ADVERTISEMENT

ನೆಲದಲ್ಲಿ ಗಣೇಶ ಮೂರ್ತಿ ಹೂತ ರೈತ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 6:21 IST
Last Updated 14 ಸೆಪ್ಟೆಂಬರ್ 2017, 6:21 IST
ನಸಲಾಪುರ ಗ್ರಾಮದ ರೈತ ಶಿವಗೌಡ ಪಾಟೀಲ ಭೂಮಿಯಲ್ಲಿ ಗಣೇಶ ಮೂರ್ತಿಯನ್ನು ಹೂಳುತ್ತಿರುವ ಚಿತ್ರ
ನಸಲಾಪುರ ಗ್ರಾಮದ ರೈತ ಶಿವಗೌಡ ಪಾಟೀಲ ಭೂಮಿಯಲ್ಲಿ ಗಣೇಶ ಮೂರ್ತಿಯನ್ನು ಹೂಳುತ್ತಿರುವ ಚಿತ್ರ   

ಚಿಕ್ಕೋಡಿ: ಸಕಾಲದಲ್ಲಿ ಮಳೆಯಾಗಲಿಲ್ಲ ಎಂದು ದೇವರ ಮೇಲೆ ಮುನಿಸಿಕೊಂಡ ಶಿವಗೌಡ ಪಾಟೀಲ ಎಂಬ ರೈತನು ಹಬ್ಬದ ಬಳಿಕ ಗಣೇಶ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸದೇ ತನ್ನ ಹೊಲದಲ್ಲಿ ಗುಂಡಿ ತೋಡಿ ಮಣ್ಣಿನಲ್ಲಿ ಹೂತ ವಿಲಕ್ಷಣ ಘಟನೆ ರಾಯಬಾಗ ತಾಲ್ಲೂಕಿನ ನಸಲಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಮನೆಯಲ್ಲಿ ಪೂಜೆ ನಡೆಸಿದ ಅವರು, ಮನೆಯವರ ವಿರೋಧವನ್ನೂ ಲೆಕ್ಕಿಸದೇ ಹೊಲದಲ್ಲಿ ಮೂರ್ನಾಲ್ಕು ಅಡಿ ಗುಂಡಿ ತೆಗೆದು ಗಣೇಶ ಮೂರ್ತಿಯನ್ನು ಹೂತಿದ್ದು ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟಿ.ವಿ ಮಾಧ್ಯಮಗಳಲ್ಲಿ ಈ ಘಟನೆ ಪ್ರಸಾರವಾದ ಬಳಿಕ ಮೂರ್ತಿಯನ್ನು ಹೊರ ತೆಗೆದು ನೀರಿನಲ್ಲಿ ವಿಸರ್ಜಿಸಿದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT