ADVERTISEMENT

ರಸ್ತೆ ಎತ್ತರ: ರೈತರಿಗೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 9:46 IST
Last Updated 8 ಸೆಪ್ಟೆಂಬರ್ 2017, 9:46 IST

ದೊಡ್ಡಬಳ್ಳಾಪುರ: ಗೌರಿಬಿದನೂರು–ದೊಡ್ಡಬಳ್ಳಾಪುರ ಹೆದ್ದಾರಿ ಅಭಿವೃದ್ಧಿ ಪಡಿಸಲು ರಸ್ತೆ ಎತ್ತರಿಸಲಾಗಿದೆ ಆದರೆ, ಇದರಿಂದ ರೈತರಿಗೆ ಕಿರಿಕಿರಿ ಉಂಟಾ ಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ರಸ್ತೆಯುದ್ದಕ್ಕೂ ಇರುವ ರೈತರ ಕೃಷಿ ಭೂಮಿಯಲ್ಲಿ ನೀರು ನಿಲ್ಲುವಂತಾಗಿದೆ ಎಂದು ರಾಜ್ಯ ರೈತ ಸಂಘದ ಮುಖಂಡ ಸತೀಶ್‌ ದೂರಿದ್ದಾರೆ. ಹೆದ್ದಾರಿಯುದ್ದಕ್ಕೂ ಇರುವ ಕೃಷಿ ಭೂಮಿಯಿಂದ ನೀರು ಹೊರ ಹೋಗಲು ರಸ್ತೆ ಬದಿಯಲ್ಲಿ ಯಾವುದೇ ಚರಂಡಿ ನಿರ್ಮಿಸಿಲ್ಲ. ಇದರಿಂದ ಮಳೆ ಬಂದಾಗ ನೀರು ಹೊರ ಹೋಗಲು ಸಾಧ್ಯವಾಗದೆ ರೈತರ ಹೊಲಗಳಲ್ಲಿ ಕೆರೆಯಂತೆ ನೀರು ನಿಲ್ಲುವಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹೆದ್ದಾರಿಎತ್ತರಗೊಳಿಸಿರುವುದು ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಲು ಕಾರಣವಾಗಿದೆ. ರಸ್ತೆ ಬದಿಯಲ್ಲಿನ ರೈತರು ಹೆದ್ದಾರಿ ಕೆಲಸ ಮಾಡುತ್ತಿರುವವರಿಗೆ ಹಲವು ಸಲ ಹೇಳಿದರೂ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿಲ್ಲ. ತುರ್ತಾಗಿ ಕ್ರಮ ಕೈಗೊಂಡು ಚರಂಡಿ ನಿರ್ಮಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.