ADVERTISEMENT

‘ಸಾರಿಗೆ ಅಭಿವೃದ್ಧಿಗೆ ಸಂಸ್ಥೆಯಿಂದ ₹120 ಕೋಟಿ’

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:21 IST
Last Updated 12 ಜುಲೈ 2017, 6:21 IST

ಜೊಯಿಡಾ (ದಾಂಡೇಲಿ): ‘ಉತ್ತರ ಕರ್ನಾಟಕದಲ್ಲಿ ಸಾರಿಗೆ ಅಭಿವೃದ್ಧಿಗೆ ₹ 120 ಕೋಟಿ ವಾಯವ್ಯ ಕರ್ನಾಟಕ ರಸ್ತೆ ಸಂಸ್ಥೆಯಿಂದ ವ್ಯಯಿಸಲಾಗಿದೆ. ಸಾರಿಗೆ ಸಂಸ್ಥೆಯಿಂದ ಶಿರಸಿ ವಿಭಾಗಕ್ಕೆ ಬರಲಿರುವ 67 ಬಸ್ಸುಗಳಲ್ಲಿ ಜೊಯಿಡಾಗೆ ಮೊದಲ ಆದ್ಯತೆ ನೀಡಲಾಗುತ್ತಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಜೊಯಿಡಾದಲ್ಲಿ ಸಾರಿಗೆ ಇಲಾಖೆಯಿಂದ ಜೊಯಿಡಾ ಕೇಂದ್ರಸ್ಥಾನದ ಬಸ್ ತಂಗುದಾಣ ವಿಸ್ತರಿಸುವ ಹಾಗೂ ಅಭಿವೃದ್ಧಿ ಕಾಮಗಾರಿಗೆ ಮಂಜೂರಿಯಾದ ₹ 1.50 ಕೋಟಿ  ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಂಗಳವಾರ ಮಾತನಾಡುತ್ತಿದ್ದರು.

‘ಈಗಾಗಲೇ ಹಳಿಯಾಳಕ್ಕೆ ₹ 4 ಕೋಟಿ, ದಾಂಡೇಲಿಗೆ ₹ 2.5 ಕೋಟಿ, ಭಟ್ಕಳಗೆ ₹ 11 ಕೋಟಿ, ಯಲ್ಲಾಪೂರಕ್ಕೆ ₹ 7.5 ಕೋಟಿ, ಸಿದ್ದಪುರಕ್ಕೆ ₹ 4 ಕೋಟಿ, ಶಿರಸಿಗೆ ₹ 11.5 ಕೋಟಿ, ಮುಂಡಗೋಡಗೆ ₹ 1 ಕೋಟಿ, ಹೊನ್ನಾವರಕ್ಕೆ ₹ 4 ಕೋಟಿ, ಕಾರವಾರಕ್ಕೆ ₹ 8 ಕೋಟಿ, ಅಂಕೋಲಾಕ್ಕೆ ₹ 8 ಕೋಟಿ ಹಣವನ್ನು ಸಚಿವ ಆರ್.ವಿ.ದೇಶಪಾಂಡೆಯವರ ಬೇಡಿಕೆಯ ಮೇರೆಗೆ ನೀಡಿದ್ದೇವೆ’ ಎಂದು ವಿವರ ನೀಡಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ರಾಜಧಾನಿ ಬೆಂಗಳೂರಿನಲ್ಲಿರುವ ಸೌಲಭ್ಯಗಳು ನಮ್ಮ ಜೊಯಿಡಾದ ಜನರು ಪಡೆಯುವಂತೆ ಮಾಡುವ ಗುರಿ ನಮ್ಮದು. ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಸಾರಿಗೆ ಸೇರಿದಂತೆ ಮೂಲಸೌಕರ್ಯದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ತಾಲ್ಲೂಕಿನಲ್ಲಿ ಗಮನಾರ್ಹ ಅಭಿವೃದ್ಧಿಯಾಗಿದೆ’ ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸಂದಾನಂದ ವಿ. ಡಂಗಣ್ಣನವರ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಮೇಶ ನಾಯ್ಕ, ಸಂಜಯ ಹಣಬರ್, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯ್ಕ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಬಿ.ನಾಯ್ಕ, ವಿಭಾಗೀಯ ನಿಯಂತ್ರಣಾಧಿಕಾರಿ ಎನ್.ನಾಗರಾಜ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮ್ಮಣ್ಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬಗಾರ, ಮಹಿಳಾ ಅಧ್ಯಕ್ಷೆ ಶುಭಾಂಗಿ ಗಾವಡಾ, ಸಂಸ್ಥೆಯ ನಿರ್ದೇಶಕ ಪ್ರಸನ್ನ ಗಾವಡಾ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನರ್ಮದಾ ಪಾಟ್ನೆಕರ್, ಉಪಾಧ್ಯಕ್ಷ ವಿಜಯ ಪಂಡಿತ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೈಲಾ ನಾಯ್ಕ, ಉಪಾಧ್ಯಕ್ಷ ಶ್ಯಾಮ ಪೊಕಳೆ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಅಲಂಕಜಾ ಮಂಥೆರೊ, ತಹಶೀಲ್ದಾರ್ ಟಿ.ಸಿ.ಹಾದಿಮನಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಹಾಲಮ್ಮನವರ ಉಪಸ್ಥಿತರಿದ್ದರು.

ನಿರಾಶ್ರಿತರ ಬೇಡಿಕೆ ನ್ಯಾಯಸಮ್ಮತ:  ‘ಗಣೇಶಗುಡಿಯಲ್ಲಿ ನಿರಾಶ್ರಿತರು ಉಪವಾಸ ಸತ್ಯಾಗ್ರಹ ಆರಂಭಿಸಿದ ಹಿನ್ನೆಲೆಯಲ್ಲಿ ಕೆ.ಪಿ.ಸಿ ಅಧಿಕಾರಿಗಳು ಬೆಂಗಳೂರಿನಲ್ಲಿ ನನ್ನ ಮಾರ್ಗದರ್ಶನದಲ್ಲಿ ಸಭೆ ನಡೆಸಿದ್ದಾರೆ. ನಿರಾಶ್ರಿತರ ಬೇಡಿಕೆ ನ್ಯಾಯ ಸಮ್ಮತವಾಗಿದೆ. ಸಮಸ್ಯೆ ಪರಿಹರಿಸಲು ಮೊದಲ ಆದ್ಯತೆ ನೀಡಲಾಗುತ್ತದೆ’ ಎಂದು ಸಚಿವ ಆರ್.ವಿ.ದೇಶಪಾಂಡೆ ಪತ್ರಕರ್ತರಿಗೆ ಈ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.