ADVERTISEMENT

ಪರೀಕ್ಷೆಗೆ ಬಂತು ‘ವಿಶೇಷ’ ಕಾಳಜಿ!

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಗಮನ ಸೆಳೆದ ಅನವಾಲ ಶಾಲೆ ಶಿಕ್ಷಕರ ಕಾರ್ಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 12:13 IST
Last Updated 11 ಮಾರ್ಚ್ 2017, 12:13 IST
ಕಲಾದಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಸಮೀಪದ ಅನವಾಲ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರು ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮ ಗಮನ ಸೆಳೆದಿದೆ.
 
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಕಳೆದ ಜ. 16ರಿಂದ ‘ರಾತ್ರಿ ಶಾಲೆ’ ಆರಂಭಿಸಿರುವ ಶಾಲೆಯ ಶಿಕ್ಷಕರು, ಮಕ್ಕಳಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ.
 
ವಿಶೇಷ ತರಬೇತಿ: ಒಂದು ವಿಷಯವನ್ನು ಓದಿದ ನಂತರ ಹೇಗೆ ಪರೀಕ್ಷೆಯಲ್ಲಿ ಉತ್ತರಿಸಬೇಕು, ಉತ್ತರ ಬರೆಯುವ ಸಂದರ್ಭದಲ್ಲಿ ಸಮಯದ ನಿರ್ವಹಣೆ ಹೇಗೆ ಇವೇ ಮುಂತಾದ  ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾರ್ಗದರ್ಶನ ನೀಡುತ್ತಿದ್ದಾರೆ. 
 
‘ಕಳೆದ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಜೊತೆಗೆ ಪುನರಾವಲೋಕನ ಮಾಡಿಸಲು ಒತ್ತು ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಲು ಸಾಧ್ಯವಾಗಲಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಎ.ಎನ್.ಪೊಲೇಸಿ ಹೇಳಿದರು. 
 
ಶಾಲಾ ಅವಧಿ ನಂತರವಷ್ಟೇ ಈ ‘ರಾತ್ರಿ ಶಾಲೆ’ ನಡೆಯುತ್ತದೆ. ಸಂಜೆ 6ರಿಂದ 9ರ ವರೆಗೆ ವಿಶೇಷ ತರಗತಿಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳಲ್ಲಿನ ಒತ್ತಡ ನಿವಾರಣೆಗಾಗಿ ಒಂದು ಗಂಟೆ ಕಾಲ ಯೋಗಾಸನವನ್ನೂ ಮಾಡಿಸಲಾಗುತ್ತಿದೆ. ಒಟ್ಟು 48 ಜನ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, 9 ಜನ ಶಿಕ್ಷಕರು ಮಾರ್ಗದರ್ಶನದಲ್ಲಿ ನಿರತರಾಗಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.