ADVERTISEMENT

ತಹಶೀಲ್ದಾರ್‌ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 5:51 IST
Last Updated 17 ಮಾರ್ಚ್ 2018, 5:51 IST

ಅಥಣಿ: ತಹಶೀಲ್ದಾರ್‌ ಆರ್. ಉಮಾದೇವಿ ಅವರ ವರ್ಗಾವಣೆ ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಶಿವಯೋಗಿ ವೃತ್ತದಿಂದ ಆರಂಭವಾದ ಪ್ರತಿಭಟನೆ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡು ತಹಶೀಲ್ದಾರ್‌ ವರ್ಗಾವಣೆ ಕುರಿತು ಸರ್ಕಾರದ ಆದೇಶವನ್ನು ಖಂಡಿಸಿದರು.

ಬಹಳ ವರ್ಷಗಳ ನಂತರ ತಾಲ್ಲೂಕಿಗೆ ಒಳ್ಳೆಯ ತಹಶೀಲ್ದಾರರು ಬಂದಿದ್ದರು. ಆದರೆ ಅವರನ್ನು ಅವಧಿಗೂ ಮೊದಲೇ ವರ್ಗಾವಣೆ ಮಾಡಿದ್ದು ಸರಿಯಲ್ಲ ಎಂದು ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ ಹೇಳಿದರು.

ADVERTISEMENT

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅಣ್ಣಾಸಾಬ ತೆಲಸಂಗ, ಕನ್ನಡ ಸೇನೆಯ ಚಿದಾನಂದ ಶೇಗುಣಸಿ ‘ಮುಂಬರುವವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ತನಗೆ ಬೇಕಾದಂತೆ ಅಧಿಕಾರಿಗಳ ವರ್ಗಾವಣೆ ಮಾಡಿದೆ, ಆದರೆ ಅಥಣಿಯಲ್ಲಿ ಆರ್. ಉಮಾದೇವಿ ಒಳ್ಳೆಯ ಕಾರ್ಯ ಮಾಡಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಅದಕ್ಕಾಗಿ ಅವರ ಸೇವೆಯಲ್ಲಿ ಇಲ್ಲಿಯೇ ಇನ್ನಷ್ಟು ದಿನ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ಉಪತಹಶೀಲ್ದಾರ್‌ಗೆ ಸಲ್ಲಿಸಿದರು. ದಶರಥ ನಾಯಿಕ, ಅಡಿವೆಪ್ಪ ಆಜೂರ,ಗೌಡಪ್ಪರಾಮತೀರ್ಥ, ಗುರುಬಸು ಆಜೂರ, ರೇವಣ್ಣ ಅತ್ತೆಪ್ಪಗೋಳ, ಜಗನ್ನಾಥ ಬಾಮನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.