ADVERTISEMENT

ಜಿಲ್ಲೆಗೆ ಹತ್ತು ಸಾವಿರ ಮನೆ ಮಂಜೂರು

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 10:20 IST
Last Updated 16 ಜುಲೈ 2017, 10:20 IST

ಬಳ್ಳಾರಿ: ‘ಸರ್ಕಾರದಿಂದ ಜಿಲ್ಲೆಗೆ ಹತ್ತು ಸಾವಿರ ಮನೆಗಳು ಮಂಜೂರಾಗಿವೆ. ಮುಂದಿನ ತಿಂಗಳಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫಲಾನುಭವಿ ಗಳಿಗೆ ಪ್ರಮಾಣ ಪತ್ರ ವಿತರಿಸುವರು’ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ತಿಳಿಸಿದರು.

ನಗರದ ಬಿ.ಡಿ.ಎ.ಎ. ಪುಟ್‌ಬಾಲ್ ಮೈದಾನ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಹಾಗೂ ನಿರ್ಮಿತಿ ಕೇಂದ್ರ ಜಂಟಿಯಾಗಿ ಏರ್ಪಡಿ ಸಿದ್ದ ಮುಖ್ಯಮಂತ್ರಿಗಳ ಮನೆ ನಿರ್ಮಾಣ ಬಜಾರ್ ಯೋಜನೆಯ ಫಲಾನುಭವಿ ಗಳಿಗೆ ಸಾಲ ಮಂಜೂರಾತಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

‘ಜಿಲ್ಲೆಯ ಅಭಿವೃದ್ಧಿಗೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳಿಂದ ವಸತಿ ಸಚಿವ ಕೃಷ್ಣಪ್ಪ ಅವರಿಗೆ ಜಿಲ್ಲೆಗೆ ಮನೆ ಮಂಜೂರಾತಿಗಾಗಿ ಮನವಿ ಸಲ್ಲಿಸ ಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಚಿವರು 10 ಸಾವಿರ ಮನೆ ಮಂಜೂರಾತಿ ಮಾಡಿ ದ್ದಾರೆ’ ಎಂದು ತಿಳಿಸಿದರು.

ADVERTISEMENT

‘1,344 ಫಲಾನುಭವಿಗಳಿಗೆ ವಸತಿ ಯೋಜನೆ ಗಳಲ್ಲಿ ಮನೆಗಳು ಮಂಜೂರಾಗಿವೆ. ಮನೆ ಕಟ್ಟಲು ಮುಖ್ಯಮಂತ್ರಿಗಳ ಮನೆ ನಿರ್ಮಾಣ ಬಜಾರ್ ಯೋಜನೆ ಅಡಿ ಯಲ್ಲಿ ಜಿಲ್ಲಾ ಆಡಳಿತ , ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಜಂಟಿ ಯಾಗಿ ಸಾಲ ಸೌಲಭ್ಯ ನೀಡಲಾಗುವುದು’ ಎಂದರು. 

‘ವಸತಿ ಯೋಜನೆ ಸಾಲ ಸೌಲಭ್ಯ ಗಳನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು. ಫಲಾನುಭವಿಗಳು ಮನೆ ಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕು. ಅಲ್ಲದೇ ರಾಜ್ಯದಲ್ಲಿ ಸಕಾಲ ಸೇವೆ ಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಬಂದಿದ್ದು, ಇದು ಹೆಮ್ಮೆಯ ಸಂಗತಿ’ ಎಂದರು. 

ಶಾಸಕ ಅನಿಲ್‌ ಲಾಡ್‌, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್.ಗಿರಿಮಲ್ಲಪ್ಪ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಮಾನಯ್ಯ, ಮೇಯರ್ ವೆಂಕಟ ರಮಣ, ಉಪಮೇಯರ್ ಉಮಾ ದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.