ADVERTISEMENT

ಹೋಂಡಾ ಮೊಬಿಲಿಯೊ ರಾಜ್ಯ ಮಾರುಕಟ್ಟೆ ಪ್ರವೇಶ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ಬೆಂಗಳೂರು: ಹೋಂಡಾ ಕಾರ್ಸ್‌ ಇಂಡಿಯಾ ಲಿ. (ಎಚ್‌ಸಿಐಎಲ್‌) ಬಹು ಬಗೆ ಬಳಕೆಯ(ಎಂಪಿವಿ) ಮಧ್ಯಮ ಶ್ರೇಣಿಯ ಏಳು ಆಸನಗಳ ಹೊಸ ‘ಹೋಂಡಾ ಮೊಬಿಲಿಯೊ’ ಕಾರನ್ನು ರಾಜ್ಯದ ಮಾರು ಕಟ್ಟೆಗೆ ಪರಿಚಯಿಸಿದೆ.

ಸೋಮವಾರ ಸುದ್ದಿಗೋಷ್ಠಿ ನಡೆ ಸಿದ ‘ಎಚ್‌ಸಿಐಎಲ್‌’ ಅಧ್ಯಕ್ಷ ಹಿರೊ ನೊರಿ ಕನಯಾಮಾ, ‘ಹೋಂಡಾ ಅಮೇಜ್‌ ಮತ್ತು ಸುಧಾ ರಿತ ಮಾದರಿ ‘ಸಿಟಿ’ ಕಾರುಗಳಿಂದಲೇ ಕಳೆದ ಹಣ ಕಾಸು ವರ್ಷದಲ್ಲಿ ಕಂಪೆನಿ ಶೇ 83ರಷ್ಟು ಮಾರಾಟ ವೃದ್ಧಿ ಕಂಡಿದೆ. ಈಗ ‘ಮೊಬಿ ಲಿಯೊ’ ಪರಿಚಯಿಸಿದ್ದು, ವಹಿವಾ ಟನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿದೆ. 2017 ಮಾರ್ಚ್‌ ವೇಳೆಗೆ 3ಲಕ್ಷ ಕಾರು ಮಾರಾಟ ನಿರೀಕ್ಷೆ ಇದೆ’ ಎಂದರು.

ಕಾರು ಮಾರಾಟ ಜಾಲ ವಿಸ್ತರಣೆ ಸಲುವಾಗಿ ದೇಶದ 150 ನಗರಗಳ ಲ್ಲಿನ ವಿತರಕರ ಸಂಖ್ಯೆಯನ್ನು 230ಕ್ಕೆ ಹೆಚ್ಚಿಸಿಕೊಳ್ಳುವ ಗುರಿ  ಇದೆ ಎಂದರು.
4.4 ಮೀ. ಉದ್ದದ ‘ಮೊಬಿಲಿಯೊ’ 3 ಮಾದರಿಗಳಲ್ಲಿದೆ. ಮ್ಯಾನುಯೆಲ್‌ ಗೇರ್‌ ಟ್ರಾನ್ಸ್‌ಮಿಷನ್‌ ಪೆಟ್ರೋಲ್‌ ಮಾದರಿ, ಡೀಸೆಲ್‌, ಪೆಟ್ರೋಲ್‌ ಎಂಜಿನ್‌ನ ಆರ್‌ಎಸ್‌ ಮಾದರಿಗಳಿವೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ಮಾದರಿ ಆರಂಭಿಕ (ಎಕ್ಸ್‌ಷೋರೂಂ) ಬೆಲೆ ರೂ. 6.83 ಲಕ್ಷ ಮತ್ತು ಡೀಸೆಲ್‌ ಮಾದರಿ ರೂ. 8.25 ಲಕ್ಷ. ‘ಆರ್‌ಎಸ್‌’ ಮಾದರಿ ಸೆಪ್ಟೆಂಬರ್‌ಗೆ ಲಭ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.