ADVERTISEMENT

ನೀಟ್‌ ಇರುವಾಗ ನೆಕ್ಸ್ಟ್ ಏಕೆ?

ಎಂಬಿಬಿಎಸ್‌ ಆದವರಿಗೆ ನೆಕ್ಸ್ಟ್‌ ಪರೀಕ್ಷೆ ಕಡ್ಡಾಯಕ್ಕೆ ವಿದ್ಯಾರ್ಥಿಗಳ ವಿರೋಧ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:03 IST
Last Updated 2 ಫೆಬ್ರುವರಿ 2017, 6:03 IST
ನೀಟ್‌ ಇರುವಾಗ ನೆಕ್ಸ್ಟ್ ಏಕೆ?
ನೀಟ್‌ ಇರುವಾಗ ನೆಕ್ಸ್ಟ್ ಏಕೆ?   

ಬೆಳಗಾವಿ: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ನ್ಯಾಷನಲ್‌ ಎಕ್ಸಿಟ್‌ ಟೆಸ್ಟ್‌ (ನೆಕ್ಸ್ಟ್‌) ಪರೀಕ್ಷೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ವೈದ್ಯಕೀಯ ವಿದ್ಯಾರ್ಥಿಗಳು ಬುಧವಾರ ಬೆಳಗಾವಿಯಲ್ಲಿ ಮೆರವಣಿಗೆ ನಡೆಸಿದರು.

ಇಂಡಿಯನ್‌ ಮೆಡಿಕಲ್‌ ಅಸೋಶಿಯೇಶನ್‌ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ನಗರದ ಬೆಳಗಾವಿ ವೈದ್ಯಕೀಯ ಸಂಸ್ಥೆ ಹಾಗೂ ಜೆಎನ್‌ಎಂಸಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೆರವಣಿಗೆ ನಂತರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಿಗೆ ಮಾಡಿ ಕೊಂಡ ಮನವಿ ಪತ್ರವನ್ನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ಎಂಬಿಬಿಎಸ್‌ ಮುಗಿಸಿದ ವಿದ್ಯಾರ್ಥಿ ಗಳು ಮೆಡಿಕಲ್‌ ಅಸೋಶಿಯೇಶನ್‌ದಲ್ಲಿ ಹೆಸರು ದಾಖಲಿಸಬೇಕಾದರೆ ಎಂಬಿಬಿಎಸ್‌ ಮುಗಿಸಿದ ಬಳಿಕ ನೆಕ್ಸ್ಟ್‌ ಪರೀಕ್ಷೆ ಪಾಸಾಗುವುದನ್ನು ಕಡ್ಡಾಯ ಗೊಳಿಸುತ್ತಿದೆ. ಇದರಿಂದ ವಿದ್ಯಾರ್ಥಿ ಗಳಿಗೆ ತೊಂದರೆ ಹಾಗೂ ಅನ್ಯಾಯ ವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಂಬಿಬಿಎಸ್‌ ಮುಗಿಸಲು 4 ವರ್ಷ, ಇಂಟ್ರನ್‌ಶಿಪ್‌ ಮುಗಿಸಲು 1 ವರ್ಷ ಬೇಕಾಗುತ್ತದೆ, ಆಮೇಲೆ ಈ ನೆಕ್ಸ್ಟ್‌ ಪರೀಕ್ಷೆ ಪಾಸಾಗಲು ಮತ್ತೆ ಕನಿಷ್ಠ 1 ವರ್ಷ ಬೇಕಾಗುತ್ತದೆ. ಆದ್ದರಿಂದ ಈ ಪರೀಕ್ಷೆ ಬೇಡ ಎಂದು ಮನವಿ ಮಾಡಿದ್ದಾರೆ.

ಹೊಸ ಕಾಯಿದೆ ಪ್ರಕಾರ ಮೆರಿಟ್‌ ಸೀಟ್‌ಗಳೂ ಕಡಿಮೆಯಾಗಿವೆ. ಈಗ ಹೆಚ್ಚುವರಿ ಕಲಿಕೆಯಿಂದಾಗಿ  ಮುಂದೆ ವೈದ್ಯರ ಸಂಖ್ಯೆ ಕಡಿಮೆಯಾಗುವ ಅಪಾಯ ಇದೆ, ಆದ್ದರಿಂದ ನೆಕ್ಸ್ಟ್‌ ಪರೀಕ್ಷೆ ಜಾರಿಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ. ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಬೆಳಗಾವಿ ಘಟಕದ ಅಧ್ಯಕ್ಷ ಡಾ. ಪ್ರಕಾಶ ರಾವ್‌, ಕಾರ್ಯದರ್ಶಿ ಡಾ. ಅನೀಲ ಪಾಟೀಲ ನೇತೃತ್ವದಲ್ಲಿ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.