ADVERTISEMENT

ಅಂಗವಿಕಲರು ಅಗಾಧ ಸಾಮರ್ಥ್ಯವುಳ್ಳವರು

ಅನುದಾನಕ್ಕೆ ಶೀಘ್ರ ಪಟ್ಟಿ ನೀಡಲು ಶಾಸಕ ಪಿಳ್ಳಮುನಿಶಾಮಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 7:35 IST
Last Updated 25 ಮೇ 2017, 7:35 IST
ದೇವನಹಳ್ಳಿ ಪಟ್ಟಣದ ಜಿಲ್ಲಾ ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯಲ್ಲಿ ಶಾಸಕ ಪಿಳ್ಳಮುನಿಶಾಮಪ್ಪ ಅಂಗವಿಕಲರಿಗೆ ಸಾಧನ ಸಲಕರಣೆ ವಿತರಿಸಿದರು
ದೇವನಹಳ್ಳಿ ಪಟ್ಟಣದ ಜಿಲ್ಲಾ ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯಲ್ಲಿ ಶಾಸಕ ಪಿಳ್ಳಮುನಿಶಾಮಪ್ಪ ಅಂಗವಿಕಲರಿಗೆ ಸಾಧನ ಸಲಕರಣೆ ವಿತರಿಸಿದರು   

ದೇವನಹಳ್ಳಿ: ‘ಶಾಸಕರ ಅನುದಾನದಲ್ಲಿ ಉಳಿದಿರುವ ಅಂಗವಿಕಲರಿಗೆ ಶೇ 3 ರಷ್ಟು ಉಳಿದಿರುವ ಮೀಸಲು ಅನುದಾನಕ್ಕೆ ಶೀಘ್ರ ಪಟ್ಟಿ ಮಾಡಿ’ ಎಂದು ಶಾಸಕ ಪಿಳ್ಳಮುನಿಶಾಮಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.

ದೇವನಹಳ್ಳಿ ಪಟ್ಟಣದ ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯಲ್ಲಿ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಸಹಯೋಗದಲ್ಲಿ ಬುಧವಾರ ನಡೆದ ಅಂಗವಿಕಲರಿಗೆ ಸಾಧನ ಸಲಕರಣೆ ಮತ್ತು ತ್ರಿಚಕ್ರ ಮೋಟಾರು ವಾಹನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಗವಿಕಲರು ಅಸಹಾಯಕರಲ್ಲ, ಅಗಾಧ ಸಾಮರ್ಥ್ಯವುಳ್ಳ ಪ್ರತಿಭೆಗಳು ಎಂದು ಅಭಿಪ್ರಾಯಪಟ್ಟರು.

ಅನೇಕ ಅಂಗವಿಕಲರಿಗೆ  ಸೌಲಭ್ಯದ ಬಗ್ಗೆ ಮಾಹಿತಿ ಇರುವುದಿಲ್ಲ, ಜನಪ್ರತಿನಿಧಿಗಳು ಇಲಾಖೆ ಅಧಿಕಾರಿಗಳು  ಒಂದೆಡೆ ಮುಖಾಮುಖಿ ಚರ್ಚೆ ನಡೆಸಿದರೆ ಸಮಸ್ಯೆ ಬಗೆಹರಿಸಲು ಸಾಧ್ಯ ಪರಿಹಾರವು ತಕ್ಷಣ ಸಿಗಲಿದೆ ಎಂದರು .

ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಕೆಲವು ಕಡೆ ಅಂಗವಿಕಲರನ್ನು ಪ್ರತ್ಯೇಕ ಕೊಠಡಿ ವ್ಯವಸ್ಥೆಯಡಿ ಇರಿಸಲಾಗುತ್ತದೆ ಸರಿಸಮಾನತೆಯಿಂದ ಕಂಡು ಸಹಜೀವನದಲ್ಲಿ ಭಾಗಿ ಮಾಡಿಕೊಂಡಾಗ ಭಾವನಾತ್ಮಕ ಸಂಬಂಧದ ಬೆಸುಗೆ ಗಟ್ಟಿಯಾಗುತ್ತದೆ ಎಂದು ಅವರು ಹೇಳಿದರು.

40 ಅಂಗವಿಕಲರಿಗೆ ಸಾಧನ ಸಲಕರಣೆ, ನಾಲ್ಕು ಅರ್ಹರಿಗೆ ತ್ರಿಚಕ್ರ ಮೋಟಾರ್ ವಾಹನ ವಿತರಿಸಲಾಯಿತು. ಜಿಲ್ಲಾ ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಪನಿರ್ದೆಶಕಿ ಸುಮಂಗಳ ಉಪಸ್ಥಿತರಿದ್ದರು .

ಕಳಪೆ ಟೈರ್
ಅಂಗವಿಕಲರ ಮುಖಂಡ ವಿಜಯಕುಮಾರ್ ಮಾತನಾಡಿ, ಕಳೆದ ಡಿಸೆಂಬರ್‌ನಲ್ಲಿ ವಿತರಣೆ ಮಾಡಲಾಗಿರುವ ತ್ರಿಚಕ್ರ ಮೊಟಾರ್ ವಾಹನಗಳ ಟೈರ್ ಸಂಪೂರ್ಣ ಕಳಪೆಯಾಗಿದ್ದು ಕಂಪೆನಿ ವಿರುದ್ಧ  ಕ್ರಮಕೈಗೊಂಡು ಟೈರ್ ಬದಲಿಸಿ ಕೊಡುವಂತೆ ಶಾಸಕರಿಗೆ ಮನವಿ ಮಾಡಿದರು

*
ಇನ್ನೂ ಒಂದು ತಿಂಗಳಲ್ಲಿ ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಡಯಾಲಿಸಿಸ್ ಘಟಕ ಆರಂಭವಾಗಲಿದೆ.
-ಪಿಳ್ಳಮುನಿಶಾಮಪ್ಪ,ಶಾಸಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.