ADVERTISEMENT

ಆಕ್ಷೇಪಕ್ಕೆ ವಿದ್ಯುತ್ ಆಯೋಗ ಅಸಮ್ಮತಿ

ವಿದ್ಯುತ್ ದರ ಏರಿಕೆ ಅನಿವಾರ್ಯ: ಕರ್ನಾಟಕ ಇಂಧನ ನಿಯಂತ್ರಣ ಆಯೋಗದ ಅಧ್ಯಕ್ಷರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 7:30 IST
Last Updated 3 ಮಾರ್ಚ್ 2017, 7:30 IST
ಹುಕ್ಕೇರಿ ಗ್ರಾಮೀಣ  ವಿದ್ಯುತ್ ಸಹಕಾರಿ ಸಂಘದಲ್ಲಿ ವಿದ್ಯುಚ್ಛಕ್ತಿ ದರಪಟ್ಟಿ ನಿಗದಿ ಕುರಿತು ಸಾರ್ವಜನಿಕ ಆಕ್ಷೇಪಣೆಗಳ ಅರ್ಜಿ ವಿಚಾರಣೆ ಸಭೆಯ ಅಧ್ಯಕ್ಷತೆ ವಹಿಸಿ ಕರ್ನಾಟಕ ವಿದುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಗುರುವಾರ ಮಾತನಾಡಿದರು
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಲ್ಲಿ ವಿದ್ಯುಚ್ಛಕ್ತಿ ದರಪಟ್ಟಿ ನಿಗದಿ ಕುರಿತು ಸಾರ್ವಜನಿಕ ಆಕ್ಷೇಪಣೆಗಳ ಅರ್ಜಿ ವಿಚಾರಣೆ ಸಭೆಯ ಅಧ್ಯಕ್ಷತೆ ವಹಿಸಿ ಕರ್ನಾಟಕ ವಿದುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಗುರುವಾರ ಮಾತನಾಡಿದರು   

ಹುಕ್ಕೇರಿ: ಸಹಕಾರಿ ವಲಯದ ರಾಜ್ಯದ ಏಕೈಕ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ವಿದ್ಯುತ್ ದರ ಹೆಚ್ಚಳದ ಸಾರ್ವಜನಿಕ ಆಕ್ಷೇಪಗಳ ವಿಚಾರಣಾ ಸಭೆಯಲ್ಲಿ ರೈತ ಹಿತರಕ್ಷಣಾ ವೇದಿಕೆಯವರ ಆಕ್ಷೇಪ ಮತ್ತು ಸಲಹೆಗಳಿಗೆ ವಿದ್ಯುತ್ ನಿಯಂತ್ರಣ ಆಯೋಗ ಸಮ್ಮತಿಸದ ಘಟನೆ ಜರುಗಿತು.

ವಿಚಾರಣೆ ಸಭೆಯಲ್ಲಿ ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ, ಹಿರಿಯ ವಕೀಲ ರಾಮಚಂದ್ರ ಜೋಶಿ ಅವರು ಮಾತನಾಡಿ ಸಂಘ ಏತ ನೀರಾವರಿ ಮತ್ತು ಬೆಳಗಾವಿ ನಗರದ ಕುಡಿಯುವ ನೀರು ಸರಬರಾಜು ಘಟಕಗಳಿಗೆ ಸಂಘದಿಂದ ವಿದ್ಯುತ್ ಒದಗಿಸಿ ಶುಲ್ಕ ವಸೂಲಿಗೆ ಪ್ರಯತ್ನಿಸಿದರೆ ಅಂದಾಜು ₹2ರಿಂದ3 ಕೋಟಿ ಲಾಭವಾಗುತ್ತದೆ.

ಆದರೆ ಸಂಘದ ನಿರಾಸಕ್ತಿಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ನಿರ್ಧಾರ ದಿಂದ ಲಾಭ ದೊರಕುತ್ತಿಲ್ಲ ಎಂಬ ಆಕ್ಷೇಪಕ್ಕೆ ಆಯೋಗದ ಅಧ್ಯಕ್ಷ ಶಂಕರಲಿಂಗೇಗೌಡ ಅವರು ಉತ್ತರಿಸಿ ಸರ್ಕಾರ ಕುಡಿಯುವ ನೀರು ಸರಬರಾಜಿಗೆ ಒದಗಿಸುವ ವಿದ್ಯುತ್ ದರ ಕಡಿಮೆ ಇದ್ದು, ಸಂಘ ಪಡೆಯುವ ವಿದ್ಯುತ್ ದರ ಹೆಚ್ಚಾಗುತ್ತದೆ. ಇದರಿಂದ ಸಂಘ ಆರ್ಥಿಕ ಹಾನಿ ಅನುಭವಿಸ ಬೇಕಾಗುತ್ತದೆ ಎಂದು ತಿಳಿಸಿದರು.

ಭರಿಸುತ್ತೀರಾ?: ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಮಚಂದ್ರ ಜೋಶಿ ಅವರು ಸಂಘದಲ್ಲಿ ಮಾರ್ಗದರ್ಶಕನಾಗಿ ನೇಮಕ ಮಾಡಿಕೊಂಡರೆ ಪ್ರತಿವರ್ಷ ಕೇಂದ್ರ ಸರ್ಕಾರದಿಂದ ₹25 ಕೋಟಿ ವಿಶೇಷ ಅನುದಾನ ತರುವುದಾಗಿ ತಿಳಿಸಿದ್ದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷ ಶಂಕರಲಿಂಗೇಗೌಡ, ಅನುದಾನ ಬರದಿದ್ದರೆ ವೈಯಕ್ತಿಕವಾಗಿ ಭರಿಸು ತ್ತೀರಾ ಎಂದು ಪ್ರಶ್ನಿಸಿದರು.

ಸಂಘದ ಕಾರ್ಯಾಲಯದ ಸಣ್ಣ ಕೊಠಡಿಯಲ್ಲಿ ಸಭೆ ಆಯೋಜಿಸಿದ್ದಕ್ಕೆ ಆಕ್ಷೇಪಿಸಿದಾಗ ಉತ್ತರಿಸಿದ ಆಯೋಗದ ಅಧ್ಯಕ್ಷರು ಸಭೆಯ ಹೆಸರಿನಲ್ಲಿ ವಿಶಾಲ ಸ್ಥಳದಲ್ಲಿ ಸಭೆ ಆಯೋಜಿಸಿ ವೆಚ್ಚ ಮಾಡು ವುದಕ್ಕಿಂತ ಜನರೊಂದಿಗೆ ನಿಕಟವಾಗಿ ಮಾತಾಡಲು ಅವಕಾಶ ಕಲ್ಪಿಸಿರುವ ಸಂಘದ ಆಡಳಿತ ಮಂಡಳಿ ಕಾರ್ಯ ಮೆಚ್ಚುವಂಥದ್ದು ಎಂದು ಹೇಳಿದರು.

ರಾಜ್ಯದ ಇತರ ವಿದ್ಯುತ್ ಸರಬ ರಾಜು ಮಂಡಳಿಗಳಿಗಿಂತ ಈ ಸಹಕಾರಿ ಸಂಘ ದರ ಹೆಚ್ಚಳದಲ್ಲಿ ಕಡಿಮೆ ಮೊತ್ತದ ಬೇಡಿಕೆ ಇಟ್ಟಿದೆ ಎಂದು ಸೂಚ್ಯವಾಗಿ ಶ್ಲಾಘಿಸಿ, ಸಂಘದ ಆಡಳಿತ ಮಂಡಳಿ ಸಲ್ಲಿಸಿರುವ ದರ ಹೆಚ್ಚಳವನ್ನು ಪರಿಶೀಲಿಸಿ ಜನರಿಗೆ ಭಾರವಾಗದಂತೆ ದರ ನಿಗದಿ ಗೊಳಿಸುವುದಾಗಿ ಆಯೋಗ ತಿಳಿಸಿತು.

ಆಯೋಗದ ಸದಸ್ಯರಾದ ಎಚ್.ಡಿ. ಅರುಣಕುಮಾರ, ಡಿ.ಬಿ.ಮುನಿವೇಲ್ ರಾಜು, ಕಾರ್ಯದರ್ಶಿ ಡಾ. ಸಿದ್ದ ರಾಮಯ್ಯ, ಸಂಘದ ಅಧ್ಯಕ್ಷ ಬಸವರಾಜ ಮರಡಿ ಮತ್ತು ನಿರ್ದೇಶಕರು, ಎಂ.ಡಿ ಎಸ್.ಎಸ್.ಪೂಜಾರ, ಹೀರಾ ಶುಗರ್ಸ್ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ, ಟಿ.ಎ.ಪಿ.ಸಿ.ಎಂ.ಅಧ್ಯಕ್ಷ ಈರಣ್ಣ ಹಾಲದೇವರಮಠ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಸಂಕನ್ನವರ, ನಿರ್ದೇಶಕ ಪರಗೌಡ ಪಾಟೀಲ, ಎ.ಪಿ.ಎಂ.ಸಿ ಅಧ್ಯಕ್ಷ ಪ್ರಶಾಂತ ಪಾಟೀಲ, ಪುರಸಭೆ ಅಧ್ಯಕ್ಷ ಜಯಗೌಡ ಪಾಟೀಲ, ಉಪಾಧ್ಯಕ್ಷ ಗುರುರಾಜ ಕುಲಕರ್ಣಿ, ಹೆಸ್ಕಾಂ ಎಂ.ಡಿ ಎಸ್.ಪಿ.ಸಕ್ರಿ ಇದ್ದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ ಸ್ವಾಗತಿಸಿದರು. ರೆಸಿಡೆಂಟ್ ಎಂಜಿನಿಯರ್ ನೇಮಿನಾಥ ಖೇಮಲಾ ಪುರೆ ನಿರೂಪಿಸಿ, ವರದಿ ಮಂಡಿಸಿದರು. ಮ್ಯಾನೇಜರ್ ದುರದುಂಡಿ ನಾಯಿಕ ವಂದಿಸಿದರು.

*
ಕುಡಿಯುವ ನೀರು ಸರಬರಾಜು ಘಟಕಗಳಿಗೆ ಸಂಘದಿಂದ ವಿದ್ಯುತ್ ಒದಗಿಸಿ ಶುಲ್ಕ ವಸೂಲಿಗೆ ಪ್ರಯತ್ನಿಸಿದರೆ ಅಂದಾಜು ₹2ರಿಂದ3 ಕೋಟಿ ಲಾಭವಾಗುತ್ತದೆ.
-ರಾಮಚಂದ್ರ ಜೋಶಿ,
ಅಧ್ಯಕ್ಷ, ರೈತ ಹಿತರಕ್ಷಣಾ ವೇದಿಕೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.