ADVERTISEMENT

ಮಾನವ ಸಂಪನ್ಮೂಲ ಹೆಚ್ಚಿಸಿ

ಮೇಕ್‌ ಇನ್‌ ಇಂಡಿಯಾ ಮಾತ್ರ ಅಭಿವೃದ್ಧಿ ಅಲ್ಲ: ಪ್ರೊ.ಪ್ರಶಾಂತ್ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:59 IST
Last Updated 19 ಜನವರಿ 2017, 6:59 IST
ಹೊಸಪೇಟೆಯ ಶಂಕರ್‌ ಆನಂದ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಎಚ್‌.ಡಿ. ಪ್ರಶಾಂತ್ ಮಾತನಾಡಿದರು. ಪ್ರಾಧ್ಯಾಪಕ ಕಡ್ಲಬಾಳ ಪನ್ನಂಗದರ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ ಹಾಗೂ ಸಾಂಸ್ಕೃತಿಕ ವಿಭಾಗದ ಸಂಚಾಲಕ ಕೆ. ವೆಂಕಟೇಶ್‌ ಇದ್ದಾರೆ – ಪ್ರಜಾವಾಣಿ ಚಿತ್ರ
ಹೊಸಪೇಟೆಯ ಶಂಕರ್‌ ಆನಂದ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಎಚ್‌.ಡಿ. ಪ್ರಶಾಂತ್ ಮಾತನಾಡಿದರು. ಪ್ರಾಧ್ಯಾಪಕ ಕಡ್ಲಬಾಳ ಪನ್ನಂಗದರ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ ಹಾಗೂ ಸಾಂಸ್ಕೃತಿಕ ವಿಭಾಗದ ಸಂಚಾಲಕ ಕೆ. ವೆಂಕಟೇಶ್‌ ಇದ್ದಾರೆ – ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ಮೇಕ್‌ ಇನ್‌ ಇಂಡಿಯಾ’ ಹೆಸರಿನಲ್ಲಿ ಬಂಡವಾಳಶಾಹಿಗಳನ್ನು ಆಕ ರ್ಷಿಸಲು ಸರ್ಕಾರಗಳು ಮುಂದಾಗಿವೆ ಹೊರತು ಮಾನವ ಸಂಪನ್ಮೂಲ ಹೆಚ್ಚಿ ಸಲು ಗಮನ ಕೊಡದೇ ಇರುವುದು ದುರದೃಷ್ಟಕರ ಸಂಗತಿ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಎಚ್‌.ಡಿ. ಪ್ರಶಾಂತ್‌ ಅವರು ಕಳವಳ ವ್ಯಕ್ತಪಡಿಸಿದರು.

ನಗರದ ಶಂಕರ್‌ ಆನಂದ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಸ್ವಾಮಿ ವಿವೇಕಾನಂದರ 154ನೇ ಜಯಂತಿ ಅಂಗವಾಗಿ ಹಮ್ಮಿ ಕೊಂಡಿದ್ದ ರಾಷ್ಟ್ರೀಯ ಯುವ ಸಪ್ತಾಹ ದಲ್ಲಿ ಉಪನ್ಯಾಸ ನೀಡಿದರು.

ಮಂದಿರ, ಮಸೀದಿ ಮತ್ತು ಚರ್ಚು ಗಳು ಮುಖ್ಯವಾಗಿವೆಯೇ ಹೊರತು ಮನುಷ್ಯ, ಮನುಷ್ಯತ್ವ ಮುಖ್ಯವಾಗಿ ಉಳಿದಿಲ್ಲ. ಸ್ವಾಮಿ ವಿವೇಕಾನಂದರು ಹೇಳಿದ ಮನುಷ್ಯತ್ವಕ್ಕೆ ವಿರುದ್ಧವಾಗಿ ನಾವು ನಡೆದುಕೊಳ್ಳುತ್ತಿದ್ದೇವೆ ಎಂದರು.

