ADVERTISEMENT

‘ಹಳ್ಳಿಗಳಿಂದಲೇ ಭಾರತದ ವಿಕಾಸ’

ಪಾದಯಾತ್ರೆಯ ಮೂಲಕ ದೇಶ ಪರ್ಯಟನೆ ಮಾಡಿದ ಕೆದಿಲಾಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 8:39 IST
Last Updated 13 ಜುಲೈ 2017, 8:39 IST

ಪುತ್ತೂರು: ಪಾದಯಾತ್ರೆಯ ಮೂಲಕ ದೇಶ ಪರ್ಯಟನೆ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಚಾರಕ ಸೀತಾರಾಮ ಕೆದಿಲಾಯ ಅವರು, ಯಾತ್ರೆ ಪೂರ್ಣಗೊಳಿಸಿ ಬುಧವಾರ ಸ್ವಗ್ರಾಮ ಪುತ್ತೂರಿಗೆ ಹಿಂತಿರುಗಿದರು.

ನಗರದ ಹೊರವಲಯದಲ್ಲಿರುವ ಸಾಲ್ಮರದಲ್ಲಿರುವ ತಮ್ಮ ಮನೆಗೆ ತೆರಳಿ, ಮಧ್ಯಾಹ್ನ ಪುತ್ತೂರಿನ ಇತಿಹಾಸ ಪ್ರಸಿದ್ಧ  ಮಹಾಲಿಂಗೇಶ್ವರ ದೇವಾಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸಿದರು.

ಹುಟ್ಟೂರಿಗೆ ಬಂದಾಗ, ಇಲ್ಲಿನ ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದ ಪರಿ ಪಾಠ ಬೆಳೆಸಿಕೊಂಡಿದ್ದ  ಅವರು, ಮಹಾ ಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಭಾರತ ಪರ್ಯಟನಾ ಯಾತ್ರೆ ಆರಂಭಿಸಿದ್ದರು. ಇದೀಗ ಭಾರತ ಯಾತ್ರೆ ಪೂರ್ಣಗೊಳಿಸಿ ಮತ್ತೆ ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಬಂದಿದ್ದರು.

ADVERTISEMENT

ದೇವಾಲಯ ಭೇಟಿಯ ವೇಳೆ ಸುದ್ದಿ ಗಾರರ ಜತೆ ಮಾತನಾಡಿದ ಸೀತಾರಾಮ ಕೆದಿಲಾಯ, ತಮ್ಮ ಅನುಭವ ಜನ್ಯ ವಿಚಾರಗಳನ್ನು, ದೇಶ ಪರ್ಯಟನೆಯ ವೇಳೆ ತಾವು ಕಂಡುಕೊಂಡ ವಾಸ್ತವ ವನ್ನು ತೆರೆದಿಟ್ಟರು.

ಹಳ್ಳಿಗಳಿಂದಲೇ ಭಾರತದ ವಿಕಾಸ. ಯೋಗದಿಂದ ಆರೋಗ್ಯದ ವಿಕಾಸ ಎನ್ನುವ ಈ ಎರಡೂ ಸತ್ಯಗಳಿಗೆ ಹೊರತಾಗಿ ಬೇರೆ ವಿಚಾರಗಳಿಲ್ಲ. ಭಾರತದ ಆತ್ಮ, ಅಂತಃಸತ್ವ ಹಳ್ಳಿಗಳಲ್ಲಿದೆ. ಈ ಕಾರಣದಿಂದಾಗಿ ಭಾರತ ತನ್ನ ಸತ್ವವನ್ನು ಕಳೆದುಕೊಂಡಿಲ್ಲ. ಭಾರತ ಭಾರತವಾ ಗಿಯೇ ಉಳಿದಿದೆ. ಭಾರತ ಬದಲಾಗಿದೆ ಎಂಬುದು ಅಸಮ್ಮತ. ಭಾರತ ತನ್ನ ಮೂಲ ಆಶಯವನ್ನು ಉಳಿಸಿಕೊಂಡಿದೆ. ಹಳ್ಳಿಗಳ ಮೂಲಕ ತನ್ನ ನೈಜತೆಯನ್ನು ಬೆಳೆಸುತ್ತಿದೆ ಎಂದು ತಿಳಿಸಿದರು.

ಭಾರತದ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಸ್ವದೇಶಿ ಕಲ್ಪನೆ ಜಾಗೃತವಾ ಗಿದೆ. ಇದರ ಜತೆಗೆ ಪರಿಸರ ಪ್ರೀತಿ, ಪ್ರಕೃ ತಿಯ ಆರಾಧನೆ ಇಂದಿಗೂ ಉಳಿದು ಕೊಂಡಿದೆ. ವಿದೇಶಿ ಅನುಕರಣೆಯ ಜೀವನ ಪದ್ಧತಿ ಅತ್ಯಂತ ಅಪಾಯಕಾರಿಯಾಗಿದೆ.

ರೋಗರುಜಿನಗಳಿಗೆ ಮೂಲವೇ ವಿದೇಶಿ ಜೀವನ ಪದ್ಧತಿ. ಅಮೆರಿಕ ಮುಂದುವರಿದ ರಾಷ್ಟ್ರ ಎಂದು ಬಿಂಬಿತವಾಗಿದ್ದರೂ, ಆ ದೇಶದಲ್ಲಿ ಭೀಕರ ರೋಗರುಜಿನಗಳಿವೆ. ಗರಿಷ್ಠ ಆತ್ಮ ಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ. ಭೋಗ ಜೀವನ ಮನುಷ್ಯನನ್ನು ರೋಗ ದೆಡೆಗೆ ಕರೆದೊಯ್ಯುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಪ್ರಚಾರಕ ಕೃಷ್ಣ ಪ್ರಸಾದ್, ಮಂಗಳೂರು ವಿಭಾಗ ಕಾರ್ಯಕಾರಿಣಿ ಸದಸ್ಯ ಅಚ್ಯುತ್‌ ನಾಯಕ್, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ.ಎಸ್. ಸುಧಾ ರಾವ್, ಆರ್‍ಎಸ್‍ಎಸ್ ಪ್ರಮುಖ ಸೂರ್ಯನಾರಾಯಣ ರಾವ್ ಶಿಶಿಲ ಇದ್ದರು.

***

‘ಮುಖ್ಯಮಂತ್ರಿಗೆ ಪತ್ರ’
ದೇಶದ 25 ರಾಜ್ಯಗಳನ್ನು ಸುತ್ತಿ ಬಂದು, ಕಂಡುಕೊಂಡ ಉತ್ತಮ ಅಂಶಗಳನ್ನು ರಾಜ್ಯದಲ್ಲಿ ಅನು ಷ್ಠಾನಗೊಳಿಸುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಮೂಲಕ ತಿಳಿಸಿದ್ದೇನೆ ಎಂದ ಸೀತಾರಾಮ ಕೆದಿಲಾಯ ಹೇಳಿದರು.

‘ನನ್ನ ಅಭಿಯಾನ ಕೇವಲ ಸೀತಾರಾಮ ಕೆದಿಲಾಯರ ಅಭಿ ಯಾನವಲ್ಲ. ಬದಲಾಗಿ ಭಾರತವೇ ಭಾರತವನ್ನು ಸುತ್ತಿದೆ ಎಂದ ಅವರು, ವಿದೇಶಿ ಶಿಕ್ಷಣ ಪದ್ಧತಿಯ ಪರಿಣಾಮ ಸಮಾಜ ದಿಕ್ಕು ತಪ್ಪಲು ಕಾರಣವಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.