ADVERTISEMENT

ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 8:47 IST
Last Updated 20 ಫೆಬ್ರುವರಿ 2017, 8:47 IST
ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಬಳಿ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶಕೊಳಗಾದ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್‌್
ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಬಳಿ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶಕೊಳಗಾದ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್‌್   

ಆನೇಕಲ್‌ :  ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರೊಂದು ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ ಘಟನೆ ಬನ್ನೇರುಘಟ್ಟ ಸಮೀಪದ ಬೇಗಿಹಳ್ಳಿ ಬಳಿ ಭಾನುವಾರ ನಡೆದಿದೆ.

ಪೈಲಟ್‌ ಸಮಯಪ್ರಜ್ಞೆಯಿಂದ ಹೆಲಿಕಾಪ್ಟರನ್ನು ವಿಶಾಲವಾದ ಬಯಲಿನಲ್ಲಿ ಸುರಕ್ಷಿತವಾಗಿ ಇಳಿಸಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಪೈಲಟ್ ಹೆಲಿಕಾಪ್ಟರನ್ನು ಬನ್ನೇರುಘಟ್ಟ ಸಮೀಪದ ಬೇಗಿಹಳ್ಳಿ ಬಳಿಯಿದ್ದ ವಿಶಾಲವಾದ ಬಯಲಿನಲ್ಲಿ ಇಳಿಸಿದ. ಅದು ಜನವಸತಿ ಪ್ರದೇಶದಿಂದ ದೂರ ಇದ್ದ ಕಾರಣ ಯಾವುದೇ ಅವಘಡಗಳು ಸಂಭವಿಸಿಲ್ಲ. ಮಧ್ಯಾಹ್ನ  3.15ರ ವೇಳೆಗೆ ಹೆಲಿಕಾಪ್ಟರ್ ಭೂಸ್ಪರ್ಶವಾಗುತ್ತಿದ್ದಂತೆ ನೆರವಿಗಾಗಿ ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ತಂತ್ರಜ್ಞರು ಸ್ಥಳಕ್ಕೆ ಬಂದರು. ಆದರೆ ಅದನ್ನು ದುರಸ್ತಿ ಮಾಡಲು ಸಾಧ್ಯವಾಗಲಿಲ್ಲ. ಕೂಡಲೇ ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ಬಂದ ಮತ್ತೊಂದು ತಂಡದ ನುರಿತ ತಂತ್ರಜ್ಞರು ದುರಸ್ತಿ ಮಾಡಿ ಮತ್ತೆ ಟೇಕಾಫ್‌ ಮಾಡಿ ಬೆಂಗಳೂರಿನತ್ತ ತೆರಳಿದರು.

ಭಾರತೀಯ ವಾಯು ಸೇನೆಗೆ ಸೇರಿದ ಹೆಲಿಕಾಫ್ಟರ್ ಬೆಂಗಳೂರಿನತ್ತ ತೆರಳುತ್ತಿತ್ತು. ಪೈಲಟ್ ಹಾಗೂ ಸಹ ಪೈಲಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.