ADVERTISEMENT

ವಿವಿಧ ಸೌಲಭ್ಯ: ಫಲಾನುಭವಿಗಳ ಆಯ್ಕೆ

ಬನಹಟ್ಟಿ ನಗರಸಭೆ ವಿಶೇಷ ಸಾಮಾನ್ಯ ಸಭೆ: ಶೌಚಾಲಯ ನಿರ್ಮಾಣ ಕುರಿತು ಗಂಭೀರ ಚರ್ಚೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 10:47 IST
Last Updated 5 ಜನವರಿ 2017, 10:47 IST

ಬನಹಟ್ಟಿ: ಪ್ರಸ್ತುತ ಸಾಲಿನ ರಾಜ್ಯ ಹಣಕಾಸು ಯೋಜನೆಯಡಿ ಹಾಗೂ ನಗರಸಭೆ ನಿಧಿ ಅನುದಾನದ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅಂಗವಿಕಲರಿಗೆ ಸಂಬಂಧಿಸಿದಂತೆ ಅರ್ಹ ಫಲಾನುಭವಿಗಳ ಆಯ್ಕೆ ಪಟ್ಟಿಯ ಸಂಬಂಧ ಮಂಗಳವಾರ ಕರೆದಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ಸಭೆ ಸಹಮತದ ನಿರ್ಣಯಕ್ಕೆ ಬಂದಿತು.

ಪರಿಶಿಷ್ಟ ಜಾತಿಗೆ ಸಂಬಂಧಿಸಿದ ಫಲಾನುಭವಿಗಳಲ್ಲಿ ಅನಿಲ ಸಂಪರ್ಕಕ್ಕೆ 205 ಫಲಾನುಭವಿಗಳು ಅರ್ಹರಿದ್ದು, ಅದರಲ್ಲಿ ಕೇವಲ 130 ಜನರನ್ನು ಆಯ್ಕೆ ಮಾಡಬೇಕಾಗಿತ್ತು.

ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ವಾದ ಮಾಡಿ, ಫಲಾನುಭವಿಗಳ ಪಟ್ಟಿಯಲ್ಲಿ ನಾವು ತಿಳಿಸಿದ ಫಲಾನುಭವಿಗಳ ಹೆಸರುಗಳನ್ನು ಕೈ ಬಿಟ್ಟಿದ್ದೀರಿ ಎಂದು ಆರೋಪಿಸಿದರು.

ನಗರಸಭಾ ಅಧ್ಯಕ್ಷೆ ರಮೀಜಾ ಝಾರೆ ಮಾತನಾಡಿ, ಅರ್ಹ ಫಲಾನುಭವಿಗಳಿದ್ದಲ್ಲಿ ಬದಲಾವಣೆ ಮಾಡಿ ಅರ್ಹರನ್ನು ಸೇರಿಸಲಾಗುವುದು ಎೆಂದು ತಿಳಿಸಿದರು. ಪರಿಶಿಷ್ಟ ಪಂಗಡದವರಿಗೆ ಅಲಮೇರಾ ವಿತರಣೆಗೆ ಸಂಬಂಧ ಒಟ್ಟು 34 ಅರ್ಹರ ಪೈಕಿ 28 ಜನರನ್ನು ಆಯ್ಕೆ ಮಾಡಲಾಯಿತು. ಪರಿಶಿಷ್ಟ ಪಂಗಡಕ್ಕೆ ಸಂಬಂಧಸಿದಂತೆ 58 ಆಯ್ಕೆದಾರರ ಪೈಕಿ ಕೇವಲ 42 ಫಲಾನುಭವಿಗಳು ಮಾತ್ರ ಅರ್ಹರಿದ್ದರು.

ಅದರಂತೆ ಅಂಗವಿಕಲರಿಗೆ ಸೌರದೀಪ ನೀಡುವ ಸಂಬಂಧ  58 ಜನರಿದ್ದು, ಇದರಲ್ಲಿ 29 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಸಣ್ಣ ಉದ್ದಿಮೆಗೆ ಸಂಬಂಧ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆರು ಜನರು ಅರ್ಹರಿದ್ದು ಕೇವಲ ಒಬ್ಬ ಪಲಾನುಭವಿಯನ್ನು ಆಯ್ಕೆ ಮಾಡುವಲ್ಲಿ ಸಮಸ್ಯೆ ಉಂಟಾಯಿತು. ಹಿಂದುಳಿದ ವರ್ಗದವರಿಗೆ ಶೌಚಾಲಯ ಕಟ್ಟಿಸಿಕೊಳ್ಳುವ ಸಂಬಂಧ 14 ಜನರನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ ಕೇವಲ ಏಳು ಫಲಾನುಭವಿಗಳು ಅರ್ಹರಿದ್ದರು. ಶೌಚಾಲಯಕ್ಕೆ ಸಂಬಂಧ ಆಯ್ಕೆಯಾದರಿಗೆ ಕೂಡಲೇ ಆದ್ಯತೆ ನೀಡಿ, ನಿರ್ಮಾಣಕ್ಕೆ ಅವಕಾಶ ನೀಡಬೇಕೆಂದು ಸದಸ್ಯ ಚಿದಾನಂದ ಮಟ್ಟಿಕಲ್ಲಿ ತಿಳಿಸಿದರು.

ಶೌಚಾಲಯ ನಿರ್ಮಾಣ ಸಂಬಂಧ ಇನ್ನಷ್ಟು ಕುಟುಂಬಗಳು ಇದರ ಪ್ರಯೋಜನ ಪಡೆಯಬೇಕಾಗಿತ್ತು ಎಂಬ ವಿಷಯ ಸಭೆಯಲ್ಲಿ ಚರ್ಚೆಯಾಯಿತು. ಸಭೆಯ ವೇದಿಕೆಯ ಮೇಲೆ ಅಧ್ಯಕ್ಷೆ ರಮೀಜಾ ಝಾರೆ ಮತ್ತು ಉಪಾಧ್ಯಕ್ಷ ಸಂಜಯ ಜೀರಗಾಳ ಇದ್ದರು.

ಸಭೆಯಲ್ಲಿ ನಶೀಮ ಮೊಕಾಶಿ, ವಾಸುದೇವ ಕೋಪರ್ಡೆ, ಕಣೆಪ್ಪ ಹಾರುಗೇರಿ, ಈಶ್ವರ ನಾಗರಾಳ, ಭೂಪಾಲ್ ವಿರೋಜಿ, ಬಸವರಾಜ ಶಿರೋಳ, ಎಸ್.ಕೆ. ಮುಲ್ಲಾ, ಲಲಿತಾ ಪಾತ್ರೋಟ, ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು. ಎಂಜಿನಿಯರ್‌ ಎಸ್.ಎಸ್. ಹೇರಲಗಿ ಸ್ವಾಗತಿಸಿದರು. ಅಶೋಕ ಗುಡಿಮನಿ ನಿರೂಪಿಸಿದರು. ಆಕಾಶ ಬಾರಿಗಿಡದ ವಂದಿಸಿದರು. ಸಹಕಾರ ಹಾಗೂ ಸಕ್ಕರೆ ಸಚಿವ ಎಚ್.ಎಸ್. ಮಹಾದೇವ ಪ್ರಸಾದ ನಿಧನಕ್ಕೆ ಒಂದು ನಿಮಿಷ ಮೌನಾಚರಣೆಯೊಂದಿಗೆ ಸಂತಾಪ ಸೂಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.