ADVERTISEMENT

1,211 ಸರಕುಗಳಿಗೆ ಜಿಎಸ್‌ಟಿ ದರ ನಿಗದಿ: ಆಹಾರಧಾನ್ಯಗಳ ಬೆಲೆ ಇಳಿಕೆ

ಏಜೆನ್ಸೀಸ್
Published 19 ಮೇ 2017, 9:49 IST
Last Updated 19 ಮೇ 2017, 9:49 IST
ಅರುಣ್‌ ಜೇಟ್ಲಿ
ಅರುಣ್‌ ಜೇಟ್ಲಿ   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಷತ್‌ 1,211 ಸರಕುಗಳ ದರ ನಿರ್ಧಾರ ಮಾಡಿದೆ. ಇವುಗಳಲ್ಲಿ ಬಹುತೇಕ ಸರಕುಗಳ ತೆರಿಗೆ ಶೇ 18ರಷ್ಟಿದೆ. ಚಿನ್ನ ಮತ್ತು ಬೀಡಿಯ ಜಿಎಸ್‌ಟಿ ದರವನ್ನು ಇನ್ನೂ ಅಂತಿಮಗೊಳಿಸಿಲ್ಲ. ಹಾಲನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ.

ಗುರುವಾರ ನಡೆದ ಜಿಎಸ್‌ಟಿ ಪರಿಷತ್‌ನ ಮೊದಲ ದಿನದ ಸಭೆಯಲ್ಲಿ ಈ ದರ ನಿರ್ಧಾರ ಮಾಡಲಾಗಿದೆ.

ಜಿಎಸ್‌ಟಿ ಪರಿಷತ್‌ ಸಭೆಯ ಬಳಿಕ ಮಾತನಾಡಿದ ಹಣಕಾಸು ಸಚಿವ ಅರುಣ್‌ ಜೇಟ್ಲಿ, ‘ಯಾವುದೇ ಸರಕುಗಳ ತೆರಿಗೆ ದರ ಹೆಚ್ಚಳವಾಗಿಲ್ಲ. ಬಹುತೇಕ ಸರಕುಗಳ ತೆರಿಗೆ ದರ ಕಡಿತಗೊಂಡಿದೆ’ ಎಂದಿದ್ದಾರೆ.

ADVERTISEMENT

‘ಜಿಎಸ್‌ಟಿ ಜಾರಿಯಿಂದ ಆಹಾರಧಾನ್ಯಗಳ ಬೆಲೆ ಇಳಿಕೆಯಾಗಲಿದೆ. ಕೇಶತೈಲ (ಹೇರ್‌ ಆಯಿಲ್‌), ಸೋಪ್‌, ಟೂತ್‌ಪೇಸ್ಟ್‌ ಸೇರಿದಂತೆ ಹಲವು ಸರಕುಗಳ ಜಿಎಸ್‌ಟಿ ದರ ಶೇಕಡ 18ರಷ್ಟು ಇರಲಿದೆ. ಕಲ್ಲಿದ್ದಲಿನ ಜಿಎಸ್‌ಟಿ ದರ ಶೇಕಡ 5ಕ್ಕೆ ಇಳಿಕೆಯಾಗಲಿದೆ. ಸದ್ಯ ಕಲ್ಲಿದ್ದಲಿಗೆ ಶೇಕಡ 11.69ರಷ್ಟು ತೆರಿಗೆಯಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 1ರಿಂದ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.