ADVERTISEMENT

ಕೊಟ್ಟೂರು ಸ್ವಾಮಿ ಜಾತ್ರೆಗೆ ಸಕಲ ಸಿದ್ಧತೆ..

ಅತಿಕ್ರಮಣ ತೆರವಿನಿಂದ ವಿಶಾಲವಾದ ರಥಬೀದಿ; ವಿವಿಧೆಡೆಗಳಿಂದ ಬರುವ ಪಾದಯಾತ್ರಿಕರಿಗೆ ವೈದ್ಯಕೀಯ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 7:01 IST
Last Updated 20 ಫೆಬ್ರುವರಿ 2017, 7:01 IST

ಕೊಟ್ಟೂರು: ಇಲ್ಲಿಯ ಸುಪ್ರಸಿದ್ಧ ಕೊಟ್ಟೂ ರೇಶ್ವರ ಜಾತ್ರೆ ಇದೇ ಮಂಗಳವಾರ ನಡೆಯಲಿದೆ. ರಾಜ್ಯದ ಎಲ್ಲಡೆಯಿಂದ ಬರುವ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಸ್ಧಳೀಯ ಆಡಳಿತ ಬಿರುಸಿನ ಸಿದ್ಧತೆ ನಡೆಸಿದೆ.

ಜಾತ್ರೆಗೆ ಬರುವ ಭಕ್ತರಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು , ಬೀದಿ ದೀಪಗಳ ದುರಸ್ಧಿ ಕಾರ್ಯ ನಡೆದಿದ್ದು ಹಾಗೂ ರಥ ಬೀದಿಯು  ಸಜ್ಜುಗೊಳ್ಳು ತ್ತಿದೆ. ಪಟ್ಟಣದ ರಸ್ತೆಗಳನ್ನು ದುರಸ್ತಿ ಪಡೆಸುವುದು, ತ್ಯಾಜ್ಯ ವಿಲೇವಾರಿ, ರಸ್ತೆಗಳಿಗೆ ನೀರು ಸಿಂಪಡಿಸುವುದು ಸೇರಿ ದಂತೆ ಅಗತ್ಯ ಸೌಲಭ್ಯಗಳ ಕಾರ್ಯಗಳು ನಡೆಯುತ್ತಿವೆ ಎಂದು ಪ.ಪಂ. ಮುಖ್ಯಾ ಧಿಕಾರಿ ಎಚ್.ಎಫ್‌.ಬಿದರಿ ತಿಳಿಸಿದ್ದಾರೆ.

ವಿಶೇಷ ಸಾರಿಗೆ ವ್ಯವಸ್ಧೆ: ಬಳ್ಳಾರಿ, ಹೊಸಪೇಟೆ, ದಾವಣಗೆರೆ, ಹಡಗಲಿ, ಚಿತ್ರದುರ್ಗ ಮುಂತಾದ ಪಟ್ಟಣಗಳಿಂದ ಜಾತ್ರಾ ವಿಶೇಷ ಬಸ್‌ಗಳ ಸೌಲಭ್ಯ ಕಲ್ಪಿಸ ಲಾಗಿದೆ. ಪಟ್ಟಣದ ಹೊರಗೆ ತಾತ್ಕಾಲಿಕ ವಾಗಿ ಬಸ್‌ ನಿಲ್ದಾಣವನ್ನು ನಿರ್ಮಿಸಲಾ ಗಿದೆ ಎಂದು ಕೂಡ್ಲಿಗಿ ಡಿಪೋ ವ್ಯವ ಸ್ಧಾಪಕರು ತಿಳಿಸಿದ್ದಾರೆ.
ವೈದ್ಯಕೀಯ ಸೌಲಭ್ಯ: ಲಕ್ಷಾಂತರ ಸಂಖ್ಯೆ ಯಲ್ಲಿ ಭಕ್ತರು ಸೇರುವುದರಿಂದ ಯಾವುದೇ ಸಾಂಕ್ರಾಮಿಕ ರೋಗಗಳ ಭೀತಿ ಹರಡದಂತೆ ನೈರ್ಮಲ್ಯ ಹಾಗೂ ಜನಾರೋಗ್ಯ ಕಾಪಾಡಲು ತಾತ್ಕಾಲಿಕ ಆಸ್ಪತ್ರೆ ಹಾಗೂ ಪಾದಯಾತ್ರೆಯಲ್ಲಿ ಬರುವ ಭಕ್ತರಿಗೆ ಎಲ್ಲ ಮುಖ್ಯರಸ್ತೆಗಳ ದ್ವಾರದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದಿದ್ದು, ಔಷಧೋಪಚಾರಕ್ಕೆ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ವೈದ್ಯಾಧಿಕಾರಿ ವಿವರಿಸಿದರು.

