ADVERTISEMENT

ಗ್ರಾಮಾಂತರ ಜಿಲ್ಲೆಯಲ್ಲಿ 12 ಲಕ್ಷ ಸಸಿ ನೆಡಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 8:55 IST
Last Updated 6 ಸೆಪ್ಟೆಂಬರ್ 2017, 8:55 IST

ದೇವನಹಳ್ಳಿ : ಕಳೆದ ವರ್ಷ ಕೋಟಿ ವೃಕ್ಷ ಆಂದೋಲನ ಅಡಿಯಲ್ಲಿ ರಾಜ್ಯದಲ್ಲಿ 8 ಕೋಟಿ ಸಸಿ ನೆಡಲಾಗಿತ್ತು, ಪ್ರಸ್ತುತ ಜಿಲ್ಲೆಯಲ್ಲಿ 12 ಲಕ್ಷ ಸಸಿ ನೆಡುವ ಗುರಿ ಅರಣ್ಯ ಇಲಾಖೆ ಮಾಡಬೇಕು’ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ತಾಲ್ಲೂಕು ಚಪ್ಪರದ ಕಲ್ಲು ಬಳಿ ನಿರ್ಮಾಣವಾಗುತ್ತಿರುವ ಜಿಲ್ಲಾ ಕೇಂದ್ರ ಕಚೇರಿ ಸಂಕೀರ್ಣದ ಆವರಣದಲ್ಲಿ ಮಂಗಳವಾರ ಹಸಿರು ಕರ್ನಾಟಕ ಅಭಿಯಾನ ನೀರಿಗಾಗಿ ಅರಣ್ಯಕ್ಕೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ವಾಡಿಕೆ ಮಳೆ ಏರುಪೇರು ಆಗಿ ಪ್ರಸ್ತುತ ಈ ವಾರ ಚೇತರಿಕೆಯಾಗಿದ್ದು ಇನ್ನೆರಡು ತಿಂಗಳಲ್ಲಿ ಸಸಿ ನೆಡುವ ಕಾರ್ಯ ಪೂರ್ಣಗೊಳಿಸಲೇಬೇಕು. 5 ಲಕ್ಷ ಸಸಿ ರೈತರಿಗೆ ನೀಡಿ ಜಮೀನು ಬದುಗಳಲ್ಲಿ ಖಾಲಿ ಜಾಗದಲ್ಲಿ ಬೆಳೆಸುವಂತೆ ಜಾಗೃತಿ ಮೂಡಿಸಬೇಕು’ ಎಂದರು.

ADVERTISEMENT

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ) ಕೆ.ಎಸ್.ಸುಗಾರ, ವನಮಹೋತ್ಸವದ ಪರಿಕಲ್ಪನೆಯನ್ನು 1950 ರಲ್ಲಿ ಹುಟ್ಟು ಹಾಕಿದ್ದು ಡಾ.ಕೆ.ಎ.ಮುನಶಿ ಅವರು. ಮಳೆ ಬರಿಸುವ ತಾಕತ್ತು ಮರಗಳಿಂದ ಮಾತ್ರ ಸಾಧ್ಯ. ಮೋಡ ಬಿತ್ತನೆಯ ಮಳೆ ತಾತ್ಕಾಲಿಕ ಹೊರತು ಶಾಶ್ವತವಲ್ಲ ಎಂದರು.

ಜಿಲ್ಲೆಯಲ್ಲಿ ಶೇ 22 ರಷ್ಟು ಮಾತ್ರ ಅರಣ್ಯವಿದ್ದು ಶೇ 33ಕ್ಕೆ ವಿಸ್ತರಿಸಬೇಕಾಗಿದೆ. ಅರಣ್ಯ ನಾಶ ತಡೆಗೆ ಪರಿಶಿಷ್ಟರಿಗೆ ಅಡುಗೆ ಅನಿಲ, ಸೋಲಾರ್ ದೀಪ ನೀಡಲಾಗುತ್ತಿದೆ. ಸಸಿ ಬೆಳೆಸುವ ರೈತರಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಪ್ರಸಾದ್, ಉಪಾಧ್ಯಕ್ಷೆ ಅನಂತಕುಮಾರಿ, ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ.ಮಂಜುನಾಥ್, ರಾಧಮ್ಮ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣ್ ಗೌಡ, ಉಪಾಧ್ಯಕ್ಷೆ ನಂದಿನಿ ಹಾಜರಿದ್ದರು.

ಜಿಲ್ಲಾಧಿಕಾರಿ ಎಸ್.ಪಾಲಯ್ಯ, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ದಯಾನಂದ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ಗಂಗಾಧರ್, ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ) ಎಸ್.ಆರ್. ನಟೇಶ್, ಉಪವಲಯ ಅರಣ್ಯಾಧಿಕಾರಿ ಪುಟ್ಟರಾಜು, ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.