ADVERTISEMENT

ಗೋವಿನ ಜೋಳ ಖರೀದಿ ಕೇಂದ್ರ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 5:14 IST
Last Updated 9 ನವೆಂಬರ್ 2017, 5:14 IST

ಕಲ್ಲೋಳಿ (ಮೂಡಲಗಿ): ‘ರೈತರು ಸುಧಾರಿತ ತಳಿಯ ಬೀಜಗಳನ್ನು ಬಳಸಿಕೊಂಡು ಬೆಳೆಯಲ್ಲಿ ಅಧಿಕ ಆದಾಯವನ್ನು ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ಇಲ್ಲಿಯ ಪ್ರಗತಿಪರ ರೈತ ಶಿವಪ್ಪ ಕಡಾಡಿ ಅವರ ತೋಟದಲ್ಲಿ ಗೋವಿನ ಜೋಳದ ಕ್ಷೇತ್ರೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಗೋವಿನ ಬೆಳೆಯನ್ನು ಬೆಳೆಯಲು ಬೆಳಗಾವಿ ಜಿಲ್ಲೆಯ ಭೂಮಿಗಳು ಸೂಕ್ತವಾಗಿವೆ ಎಂದರು.

ಜಿಲ್ಲೆಯಲ್ಲಿ 2.65 ಲಕ್ಷ ಎಕರೆ ಭೂಮಿಯಲ್ಲಿ ರೈತರು ಗೋವಿನ ಜೋಳವನ್ನು ಬೆಳೆದಿದ್ದಾರೆ. ಕೇಂದ್ರ ಸರ್ಕಾರವು ₹1425 ಪ್ರತಿ ಕ್ವಿಂಟಲ್‌ಗೆ ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ ಇಂದು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ಗೋವಿನ ಜೋಳದ ಬೆಲೆಯು ₹200ರಿಂದ 300ರವರೆಗೆ ಕುಸಿದಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದರು.

ADVERTISEMENT

ಕಳೆದ ಐದಾರು ವರ್ಷಗಳಿಂದ ಬರಗಾಲವನ್ನು ಎದುರಿಸಿದ್ದು ಒಂದೆಡೆಯಾದರೆ, ಈಗ ಅತಿವೃಷ್ಟಿಯಿಂದಾಗಿ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರವು ಪ್ರತಿ ತಾಲ್ಲೂಕಿನಲ್ಲಿ ಗೋವಿನ ಜೋಳದ ಖರೀದಿ ಕೇಂದ್ರವನ್ನು ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಮಹಾಲಿಂಗ ಚೌರಿ, ಸುಭಾಷ ಪೋಳಸಂಗಿ, ರಾಜಪ್ಪ ಗೋಸಬಾಳ, ಬಾಳಪ್ಪ ಸಂಗಟಿ, ಪರಪ್ಪ ಮಳವಾಡ, ಪರಪ್ಪ ಕಡಾಡಿ, ಶಿವಗೊಂಡ ವ್ಯಾಪಾರಿ, ಸೋಮಲಿಂಗ ಹಡಗಿನಾಳ, ಶಂಕರ ಖಾನಗೌಡರ, ಅರ್ಜುನ ಚಿಕ್ಕೋಡಿ, ಭೀಮಶೆಪ್ಪ ತಹಶೀಲ್ದಾರ, ಭೀಮಶಿ ಗೋಕಾವಿ, ಪರಪ್ಪ ಗಿರೆಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.