ಬಂದೋಬಸ್ತ್‌: ಅಗತ್ಯ ಸಿಬ್ಬಂದಿ ಯೊಂದಿಗೆ ಸೂಕ್ತ ರಕ್ಷಣೆಗೆ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಆಯ್ದ ಪ್ರದೇಶ ಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸುವ ಮೂಲಕ ಅಗತ್ಯವಿರುವ ಮುಂಜಾಗ್ರತ ಕ್ರಮ ಕೈಗೊಂಡಿದ್ದೇವೆ ಎಂದು ಸಿ.ಪಿ.ಐ. ಲಾಲ್ಯಾ ನಾಯ್ಕ್‌ ತಿಳಿಸಿದ್ದಾರೆ.

ವಸ್ತು ಪ್ರದರ್ಶನ: ರೇಷ್ಮೆ , ಕೃಷಿ , ಕೈ ಮಗ್ಗ ಮುಂತಾದ ವಿವಿಧ ಇಲಾಖೆಗಳ ವತಿಯಿಂದ ವಸ್ತು ಪ್ರದರ್ಶನ ಮಳಿಗೆ , ಅಂಗಡಿ ಮುಂಗಟ್ಟು , ಸರ್ಕಸ್‌,  ನಾಟಕ ಕಂಪನಿ ಪ್ರದರ್ಶನಕ್ಕೆ ಸಜ್ಜುಗೊಂಡಿವೆ.

ಪಟ್ಟಣಕ್ಕೆ ಪ್ರವೇಶವಾಗುವ ಮುಖ್ಯ ರಸ್ತೆಗಳಲ್ಲಿ ವರ್ತಕರ ಸಂಘ, ಜೆ.ಸಿ.ಐ, ವಿವಿಧ ಸಂಘ, ಸಂಸ್ಧೆ ಹಾಗೂ ಔಷಧಿ ವ್ಯಾಪಾರಿಗಳ ಸಂಘ ಔಷಧಿ, ಎಳೆನೀರು, ಮಜ್ಜಿಗೆ, ಪಾನಕ, ಲಘು–ಉಪಹಾರಗಳ ಸೇವೆಗೆ ಸಿದ್ಧರಾಗಿದ್ದಾರೆ. ವಿದ್ಯಾರ್ಥಿಗಳು ಪಾದಯಾತ್ರಿಗಳ ಸೇವೆ ಸಲ್ಲಿಸುವ ಮೂಲಕ ಭಕ್ತಿ ಅರ್ಪಿಸಲಿದ್ದಾರೆ. ಬಾಳೆ ಕಂಬ, ತಳಿರು ತೋರಣಗಳಿಂದ ಪಟ್ಟಣ ಅಲಂಕೃತಗೊಂಡಿದೆ.

ಅತಿಕ್ರಮಣ ತೆರವು
ಕೊಟ್ಟೂರು:
ಬಹು ವರ್ಷಗಳಿಂದ ಪಟ್ಟಣದ ರಥ ಬೀದಿ ಅತಿಕ್ರಮಿಸಿ ಕೊಂಡ ಗೂಡಂಗಡಿ, ಹೋಟೆಲ್‌ ಹಾಗೂ ವೆಲ್ಡಿಂಗ್ ಶಾಪ್‌ಗಳು ಮುಂತಾದ ಅಂಗಡಿ ಮುಂಗಟ್ಟು ಗಳನ್ನು ಭಾನುವಾರ ಜೆಸಿಬಿ ಯಂತ್ರದ ಮೂಲಕ ಪಟ್ಟಣ ಪಂಚಾಯ್ತಿ ತೆರವುಗೊಳಿಸಲು ಮುಂದಾಯಿತು.

