ADVERTISEMENT

ನಗದುರಹಿತ ವಹಿವಾಟು ಜಾಗೃತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 6:52 IST
Last Updated 21 ಜನವರಿ 2017, 6:52 IST
ದೇವನಹಳ್ಳಿ ತಾಲ್ಲೂಕಿನ ಅಲೂರು ದುದ್ದನಹಳ್ಳಿ ಗ್ರಾಮದಲ್ಲಿ ನಗದು ರಹಿತ ವಹಿವಾಟು ಜಾಗೃತಿ ಅಭಿಯಾನದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಾಗೃತಿ ಅಭಿಯಾನ ಸಂಯೋಜನಾಧಿಕಾರಿ ಗಂಗಾ ಉಪಸ್ಥಿತರಿದ್ದರು
ದೇವನಹಳ್ಳಿ ತಾಲ್ಲೂಕಿನ ಅಲೂರು ದುದ್ದನಹಳ್ಳಿ ಗ್ರಾಮದಲ್ಲಿ ನಗದು ರಹಿತ ವಹಿವಾಟು ಜಾಗೃತಿ ಅಭಿಯಾನದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಾಗೃತಿ ಅಭಿಯಾನ ಸಂಯೋಜನಾಧಿಕಾರಿ ಗಂಗಾ ಉಪಸ್ಥಿತರಿದ್ದರು   

ದೇವನಹಳ್ಳಿ: ಕೇಂದ್ರ ಸರ್ಕಾರದ ಪರಿಣಾಮಕಾರಿ ಯೋಜನೆಯಾದ ನಗದು ರಹಿತ ವಹಿವಾಟು ಕುರಿತು ಮೊದಲು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು  ನಗದು ರಹಿತ ವಹಿವಾಟು ಕೇಂದ್ರ ಸಮಿತಿ ಜಾಗೃತಿ ಅಭಿಯಾನ ಸಂಯೋಜನಾಧಿಕಾರಿ ಗಂಗಾ ತಿಳಿಸಿದರು.

ತಾಲ್ಲೂಕಿನ ಅಲೂರು ದುದ್ದನಹಳ್ಳಿ, ಸುಣ್ಣಘಟ್ಟ, ಬನ್ನಿಮಂಗಲ, ಮಾರುತಿ ವಿದ್ಯಾಮಂದಿರ ಸೇರಿದಂತೆ ವಿವಿಧ ಶಾಲೆ ಮತ್ತು ಗ್ರಾಮಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಜಾಥಾ ನಡೆಸಿ ನಗದು ರಹಿತ ವಹಿವಾಟು ಕುರಿತು ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹಿರಿಯರು ಮಾಡದ ಮೊಬೈಲ್ ಬಳಕೆಯನ್ನು ಮಾಡುತ್ತಾರೆ. ಕ್ಷಣದಲ್ಲಿ ಇಡಿ ಮೊಬೈಲ್ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುತ್ತಾರೆ. ಅಂತಹ ಬುದ್ಧಿವಂತ ಮಕ್ಕಳಿಗೆ ಸೂಕ್ತರೀತಿ ನಗದು ರಹಿತ ವಹಿವಾಟು ಬಗ್ಗೆ ಮಾಹಿತಿ ನೀಡಿದರೆ ಕ್ಷಣಾರ್ಧದಲ್ಲಿ ನೆನಪಿನಲ್ಲಿ ಉಳಿಸಿಕೊಳ್ಳತ್ತಾರೆ ಎಂದರು.

ಒಂದೇ ಬಾರಿಗೆ ಎಲ್ಲಾ ರೀತಿಯ ಪರಿಕರಗಳನ್ನು ನಗದು ರಹಿತ ವಹಿವಾಟು ನಡೆಸಲು ಸಾಧ್ಯವಿಲ್ಲ, ಮಕ್ಕಳು ಅರಿತರಬೇಕು; ಜತೆಗೆ ವಿದ್ಯಾವಂತ ಮಹಿಳೆಯರು ಅನಕ್ಷರಸ್ಥ ಮಹಿಳೆಯರಿಗೆ ಯೋಜನೆಯ ಸಾಧಕ ಭಾದಕದ ಬಗ್ಗೆ ಮನವರಿಕೆ ಮಾಡಬೇಕು ಎಂದರು.

ಮನೆಯಲ್ಲಿಟ್ಟ ನಗದು ಕಳ್ಳರ ಪಾಲಾಗಬಹುದು. ಮನೆಯಿಂದ ಪೇಟೆಗೆ ಸಾಮಗ್ರಿ ತರಲು ನಗದಿನೊಂದಿಗೆ ಹೋಗುವಾಗ ಹಣ ಕಳ್ಳತನವಾಗಿರುವ ಉದಾಹರಣೆ ಇದೆ. ನಗದು ರಹಿತ ವಹಿವಾಟು ಒಂದೆರಡು ದಿನಕ್ಕೆ ಸಿಮಿತವಲ್ಲ. ಜೀವಮಾನವಿರುವವರೆಗೂ ನಡೆಯುವ ಶಾಶ್ವತ ವಹಿವಾಟು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.