ADVERTISEMENT

ಕನಸವಾಡಿ ಗ್ರಾಮದಲ್ಲಿ ಆವರಿಸಿದ ಮೌನ

ಗಣೇಶ ವಿಸರ್ಜನೆ ವೇಳೆ ಅವಗಡ: ನಿಷ್ಪಕ್ಷಪಾತ ತನಿಖೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 8:52 IST
Last Updated 15 ಸೆಪ್ಟೆಂಬರ್ 2014, 8:52 IST

ದೊಡ್ಡಬಳ್ಳಾಪುರ:  ತಾಲ್ಲೂಕಿನ ಕನಸ ವಾಡಿ ಗ್ರಾಮದಲ್ಲಿ  ಈಗ ಮೌನ ಆವರಿಸಿದೆ. ಶನಿವಾರ ತಡ ರಾತ್ರಿ  ಗಣೇಶ ವಿಸ ರ್ಜಿಸಿ ಹಿಂತಿರುಗುತ್ತಿದ್ದ ಟ್ರ್ಯಾಕ್ಟರ್‌ನ ಅಲಂಕಾರಿಕ ಕಬ್ಬಿಣದ ಪಲ್ಲಕ್ಕಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಐವರು ಮೃತಪಟ್ಟ ಘಟನೆಯಿಂದ ಗ್ರಾಮಸ್ಥರಿಗೆ ಆಘಾತ ತಂದಿದೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವ ನದ ಮಾತುಗಳನ್ನು ಹೇಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ಭಾನುವಾರ ಬೆಳಗ್ಗೆ 11 ಗಂಟೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ ಸಂಸತ್‌ ಸದಸ್ಯ ಎಂ. ವೀರಪ್ಪಮೊಯ್ಲಿ, ಶಾಸಕ ಟಿ. ವೆಂಕಟ ರಮಣಯ್ಯ, ಬೆಸ್ಕಾಂ ನಿರ್ಲಕ್ಷ್ಯದ ಬಗ್ಗೆ ದೂರುಗಳು ಬಂದಿರುವ ಹಿನ್ನಲೆ­ಯಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಲು ಸೂಚಿಸಲಾಗಿದೆ ಎಂದರು.

ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮ ನಕ್ಕೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೂ ಮೃತರ ಕುಟುಂಬ ಗಳಿಗೆ ನೇರವು ಕೊಡಿಸುವ ಭರವಸೆ ನೀಡಿದರು. ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ದುರಂತದಲ್ಲಿ ಮೃತಪಟ್ಟವರ ಕುಟುಂ ಬಕ್ಕೆ ತಲಾ  ₨ ೨೫ ಸಾವಿರ ಪರಿಹಾರ ನೀಡಿ­ದರು.

ವಿಧಾನ ಪರಿಷತ್ ಸದಸ್ಯ ಇ. ಕೃಷ್ಣಪ್ಪ, ಮಾಜಿ ಆರ್.ಜಿ. ವೆಂಕಟಾಚಲಯ್ಯ, ಎಪಿಎಂಸಿ ಅಧ್ಯಕ್ಷ ತಿ.ರಂಗರಾಜು, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿ.ಡಿ. ಸತ್ಯನಾರಾಯಣಗೌಡ, ತಹಶೀ ಲ್ದಾರ್ ಎಂ.ಕೆ.ರಮೇಶ್ ಭೇಟಿ ನೀಡಿ ಕುಟುಂಬ ದವರಿಗೆ ಸಾಂತ್ವನ ಹೇಳಿದರು.
ಘಟನಾಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಧೀಕ್ಷಕ ರಮೇಶ್ ಬಾನುಟ್, ಹೆಚ್ಚುವರಿ ಅಧೀಕ್ಷಕ ಅಬ್ದುಲ್‌ ಅಹದ್‌ಪುತ್ತಿಗೆ, ಡಿವೈಎಸ್‌ಪಿ ಟಿ.ಕೋನಪ್ಪರೆಡ್ಡಿ, ಭೇಟಿ ನೀಡಿದ್ದರು. ಘಟನಾ ಸ್ಥಳದಲ್ಲಿ ಅಹಿತರಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.