ADVERTISEMENT

ಕೊಟ್ಟೂರು ನಿಲ್ದಾಣಕ್ಕೆ ಬೇಕಿದೆ ಸೌಕರ್ಯ!

ವಿದ್ಯಾರ್ಥಿಗಳು, ರೈತರು, ಕೂಲಿ ಕಾರ್ಮಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 5:44 IST
Last Updated 12 ಜನವರಿ 2017, 5:44 IST
ಕೊಟ್ಟೂರು: ನಿತ್ಯ 200ಕ್ಕೂ ಹೆಚ್ಚು ಬಸ್‌ಗಳು ತಂಗುವ ನಿಲ್ದಾಣ, ಸಾವಿರಾರು ಪ್ರಯಾಣಿಕರು ಬರುವ ಇಲ್ಲಿನ ನಿಲ್ದಾ ಣವು ಸೌಕರ್ಯಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದೆ.  
 
 ಪ್ರಮುಖವಾಗಿ ವಾಣಿಜ್ಯ, ಶೈಕ್ಷಣಿಕ ಹಾಗೂ ಧಾರ್ಮಿಕ ಪ್ರಸಿದ್ಧ ಕೇಂದ್ರವಾ ಗಿರುವ ಕೊಟ್ಟೂರಿಗೆ ಸುತ್ತಲಿನ ಗ್ರಾಮಾಂ ತರ ಪ್ರದೇಶಗಳಿಂದ  ವಿದ್ಯಾರ್ಥಿಗಳು, ರೈತರು ಹಾಗೂ ಕೂಲಿ ಕಾರ್ಮಿಕರು ಬಸ್‌ ನಿಲ್ದಾಣದಲ್ಲಿ ಮೂಲ ಸೌಕರ್ಯಗಳಿಲ್ಲದೆ  ಪರಿ ತಪಿಸುವಂತಾಗಿದೆ.
 
ಪಟ್ಟಣದ ಮಧ್ಯಭಾಗದ ನಿಲ್ದಾಣಕ್ಕೆ ಕೂಡ್ಲಿಗಿ ಹಾಗೂ ಬೇರೆ ಡಿಪೊಗಳಿಂದ ವಿವಿಧ ಊರುಗಳಿಗೆ ಬಸ್‌ ಸಂಚರಿ ಸುತ್ತವೆ.  ನಿಲ್ದಾಣವು ಅತ್ಯಂತ ಕಿರಿದಾದ ಪ್ರದೇಶದಲ್ಲಿದ್ದು,  ನಿಲುಗಡೆಗೆ ಸ್ಥಳಾವಕಾಶದ ಕೊರತೆಯಿದೆ. 
 
ನಿಲ್ದಾಣದ ಜಾಗವು ಮುಖ್ಯ ರಸ್ತೆಗಿಂತಲೂ ತಗ್ಗು ಪ್ರದೇಶದಲ್ಲಿರು ವು ದರಿಂದ ಮಳೆಗಾಲದಲ್ಲಿ ಕೊಳಚೆ ನೀರು ನುಗ್ಗಿ ಪ್ರಯಾಣಿಕರಿಗೆ ಅಸಹನೀ ಯವಾ ಗುತ್ತದೆ ಎನ್ನುತ್ತಾರೆ ಪ್ರಯಾಣಿಕರು. 
 
ನಿಲ್ದಾಣದಲ್ಲಿ ಕುಡಿವ ನೀರಿನ ಸೌಲಭ್ಯವೂ ಇಲ್ಲ. ಮಹಿಳೆಗೆ ವಿಶ್ರಾಂತಿ ಪಡೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲ. ಶೌಚಾಲಯ ನಿರ್ವಹಣೆ ಸರಿಯಿ ಲ್ಲದ ಕಾರಣ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಇನ್ನು ಎಲ್ಲೆಂದರಲ್ಲಿ ಹಂದಿ, ಬಿಡಾಡಿ ದನಕರು ಹಾವಳಿ ಹೆಚ್ಚಿದೆ.  
 
ದ್ವಿಚಕ್ರ ವಾಹನಗಳನ್ನು ಆವರಣ ದೊಳಗಡೆ ಅಡ್ಡಾದಿಡ್ಡಿ ನಿಲ್ಲಿಸುವು ದರಿಂದ ಪ್ರಯಾಣಿಕರಿಗೆ ತೊಂದರೆಯಾ ಗಿದೆ. ನಿಲ್ದಾಣದ ಕಾಂಪೌಂಡಿಗೆ ಬೀಡಾ ಅಂಗಡಿ ಹಾಗೂ ಇತರೆ ವ್ಯಾಪಾರಿಗಳು ಆವರಿಸಿರುವುದರಿಂದ ಬಸ್‌ ನಿಲ್ದಾಣವೇ ಕಾಣದಂತಾಗಿದೆ. 
 
ಈ ಕುರಿತು  ಕೂಡ್ಲಿಗಿ ಡಿಪೋ ವ್ಯವಸ್ಥಾಪಕ  ಪ್ರದೀಪ್ ಕುಮಾರ ಮಾತ ನಾಡಿ, ನಿಲ್ದಾಣದ ಮುಂದಿರುವ ಕಾಲುವೆಯಲ್ಲಿ  ತ್ಯಾಜ್ಯ ತೆಗೆಸುವಂತೆ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
 
ವಾಹನ ದಟ್ಟಣೆ, ಮೂಲಸೌಕರ್ಯ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಸಂಚಾರಿ ನಿಯಂತ್ರಕ ಜಹಾಂಗೀರ್ ತಿಳಿಸಿದರು. ಸಕಾಲಕ್ಕೆ ಬಸ್‌ಗಳನ್ನು ಬಿಡದಿರು ವುದರಿಂದ ತರಗತಿಗೆ ಹಾಜರಾಗಲು ಹಾಗೂ ಸಂಜೆ ಊರು ಸೇರಲು ತಡ ವಾಗುತ್ತದೆ. ಬಸ್‌ಗಳ ಕೊರತೆಯಿಂದ ಬಿಡುವ ಒಂದು ಬಸ್‌ನಲ್ಲಿಯೇ ನೂರಾರು ವಿದ್ಯಾರ್ಥಿಗಳು ಕಷ್ಟಪಟ್ಟು ಊರು ಸೇರಬೇಕಾಗಿದೆ ಎಂದು ಗುಣ ಸಾಗರ ಗ್ರಾಮದ ವಿದ್ಯಾರ್ಥಿಗಳಾದ ಮನೋಜ್‌, ಕುರಿಹಟ್ಟಿ ಇಂದ್ರೇಶ್ ನೋವು ತೋಡಿಕೊಂಡರು.
 
ಅವೈಜ್ಞಾನಿಕವಾಗಿ ನಿಲ್ದಾಣ ನಿರ್ಮಾಣವಾಗಿದೆ. ಭವಿಷ್ಯದ ದೃಷ್ಟಿ ಯಿಂದ ನಿಲ್ದಾಣವನ್ನು ಪಟ್ಟಣದ ಹೊರ ವಲಯದ ವಿಶಾಲವಾದ ಪ್ರದೇಶದಲ್ಲಿ ಸುಸಜ್ಜಿತವಾಗಿ ನಿರ್ಮಿಸಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು ಕೂಡಲೇ ತಮ್ಮ ಇಚ್ಛಾಶಕ್ತಿ ಪ್ರರ್ದಶಿಸಬೇಕು ಎಂದು ಸಮಾಜ ಸೇವಕ ಮುಖೇಶ್‌ ವಿ.ಟಿ.ಶೆಟ್ಟರ್‌ ಸಲಹೆ ನೀಡುತ್ತಾರೆ.
 
**
-ಎಸ್‌.ಎಂ.ಗುರುಪ್ರಸಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.