, ಬಂಧನ್‌ ಬ್ಯಾಂಕ್ ಸ್ಥಾಪಕ ಚಂದ್ರಶೇಖರ್‌ ಘೋಷ್‌ ಮತ್ತು ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್‌ ಕುಮಾರ್‌ ಗುಪ್ತಾ ಭಾಗವಹಿಸಿದ್ದರು  ಪಿಟಿಐ ಚಿತ್ರ

ಕೋಲ್ಕತ್ತ (ಪಿಟಿಐ): ಕಾರ್ಪೊರೇಟ್‌ ಕಂಪೆನಿ ಮತ್ತು ಬೃಹತ್‌ ಮೂಲಸೌಕರ್ಯ ಯೋಜನೆಗಳಿಗೆ ಸಾಲ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ರೂಪಿಸಿರುವ ಹೊಸ ನಿಯಮಾವಳಿಗಳ ಬಗ್ಗೆ ಬ್ಯಾಂಕ್‌ಗಳು ಆಕ್ಷೇಪ ಎತ್ತಿವೆ. 

ಆರ್‌ಬಿಐನ ಹೊಸ ನಿಯಮಾವಳಿ ಬೃಹತ್‌ ಮೂಲಸೌಕರ್ಯ ಯೋಜನೆಗಳ ಮೇಲೆ ಬೀರಲಿರುವ ದುಷ್ಪರಿಣಾಮಗಳ ಬಗ್ಗೆ ರಾಜನ್‌ ಅವರಿಗೆ ಮನವರಿಕೆ ಮಾಡಲಾಗಿದೆ.ನಿಯಮಾವಳಿ ಪುನರ್‌ ಪರಿಶೀಲಿಸುವಂತೆ ಮನವಿ ಮಾಡಿದ್ದೇವೆ ಎಂದು ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಗುಪ್ತಾ ಹೇಳಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಸಂಘ ಶನಿವಾರ ನಗರದಲ್ಲಿ ಆಯೋಜಿಸಿದ್ದ ಬ್ಯಾಂಕಿಂಗ್‌ ಶೃಂಗಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಬೃಹತ್‌ ಯೋಜನೆಗಳಿಗೆ ಸಾಲ ನೀಡಲು ಆರ್‌ಬಿಐ ರೂಪಿಸಿರುವ ಹೊಸ ನಿಯಮಾವಳಿಗಳು 2017ರ ಏಪ್ರಿಲ್‌ 1ರಿಂದ ಜಾರಿಗೆ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.