ADVERTISEMENT

ಗ್ರಾಮ ದೇವತೆಗೆ ಉಡಿ ತುಂಬಿದ ಭಕ್ತಾದಿಗಳು

​ಪ್ರಜಾವಾಣಿ ವಾರ್ತೆ
Published 26 ಮೇ 2015, 7:16 IST
Last Updated 26 ಮೇ 2015, 7:16 IST

ನರಗುಂದ: ತಾಲ್ಲೂಕಿನ ಕೊಣ್ಣೂರು ಗ್ರಾಮದಲ್ಲಿ  ಗ್ರಾಮ ದೇವತೆಯಾದ ಶ್ರೀ ದ್ಯಾಮವ್ವ ದೇವಿಗೆ  ಉಡಿ ತುಂಬುವ ಕಾರ್ಯಕ್ರಮ ಸಕಲ ವಾದ್ಯಮೇಳ ದೊಂದಿಗೆ ಸಂಭ್ರಮದಿಂದ ನಡೆಯಿತು.      

ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಬಂದು ದೇವಿಯ ದರ್ಶನ ಪಡೆದರು.  ಶಕ್ತಿ ದೇವತೆ  ದ್ಯಾಮವ್ವ ದೇವಿಗೆ ಗ್ರಾಮಸ್ಥರು ವಿಶೇಷವಾಗಿ  5 ವಾರಗಳ ದಿವಸ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಕೊನೆ ವಾರದಂದು ವಿಶೇಷವಾಗಿ ಉಡಿ ತುಂಬುವುದು ವಿಶೇಷ.
 
ನೂರಾರು  ಸುಮಂಗಲೆಯರು  ಆರತಿ ಮತ್ತು ಕುಂಭದೊಂದಿಗೆ ಸಮೀ ಪದ ಮಲಪ್ರಭೆ ನದಿಯಿಂದ ನೀರನ್ನು ತಂದು ವಿಶೇಷ ಪೂಜೆ ಹೂವಿನ ಅಲಂಕಾರದೊಂದಿಗೆ  ಪೂಜೆ ಸಲ್ಲಿಸಿದರು. ನಂತರ ಸಕಲ ವಾದ್ಯ ಮೇಳ ದೊಂದಿಗೆ ತೆರಳಿ ಉಡಿ ತುಂಬಿದರು. ಕರಿಸಿದ್ದೇಶ್ವರ ಡೊಳ್ಳಿನ ಮೇಳ, ಹುಲಿಗೆಮ್ಮನಗುಡಿ ಜಾಂಜ್‌ ಮೇಳ ಎಲ್ಲರ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.