ADVERTISEMENT

ಶಾಲೆಯಲ್ಲಿ ಚರಂಡಿ ದುರ್ನಾತ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 6:13 IST
Last Updated 2 ಸೆಪ್ಟೆಂಬರ್ 2017, 6:13 IST

ಹೂವಿನಹಡಗಲಿ: ಈ ಶಾಲೆಯ ಮಕ್ಕಳು ಸ್ವಚ್ಛ ಭಾರತ ಆಂದೋಲನ ಘೋಷಣೆ ಕೂಗುತ್ತಾ ಗ್ರಾಮಸ್ಥರಲ್ಲಿ ನೈರ್ಮಲ್ಯ ಜಾಗೃತಿ ಮೂಡಿಸುತ್ತಾರೆ. ಆದರೆ, ಈ ಊರಿನ ಜನರು ಚರಂಡಿ ತ್ಯಾಜ್ಯವನ್ನು ಶಾಲೆಯ ಆವರಣಕ್ಕೆ ಹರಿಸಿ, ವಾತಾವರಣವನ್ನು ಕಲುಷಿತ ಗೊಳಿಸಿ ದ್ದಾರೆ. ಮಕ್ಕಳು ದುರ್ನಾತದಲ್ಲಿಯೇ ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಲಿಂಗನಾಯಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಚರಂಡಿ ತ್ಯಾಜ್ಯ ಸಂಗ್ರಹ ಗೊಂಡು ವಿದ್ಯಾರ್ಥಿಗಳು ಅನೇಕ ರೀತಿಯ ತೊಂದರೆ ಅನುಭವಿಸುತ್ತಿ ದ್ದಾರೆ. ತಾಂಡಾದಲ್ಲಿ ಈಚೆಗೆ ಅಭಿವೃದ್ಧಿ ಕಾಮಗಾರಿ ಕೈಗೊಂಡ ಬಳಿಕ ಚರಂಡಿ ಯ ಮಾರ್ಗ ಬದಲಾವಣೆಯಾಗಿ, ಕೊಳಚೆ ನೀರು ಶಾಲೆಯ ಆವರಣ ಸೇರುತ್ತಿದೆ.

ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಾಗಲೀ, ಗ್ರಾಮ ಪಂಚಾಯ್ತಿಯವರಾಗಲೀ ದುರಸ್ತಿಪಡಿಸದೇ ಇರುವುದರಿಂದ ಸಮಸ್ಯೆ ಉಂಟಾಗಿದೆ. ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾ ಚರಣೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಗ್ರಾಮ ಪಂಚಾಯಿತಿ ಸದಸ್ಯರು ಇಲ್ಲಿನ ಕಲುಷಿತ ವಾತಾವರಣ ಅವಲೋಕಿಸಿ ದ್ದಾರೆ. 15 ದಿನ ಕಳೆದರೂ ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ADVERTISEMENT

ಶಾಲಾವರಣದಲ್ಲಿ ಮಲೀನ ನೀರು ಸಂಗ್ರಹಗೊಂಡು ದುರ್ವಾಸನೆ ಹರಡು ತ್ತಿದೆ. ಮಕ್ಕಳ ಆಟ, ಪಾಠ ಎಲ್ಲವೂ ಇಲ್ಲಿಯೇ. ವಿದ್ಯಾರ್ಥಿಗಳು ಅನಾ ರೋಗ್ಯಕ್ಕೆ ಈಡಾಗುವ ಭೀತಿ ಇರುವುದ ರಿಂದ ಸಂಬಂಧಿಸಿದವರು ಕೂಡಲೇ ಚರಂಡಿ ದುರಸ್ತಿ ಮಾಡಿಸಿ, ತ್ಯಾಜ್ಯವನ್ನು ಬೇರೆಡೆ ಸಾಗಿಸಬೇಕು ಎಂದು ಆಗ್ರಹಿಸಿದ್ದಾರೆ.

* * 

ಮಲೀನ ನೀರು ಶಾಲಾವರಣಕ್ಕೆ ನುಗ್ಗದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯ್ತಿಯವರಿಗೆ ತಿಳಿಸಿದ್ದೇವೆ. ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ
ವೆಂಕಟೇಶ ಪಟಗಿ
ಮುಖ್ಯಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.