ADVERTISEMENT

‘ಕಾಯಕಕ್ಕೆ ಗೌರವ ತಂದ ಶರಣರು’

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 11:33 IST
Last Updated 13 ಜುಲೈ 2017, 11:33 IST

ಹುನಗುಂದ: ‘ಬಸವಾದಿ ಶರಣರು ಲೌಕಿಕ ಬದುಕಿನಲ್ಲಿ ಉತ್ತಮ ಸಂಸ್ಕಾರದ ನೆಲೆಯನ್ನು ಹಾಕಿದರು. ಶರಣ ತತ್ವದ ಹಾದಿಯಲ್ಲಿ ನಡೆದರೆ ಸ್ವಸ್ಥ ಬದುಕನ್ನು ಸಾಗಿಸಬಹುದು. ಜ್ಞಾನ ಮತ್ತು ಕಾಯಕ ತತ್ವವನ್ನು ತೋರಿದ ಶರಣರ ವಚನಗಳು ಸುಖ ಜೀವನಕ್ಕೆ ಅಡಿಪಾಯವಾಗಿವೆ’ ಎಂದು ಶಶಿಧರ ಕರವೀರಶೆಟ್ಟರ ಹೇಳಿದರು.

ಇಲ್ಲಿನ ಬಸವ ಮಂಟಪದಲ್ಲಿ ಈಚೆಗೆ ನಡೆದ 466ನೇ ಶಿವಾನುಭವದಲ್ಲಿ ಮಾತನಾಡಿ, ‘ಅರಿವಿಗೆ ಉತ್ತಮ ಆಚಾರ ಸಹಕಾರಿಯಾಗಬೇಕು. ಕೌಟುಂಬಿಕ ಬದುಕನ್ನು ಮಾಡುತ್ತಲೇ ಉತ್ತಮ ಶರಣ ಸಾಧನೆ ಮಾಡಬಹುದು. ವಚನಗಳು ವೈದಿಕತೆ ಹಾಗೂ ಮೌಢ್ಯಗಳನ್ನು ವಿರೋಧಿಸುತ್ತ ವೈಚಾರಿಕ ಬೆಳಕನ್ನು ತೋರಿದವು. ಕಾಯಕಕ್ಕೆ ಗೌರವನ್ನು ಶರಣರು ತಂದರು. ಉತ್ತಮ ಚಿಂತನೆಯಿಂದ ಕೂಡಿದ ಬಾಳಿನ ಪಥ ನಮ್ಮದಾಗಬೇಕು’ ಎಂದರು.

  ಡಾ.ಮಹಾಂತ ಸ್ವಾಮೀಜಿ ಸಾನ್ನಿಧ್ಯ, ಡಾ.ಬಸವಲಿಂಗ ಸ್ವಾಮೀಜಿ ನೇತೃತ್ವ ಮತ್ತು ಗುರುಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮುರಳಿಧರ ದೇಶಪಾಂಡೆ, ಮುತ್ತಣ್ಣ ಡಂಬಳ, ಬಸವರಾಜ ಜಮಾದಾರ, ಶಿವಪುತ್ರಪ್ಪ ಹುನಗುಂದ, ಮೊಹಮ್ಮದಸಾಬ್ ಆದವಾನಿ, ವೆಂಕಣ್ಣ ದಾದ್ಮಿ ಮತ್ತು ಮುದಿಯಪ್ಪ ಅಂಬಿಗೇರ ಇದ್ದರು. ಇದೇ ಸಂದರ್ಭದಲ್ಲಿ ಅನೇಕ ಸಾಧಕರನ್ನು ಸತ್ಕರಿಸಲಾಯಿತು.

ADVERTISEMENT

  ಮುಂಜಾನೆ 6 ನೇ ವಾರ್ಡಿನಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಜನಜಾಗೃತಿ ಜಾಥಾ ನಡೆಯಿತು. ದೇವು ಡಂಬಳ ಸ್ವಾಗತಿಸಿದರು. ಎಸ್.ಜಿ.ಎಮ್ಮಿ ನಿರೂಪಿಸಿದರು. ಶೃತಿ ಅಂಗಡಿ ಪ್ರಾರ್ಥಿಸಿದರು. ಮೌನೇಶ ಕಮ್ಮಾರ ವಂದಿಸಿದರು. ಸರಸ್ವತಿ, ಸವಿತಾ, ಭಾಗ್ಯ ಕಮ್ಮಾರ, ಚೈತ್ರಾ ಸಂಗಡಿಗರಿಂದ ವಚನ ನೃತ್ಯ ಪ್ರದರ್ಶನ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.