ರಥೋತ್ಸವದ ಪೂರ್ವಭಾವಿ ಸಭೆ ಯಲ್ಲಿ ಈ ವಿಷಯ ಚರ್ಚೆಗೆ ಗ್ರಾಸವಾ ಗಿತ್ತು ಹಾಗಾಗಿ ಪಟ್ಟಣ ಪಂಚಾಯ್ತಿ ಈ ಎಲ್ಲಾ ಅಂಗಡಿ ಮುಂಗಟ್ಟು ಮಾಲೀಕ ರಿಗೆ ತೆರವುಗೊಳಿಸಲು ಸೂಚಿಸಿದರೂ ಕೆಲವು ಮಾಲೀಕರು ತೆರವು ಗೊಳಿಸದ ಕಾರಣ ಅನಿವಾರ್ಯವಾಗಿ ಮುಖ್ಯಾಧಿ ಕಾರಿಗಳ ನೇತೃತ್ವದಲ್ಲಿ ಪ.ಪಂ ಸಿಬ್ಬಂದಿ  ತೆರವುಗೊಳಿಸುವ ಕಾರ್ಯಚರಣೆಗೆ ಮುಂದಾದರು.

ಅತಿಕ್ರಮಣದಿಂದ ಕಿರಿದಾಗಿದ್ದ ರಥಬೀದಿಯು ರಥೋತ್ಸವದ ವೇಳೆ ಸೇರುವ ಲಕ್ಷಾಂತರ ಭಕ್ತರಿಗೆ ತುಂಬಾ ಕಿರಿಕಿರಿಯನ್ನು ಉಂಟು ಮಾಡುತ್ತಿತ್ತು. ಇದೀಗ ವಿಶಾಲಗೊಂಡ ರಥ ಬೀದಿಯಲ್ಲಿ ರಥವೀಕ್ಷಿಸುವ ಭಕ್ತ ರಿಗೆ ಅನುಕೂಲವಾಗುವುದರ ಜೊತೆಗೆ ಜಾತ್ರೆಗೆ ಆಗಮಿಸುವ ವ್ಯಾಪಾರ, ವಹಿ ವಾಟು ಅಂಗಡಿದಾರರಿಗೆ ಹಾಗೂ ಗ್ರಾಹಕರಿಗೆ ಅನುಕೂಲವನ್ನು ಕಲ್ಪಿಸಿದಂತಾಗಿದೆ.

ರಥಬೀದಿಯಲ್ಲಿ ಎಗ್ಗಿಲ್ಲದೇ ನಡೆ ಯುತ್ತಿರುವ ಮಾಂಸ, ಮದ್ಯ ಮತ್ತು ಇತರ ವ್ಯಾಪಾರಗಳಿಂದ ಶುಚಿತ್ವ ಎಂಬುವುದು ಮಾಯವಾಗಿ ಹಿರಿಯ ನಾಗರಿಕರು, ಮಹಿಳೆಯರು ತಲೆ ಎತ್ತಿ ನಡೆಯದಂತೆ ಆಗಿತ್ತು.

ಜಾತ್ರೆ ಮುಗಿದ ನಂತರವೂ ಪುನಃ ತೇರುಬೀದಿ ಅತಿಕ್ರಮಿಸದಂತೆ ಕಟ್ಟು ನಿಟ್ಟಾಗಿ ಕ್ರಮಕೈಗೊಳ್ಳಲು ಸ್ಥಳೀಯ ಆಡಳಿತ ಮುಂದಾಗಬೇಕು ಎಂಬುದು ಪಟ್ಟಣದ ಜನತೆಯ ಆಶಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.