ADVERTISEMENT

ಸರ್ಕಾರಿ ಆಸ್ಪತ್ರೆಯಲ್ಲಿ ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 9:02 IST
Last Updated 17 ನವೆಂಬರ್ 2017, 9:02 IST

ಸಿರುಗುಪ್ಪ: ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಜನಸಂದಣಿ ಹೆಚ್ಚಿತ್ತು. ಎಲ್ಲಾ ವಿಭಾಗದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆ ಪಡೆಯಲು ಸರದಿಯಲ್ಲಿ ನಿಂತು ಚೀಟಿ ಪಡೆಯುತ್ತಿದ್ದುದು ಕಂಡು ಬಂತು.

‘ನ.7ರಂದು 549, 8ರಂದು 660 ಮಂದಿ ಚಿಕಿತ್ಸೆ ಪಡೆದಿದ್ದು, ಗುರುವಾರ ಮಧ್ಯಾಹ್ನದ ವೇಳೆಗೆ 400 ಜನರು ಚಿಕಿತ್ಸೆಗೆ ಚೀಟಿ ಪಡೆದಿದ್ದರು. ಮುಷ್ಕರಕ್ಕೂ ಮುಂಚೆ ಪ್ರತಿದಿನ 200 ರಿಂದ 250 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು.

ಈಗ ರೋಗಿಗಳ ಸಂಖ್ಯೆ ಎರಡು–ಮೂರು ಪಟ್ಟು ಹೆಚ್ಚಿದೆ.ಆಸ್ಪತ್ರೆಯಲ್ಲಿ 7 ವೈದ್ಯರು, 18 ಸಿಬ್ಬಂದಿ , 7 ಪರೀಕ್ಷಾ ತಜ್ಞರು ಕರ್ತವ್ಯ ನಿರತರಾಗಿದ್ದಾರೆ’ ಎಂದು ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಜಗನ್ನಾಥ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.