ADVERTISEMENT

27 ಕೋಟಿ ಟನ್‌ಗಳಷ್ಟು ದಾಖಲೆ ಆಹಾರ ಧಾನ್ಯ ಉತ್ಪಾದನೆ ನಿರೀಕ್ಷೆ

ಪಿಟಿಐ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST
27 ಕೋಟಿ ಟನ್‌ಗಳಷ್ಟು ದಾಖಲೆ  ಆಹಾರ ಧಾನ್ಯ ಉತ್ಪಾದನೆ ನಿರೀಕ್ಷೆ
27 ಕೋಟಿ ಟನ್‌ಗಳಷ್ಟು ದಾಖಲೆ ಆಹಾರ ಧಾನ್ಯ ಉತ್ಪಾದನೆ ನಿರೀಕ್ಷೆ   

ನವದೆಹಲಿ: 2016–17ನೆ ಹಣಕಾಸು ವರ್ಷದಲ್ಲಿ ದೇಶದ ಆಹಾರ ಧಾನ್ಯ ಉತ್ಪಾದನೆ ದಾಖಲೆ ಎನ್ನಬಹುದಾದ 27.19 ಕೋಟಿ ಟನ್‌  ಆಗಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ.

2ವರ್ಷದ ನಂತರದ ಉತ್ತಮ ಮುಂಗಾರಿನಿಂದಾಗಿ ಕೃಷಿ ಉತ್ಪಾದನೆ ಹೆಚ್ಚಳಗೊಂಡಿದೆ. ಗೋಧಿ, ಅಕ್ಕಿ, ಬೇಳೆಕಾಳು, ಉರುಟು ಧಾನ್ಯ ಮತ್ತು ತೈಲ ಬೀಜಗಳ ಉತ್ಪಾದನೆಯು  ಈ ಹಿಂದಿನ ಉತ್ಪಾದನಾ ದಾಖಲೆ ಹಿಂದಿಕ್ಕಲಿದೆ ಎಂದು ಕೃಷಿ ಸಚಿವಾಲಯದ ಪರಿಷ್ಕೃತ ಅಂದಾಜಿನಲ್ಲಿ ತಿಳಿಸಲಾಗಿದೆ.ಉತ್ತಮ ಮಳೆ ಮತ್ತು  ಉತ್ತೇಜನಾ ಕ್ರಮಗಳಿಂದ ಈ ವರ್ಷ ಕೃಷಿ ಉತ್ಪಾದನೆ ಹೆಚ್ಚಳಗೊಳ್ಳಲಿದೆ ಎಂದು ಸಚಿವಾಲಯತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.