ADVERTISEMENT

ಪ್ರತಿಯೊಬ್ಬರಿಗೂ ವಿಮೆ ಸೌಲಭ್ಯ ಕಲ್ಪಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 8:39 IST
Last Updated 25 ಅಕ್ಟೋಬರ್ 2014, 8:39 IST

ದೊಡ್ಡಬಳ್ಳಾಪುರ: ದೇಶದ ಪ್ರತಿಯೊಬ್ಬ ಪ್ರಜೆಗೂ ವಿಮೆ ದೊರೆತ ದಿನ ದೇಶದ ಅಭಿವೃದ್ಧಿ ಪರಿಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಐಸಿ ಪ್ರತಿನಿಧಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಭಾರ­ತೀಯ ವಿಮಾ ನಿಗಮದ ದೊಡ್ಡ­ಬಳ್ಳಾಪುರ ಶಾಖೆ ಮುಖ್ಯ ವ್ಯವಸ್ಥಾಪಕ ಬಿ.ಸಿ.ಚನ್ನಕೇಶವ ಹೇಳಿದರು.

ಅವರು ನಗರದಲ್ಲಿ ನಡೆದ ಭಾರ­ತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ಸುವರ್ಣ ಹಬ್ಬ ಮತ್ತು ೨೦೧೪-–೧೫ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡುತ್ತಿದ್ದರು. ಪ್ರತಿನಿಧಿಗಳು ಬದಲಾಗುತ್ತಿರುವ ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೊಂಡು ಹೋಗಬೇಕು. ಭಾರತೀಯ ಜೀವ ವಿಮಾ ನಿಗಮ ಸಾರ್ವಜನಿಕರ ನಂಬಿಕೆಯನ್ನು ಉಳಿಸಿಕೊಂಡು ಬರುತ್ತಿದೆ. ನಮ್ಮ  ಒಳಿತಷ್ಟೇ ಮುಖ್ಯ ಅಲ್ಲ, ಗ್ರಾಹಕರ ಸೇವೆಯೇ ಮುಖ್ಯ ಎಂದರು.

‘ಲಿಯಾಫಿ’ ದಕ್ಷಿಣ ಮಧ್ಯ ವಲಯ ಅಧ್ಯಕ್ಷ ಸಿಂಗಾಪುರ ಶ್ರೀನಿವಾಸ್ ಮಾತ­ನಾಡಿದರು. ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಸೋಮ­ಶೇಖರ್‌, ಗೌರವಾಧ್ಯಕ್ಷ ಜಿ.­ಮಾರೇ­­ಗೌಡ, ಪ್ರಧಾನ ಕಾರ್ಯ­ದರ್ಶಿ ಎಂ.ಮಂಜು­ನಾಥ್‌, ಖಜಾಂಚಿ ಟಿ.ಕೆ.­ಶ್ರೀನಿವಾಸ್‌, ಉಪಾಧ್ಯಕ್ಷ ಎಂ.ನಾಗ­ರಾಜು ಜಿ.ಎನ್‌. ವೆಂಕಟೇಶ್‌, ಸಿ. ಎನ್‌ಗಂಗಾಧರ್‌, ಎನ್‌.ಕೆ. ಹನು­ಮಂತೇ­ಗೌಡ, ಅಖಿಲ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಎಸ್.ಬಿ. ಶ್ರೀನಿವಾಸಾಚಾರಿ, ಆಲ್ ಇಂಡಿಯಾ  ಏಜೆಂಟ್ಸ್ ವೆಲ್ ಪೇರ್ ಕಮಿಟಿ ಚೇರಮನ್ ಸಿ.ಜಿ.ಲೋಕೇಂದ್ರ, ದಕ್ಷಿಣ ಮದ್ಯ ವಲಯದ ಐ.ಟಿ ಚೇರ್‌­ಮನ್ ಎನ್.ಕೃಷ್ಣ, ದಕ್ಷಿಣ ವಲಯ ಉಪಾಧ್ಯಕ್ಷ ಎಚ್.ಎ. ಚಂದ್ರ­ಶೇಖರ್ ಇದ್ದರು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿ­ದ­ವರಿಗೆ ಪ್ರತಿಭಾಪುರಸ್ಕಾರ ನೀಡಲಾ­ಯಿತು. ಸಂಘಕ್ಕೆ ಅತಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿದ ಸದಸ್ಯರು ಮತ್ತು ಹಿರಿಯ ಸದಸ್ಯರನ್ನು ಸನ್ಮಾನಿಸಲಾ­ಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.