ADVERTISEMENT

ಸಮಸ್ಯೆಗೆ ತಕ್ಕಂತೆ ಅನುದಾನ ಹಂಚಿಕೆ: ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 10:07 IST
Last Updated 15 ಜುಲೈ 2017, 10:07 IST

ಬಳ್ಳಾರಿ: ಜಿಲ್ಲೆಯ ಏಳು ತಾಲ್ಲೂಕುಗಳಿಗೆ ಸಮಾನವಾಗಿ ಅನುದಾನವನ್ನು ಹಂಚಿಕೆ ಮಾಡುವ ಬದಲಿಗೆ ಅಲ್ಲಿನ ಅನುಕೂಲ ಮತ್ತು ಅನನುಕೂಲಗಳಿಗೆ ತಕ್ಕಂತೆ ಹಂಚಿಕೆ ಮಾಡಬೇಕು ಎಂದು ಹೂಡೇಂ ಕ್ಷೇತ್ರದ ಸದಸ್ಯ ಎಚ್‌.ರೇವಣ್ಣ ಆಗ್ರಹಿಸಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ತುಂಗಭದ್ರಾ ಜಲಾಶಯದ ನೀರು ಬಳ ಸುವ ತಾಲ್ಲೂಕುಗಳಿಗೂ ಮಳೆಯನ್ನೇ ಆಶ್ರಯಿಸಿರುವ ಕೂಡ್ಲಿಗಿ ತಾಲ್ಲೂಕಿಗೂ ಒಂದೇ ಪ್ರಮಾಣದ ಅನುದಾನ ನೀಡು ವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮಳೆ ಇಲ್ಲದೆ, ಮೇವು–ಕುಡಿಯುವ ನೀರಿಲ್ಲ ತಾಲ್ಲೂಕಿನ ರೈತರು ಬಸವಳಿದಿದ್ದಾರೆ. ಹಣ ಕೊಟ್ಟರೂ ನೀರು ದೊರಕದ ಸನ್ನಿವೇಶದಲ್ಲಿ ಎಲ್ಲ ತಾಲ್ಲೂಕುಗಳನ್ನು ಒಂದೇ ರೀತಿ ಪರಿಗಣಿಸುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ADVERTISEMENT

ಒಂದು ಹಂತದಲ್ಲಿ ತಮ್ಮ ಕುರ್ಚಿ ಬಿಟ್ಟು ಎದ್ದು ಸಭಾಂಗಣದ ಮಧ್ಯ ಭಾಗಕ್ಕೆ ಬಂದ ಅವರು, ಹಂಗಾಮಿ ಅಧ್ಯಕ್ಷೆ ಪಿ.ದೀನಾ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಮುಂದೆ ವಾದ ಮಂಡಿಸಿದರು. ಕೆಲವು ಸದಸ್ಯರೊಂದಿಗೆ ವಾಗ್ವಾದ ನಡೆಸಿದರು. ಜಲಾಶಯದ ನೀರು ಲಭ್ಯವಿರುವ ತಾಲ್ಲೂಕುಗಳಿಗೆ ಕಡಿಮೆ ಅನುದಾನ ಕೊಟ್ಟು, ನೀರು ಲಭ್ಯವಿಲ್ಲದ ತಾಲ್ಲೂಕು ಗಳಿಗೆ ಹೆಚ್ಚು ಅನುದಾನ ಕೊಡಬೇಕು ಎಂದು ಆಗ್ರಹಿಸಿದರು.

₹ 1.50 ಕೋಟಿ: ಈ ಸಂದರ್ಭದಲ್ಲಿ ಮಾತನಾಡಿದ ಸಿಇಓ ರಾಜೇಂದ್ರ, ಜಿಲ್ಲೆಯಲ್ಲಿ ಕೂಡ್ಲಿಗಿ ತಾಲ್ಲೂಕಿನ ಪರಿಸ್ಥಿತಿ ಗಂಭೀರವಾಗಿರುವುದರಿಂದ, ಅಲ್ಲಿಗೆ ₹ 1.50 ಕೋಟಿ ವೆಚ್ಚದ ತುರ್ತು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇತರೆ ತಾಲ್ಲೂಕುಗ ಳಿಂದಲೂ ಕ್ರಿಯಾಯೋಜನೆ ಸಲ್ಲಿಸಲು ಸೂಚಿಸಲಾಗಿದೆ ಎಂದರು.

ಸ್ಥಾಯಿ ಸಮಿತಿ: ಐದು ಸ್ಥಾಯಿ ಸಮಿತಿಗಳ ಚುನಾವಣೆ ಪ್ರಕ್ರಿಯೆ ಮೂರು ಬಾರಿ ಮುಂದಕ್ಕೆ ಹೋಗಿದೆ. ಹಂಗಾಮಿ ಅಧ್ಯ ಕ್ಷರ ವಿವೇಚನೆಗೆ ಅದನ್ನು ಬಿಟ್ಟಿದ್ದರೂ, ಅವರು ಕ್ರಮ ಕೈಗೊಂಡಿಲ್ಲ ಎಂದು ಸಭೆಯ ಆರಂಭದಲ್ಲಿ ಸದಸ್ಯರಾದ ಎ.ಮಾನಯ್ಯ, ಅಲ್ಲಂ ಪ್ರಶಾಂತ್‌ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆ ನಡೆಸಲು ಸದಸ್ಯರೇ ಸಹಕರಿಸಲಿಲ್ಲ ಎಂದು ದೀನಾ ಮಾರುತ್ತರ ನೀಡಿದರು. ಇದೇ ವಿಷಯ ದ ಕುರಿತು ದೀರ್ಘ ವಾಗ್ವಾದವೂ ನಡೆಯಿತು.  ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ವಿಧಾನ ಪರಿಷತ್‌ ಸದಸ್ಯರನ್ನು ಮತದಾನದ ಹಕ್ಕಿನಿಂದ ದೂರ ವಿಡಬೇಕಾಗಿದೆ. ಹೀಗಾಗಿ ಒಂದು ವಾರದೊಳಗೆ ಪರಿಶೀಲನೆ ನಡೆಸಿ, ದಿನಾಂಕ ನಿಗದಿ ಮಾಡಲಾಗುವುದು ಎಂದು ಸಿಇಓ ರಾಜೇಂದ್ರ ಹೇಳಿದರು.

ಜಿಲ್ಲಾ ಯೋಜನಾ ಸಮಿತಿಯ ಚುನಾವಣೆಯೂ ನಡೆಯಬೇಕಿತ್ತು. ಆದರೆ ಕುಡುತಿನಿ ಪಟ್ಟಣ ಪಂಚಾಯಿ ತಿಯ ಚುನಾವಣೆ ನಡೆಯದೇ ಇರುವು ದರಿಂದ, ಅದನ್ನು ಹೊರತುಪಡಿಸಿ ಮಾಡುವಂತಿರಲಿಲ್ಲ. ಆದರೆ ಹಾಗೆ ಮಾಡಬಹುದು ಎಂದು ಸರ್ಕಾರ ಸೂಚಿಸಿದೆ. ಅದಕ್ಕೂ ದಿನಾಂಕ ನಿಗದಿ ಮಾಡಲಾಗುವುದು ಎಂದರು.

₹ 93 ಕೋಟಿ ವೆಚ್ಚದ ವಾರ್ಷಿಕ ಕ್ರಿಯಾಯೋಜನೆ ರೂಪಿಸುವ ಸಂದರ್ಭ ದಲ್ಲಿ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದು ಸದಸ್ಯರು ದೂರಿದ್ದರಿಂದ, ಸದಸ್ಯರ ಅನುಮೋದನೆ ಪಡೆದು ಲಭ್ಯ ಅನುದಾನಕ್ಕೆ ತಕ್ಕಂತೆ ಕಾಮಗಾರಿಗಳನ್ನು ಸೇರ್ಪಡೆಗೊಳಿಸಿ ಎಂದು ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳು ತಮ್ಮ ದೂರವಾಣಿ ಕರೆಯನ್ನು ಸ್ವೀಕರಿಸುವುದಿಲ್ಲ, ಮಾಹಿತಿ ನೀಡುವುದಿಲ್ಲ ಎಂದು ಬಹುತೇಕ ಸದ ಸ್ಯರು ಸಭೆಯ ಉದ್ದಕ್ಕೂ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.