ದೇಶದ ಪ್ರತಿ ನೂರು ಮಕ್ಕಳಲ್ಲಿ 30 ಮಕ್ಕಳು ಅಪೌಷ್ಟಿಕತೆಯಿಂದ ಜನಿಸುತ್ತಿವೆ. ಆರರಿಂದ ಐದು ವರ್ಷ ವಯಸ್ಸಿನ ಮಕ್ಕಳು ಅಪೌಷ್ಟಿಕತೆ, ರಕ್ತಹೀನತೆ ಸಮಸ್ಯೆ ಎದುರಿಸುತ್ತಿವೆ. ಇಂತಹ ಪರಿಸ್ಥಿತಿ ಇರುವಾಗ 2020ರಲ್ಲಿ ಭವ್ಯ ಭಾರತ ಕಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಶಿಕ್ಷಣ, ಜ್ಞಾನ ಎನ್ನುವುದು ಮಾರು ಕಟ್ಟೆಯ ವಸ್ತುವಾಗಿದೆ. ಸಮಾನತೆ ಬೋಧಿಸುವ ವಿಷಯವಾಗಿ ಶಿಕ್ಷಣ ಉಳಿ ದಿಲ್ಲ. ಶಿಕ್ಷಣ ಉದ್ಯೋಗಕ್ಕಲ್ಲ, ಆತ್ಮವಿಮ ರ್ಶೆಗೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಅವರು ಹೇಳಿದ ದಾರಿಯಲ್ಲಿ ನಿಜವಾಗಿಯೂ ನಾವು ನಡೆದರೆ ಆತ್ಮ ವಿಶ್ವಾಸದಿಂದ ಕೂಡಿರುವ ಭವ್ಯ ಸಮಾಜ ನಿರ್ಮಿಸಬಹುದು ಎಂದರು.

ದೇಶದಲ್ಲಿ ಶೇ 70ರಷ್ಟು ಜನ 40 ವರ್ಷ ವಯಸ್ಸಿನೊಳಗಿನವರು ಇದ್ದಾರೆ. ಅವರಿಗೆ ಉದ್ಯೋಗ ಕೊಡಬೇಕು. ಹಸಿವು ನಿವಾರಿಸಬೇಕಿದೆ. ಆದರೆ, ಒಟ್ಟು ಜನಸಂಖ್ಯೆಯಲ್ಲಿ 39 ಕೋಟಿ ಜನ ಕೌಶಲ ಹೊಂದಿಲ್ಲ. ಅಂದರೆ ಉದ್ಯೋಗಕ್ಕೆ ಬೇಕಾದ ಶಿಕ್ಷಣವನ್ನು ನಾವು ಇಲ್ಲಿಯ ವರೆಗೆ ಕೊಟ್ಟಿಲ್ಲ ಎಂಬ ಪ್ರಶ್ನೆ ಉದ್ಭವಿ ಸುತ್ತದೆ. ದೇಶದಲ್ಲಿ ಅನೇಕ ಮೂಲಭೂತ ಸಮಸ್ಯೆಗಳಿವೆ. ಆ ಸಮಸ್ಯೆಗಳಿಗೆ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳ ಹಿನ್ನೆಲೆ ಯಲ್ಲಿ ನೋಡಿ, ಸ್ಪಂದಿಸಿದರೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಹ ಶೀಲ್ದಾರ್‌ ಎಚ್‌. ವಿಶ್ವನಾಥ್‌, ಅಧ್ಯಾತ್ಮಕ್ಕೆ ಘನತೆ ತಂದುಕೊಟ್ಟ ಮಹಾನ್‌ ಚೇತನ ಸ್ವಾಮಿ ವಿವೇಕಾನಂದ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಯು. ರಾಘವೇಂದ್ರರಾವ್‌, ನಗರಸಭೆ ಸದಸ್ಯೆ ನೂರ್‌ಜಹಾನ್‌, ಪ್ರಾಧ್ಯಾಪಕ ಕಡ್ಲಬಾಳ ಪನ್ನಂಗದರ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಕೆ. ವೆಂಕಟೇಶ್‌ ಉಪಸ್ಥಿತರಿದ್ದರು. ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಪ್ತಾಹದ ಪ್ರಯುಕ್ತ ಆಯೋಜಿಸಿದ್ದ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸ ಲಾಯಿತು. ಕಾರ್ಯಕ್ರಮದ ಅಂಗವಾಗಿ ಪುಸ್ತಕ ಪ್ರದರ್ಶನ ಆಯೋಜಿಸಲಾಗಿತ್ತು.

*
ಮಂದಿರ, ಮಸೀದಿ ಮತ್ತು ಚರ್ಚುಗಳು ಮುಖ್ಯವಾಗಿವೆ ಹೊರತು ಮನುಷ್ಯತ್ವ ಮುಖ್ಯವಾಗಿಲ್ಲ. ಸ್ವಾಮಿ ವಿವೇಕಾನಂದರ ಆಶಯಕ್ಕೆ ವಿರುದ್ಧವಾಗಿ ಸಮಾಜ ನಡೆಯುತ್ತಿದೆ.
–ಎಚ್‌.ಡಿ. ಪ್ರಶಾಂತ್‌,
ಪ್ರಾಧ್ಯಾಪಕ, ಹಂಪಿ ಕನ್ನಡ ವಿ.ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT