ADVERTISEMENT

ಕಾರ್ಮಿಕ ಮುಖಂಡನಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 7:19 IST
Last Updated 3 ಮಾರ್ಚ್ 2017, 7:19 IST

ಬೈಲಹೊಂಗಲ: ‘ಸರ್ಕಾರದ ಕೆಲಸ ದೇವರ ಕೆಲಸ, ಪ್ರಾಮಾಣಿಕತೆಯಿಂದ ಅದನ್ನು ನಿರ್ವಹಿಸಿ ಜನರ ಪ್ರೀತಿಗೆ ಪಾತ್ರರಾಗಬೇಕು’ ಎಂದು ಚಿತ್ರನಟ ಶಿವರಂಜನ ಬೋಳಣ್ಣವರ ಹೇಳಿದರು.

ಪಟ್ಟಣದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಘಟಕದಲ್ಲಿ ನಡೆದ ಸೇವಾ ನಿವೃತ್ತಿ ಹೊಂದಿದ ಕಾರ್ಮಿಕ ಮುಖಂಡ ಬಿ.ಬಿ.ಸಂಗನಗೌಡರ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಾಡುವ ಕಾರ್ಯವನ್ನು ಇಡೀ ಸಮಾಜವೇ ಬೆಂಬಲಿಸಬೇಕು. ಬದುಕಿ ನಲ್ಲಿ ಸಭ್ಯರಾಗಿ ಬಾಳಿ ಭಗವಂತನ ಕೃಪೆಗೆ ಪಾತ್ರರಾಗಬೇಕು. ಸರ್ಕಾರದ ಜವಾಬ್ದಾರಿ ಯನ್ನು ಬದ್ಧತೆ, ನಿಷ್ಠೆಯಿಂದ ಮಾಡಿ ಜನಾನುರಾಗಿ ಬಾಳಬೇಕು’ ಎಂದರು.

ಶ್ರೀನೀವಿವ ಸಂಸ್ಥೆಯ ಕಾರ್ಯದರ್ಶಿ, ಪ್ರಾಚಾರ್ಯ ಎಸ್.ಎಸ್.ಸಿದ್ನಾಳ ಮಾತ ನಾಡಿ, ‘ಸುಮಾರು 37 ವರ್ಷಗಳ ಕಾಲ ಸಾರಿಗೆ ಇಲಾಖೆಯಲ್ಲಿ ಪ್ರಾಮಾಣಿಕತೆ ಯಿಂದ ಅವಿರತ ಸೇವೆ ಸಲ್ಲಿಸಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿ ಗುರುತಿಸಿಕೊಂಡ ಕಾರ್ಮಿಕ ಮುಖಂಡ ಬಿ.ಬಿ.ಸಂಗನಗೌಡರ ಕಾರ್ಯ ಶ್ಲಾಘನೀಯ’ ಆಗಿದೆ ಎಂದರು.

ಸನ್ಮಾನ ಸ್ವೀಕರಿಸಿದ ಕಾರ್ಮಿಕ ಮುಖಂಡ ಬಿ.ಬಿ.ಸಂಗನಗೌಡರ ಮಾತ ನಾಡಿ, ‘ಸರ್ಕಾರದ ಕೆಲಸದಲ್ಲಿ ಸಾಕಷ್ಟು ವಾದ, ಅಪವಾದಗಳು ಬರುವದು ಸಾಮಾನ್ಯ. ಸಾರಿಗೆ ಘಟಕದಲ್ಲಿನ ಸೇವೆ ನನಗೆ ಸಂತೃಪ್ತಿ ತಂದಿದೆ.

ಬದುಕಿನಲ್ಲಿ ಜನಸೇವೆ ಅಗತ್ಯವಾಗಿದೆ. ನೌಕರಿಯಿಂದ ನಿವೃತಿ ಹೊಂದಿದರೂ ಸಮಾಜ ಸೇವೆ ಯಿಂದ ಎಂದೆಂದೂ ವಿಮುಖನಾಗು ವುದಿಲ್ಲ. ನೌಕರಿ ಮನೆಗಷ್ಟೇ ಸೀಮಿತ ವಾದರೂ ಜೀವಿತಾವಧಿಯಲ್ಲಿ ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು’ ಎಂದರು.

ಹಿರಿಯ ಪತ್ರಕರ್ತ ಈಶ್ವರ ಹೋಟಿ, ನಿವೃತ ಶಿಕ್ಷಕ ಜಿ.ಬಿ.ತುರಮರಿ, ಹುಬ್ಬಳ್ಳಿ ಖಾದಿ ಗ್ರಾಮೋದ್ಯೋಗದ ಅಧ್ಯಕ್ಷ, ವಕೀಲ ಮಹಾಂತೇಶ ಮತ್ತಿಕೊಪ್ಪ, ಪುರಸಭೆ ಅಧ್ಯಕ್ಷ ರಾಜು ಜನ್ಮಟ್ಟಿ, ಸವದತ್ತಿ ಎ.ಪಿ.ಎಂ.ಸಿ ನಿರ್ದೇಶಕ ಎಫ್.ಎಸ್. ಸಿದ್ದನಗೌಡರ ಮಾತನಾಡಿದರು.

ಘಟಕದ ವ್ಯವಸ್ಥಾಪಕ ಎಸ್. ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಕಾರ್ಮಿಕ ಸಂಘದ ಮುಖಂಡ ಸಿ.ಎಸ್.ಬಿಡ್ನಾಳ, ಜಿಲ್ಲಾ ಘಟಕದ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಆರ್.ಎಸ್. ಸಾಸನೂರ, ಪಾಂಡಪ್ಪ ಇಂಚಲ, ವಕೀಲ ಎಂ.ವೈ.ಸೋಮನ್ನವರ, ಆರ್.ಜಿ. ಪುಡಕಲಕಟ್ಟಿ, ಶ್ರೀಧರ ಶೆಟ್ಟರ, ಐ.ಬಿ.ಬಗನಾಳ, ವೈ.ಟಿ. ಬಾಗಾರ, ಗೌಸ್ ಕಿತ್ತೂರು, ಜಿ.ಪಿ.ಕಟ್ಟಿಮನಿ, ಅರುಣ ಯಲಿಗಾರ, ನಿವೃತ ಸಾರಿಗೆ ನಿಯಂತ್ರಕ ಐ.ಬಿ. ಶೀಲವಂತರ, ಆರ್.ಜಿ. ಚೆನ್ನಣ್ಣ ವರ, ಪರ್ವತಗೌಡ ಸಂಗನಗೌಡರ ಇದ್ದರು.

ಈರಣ್ಣ ಸಂಬರಗಿ ಪ್ರಾರ್ಥಿಸಿದರು. ನಿರ್ವಾಹಕ ಸುರೇಶ ಯರಡ್ಡಿ ಸ್ವಾಗತಿಸಿದರು. ಶಿಕ್ಷಕ ವೀರಣ್ಣ ಶೆಟ್ಟೆಣ್ಣವರ ಪರಿಚಯಿಸಿದರು. ಪ್ರಕಾಶ ಸೊಗಲ ವಂದಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಕಾರ್ಮಿಕ ಮುಖಂಡ ಬಿ.ಬಿ.ಸಂಗನಗೌಡರ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT