ADVERTISEMENT

‘ಪರಿಸರ ರಕ್ಷಣೆಗೆ ಮುಂದಾಗಿ’

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 7:18 IST
Last Updated 3 ಮಾರ್ಚ್ 2017, 7:18 IST

ಮೂಡಲಗಿ: ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸಲುವಾಗಿ ಉತ್ತಮ ಪರಿಸರವನ್ನು ಕಾಯುವುದು ಅವಶ್ಯವಿದ್ದು, ಗಿಡಮರಗಳನ್ನು ಬೆಳೆಸುವುದಕ್ಕೆ ಅದ್ಯತೆ ನೀಡಬೇಕು ಲಯನ್ಸ್‌ ಕ್ಲಬ್‌ ಜಿಲ್ಲಾ ಗವರ್ನರ್‌ ವೀರನಗೌಡಾ ಆರ್. ಹಿರೇಗೌಡರ ಹೇಳಿದರು.

ಇಲ್ಲಿಯ ಲಯನ್ಸ್‌ ಕ್ಲಬ್‌ ಮೂಡಲಗಿ ಪರಿವಾರದ ವಾರ್ಷಿಕ ಕಾರ್ಯಚಟುವಟಿಕೆಗಳ ಪರಿಶೀಲನೆಗೆ ಭೇಟ್ಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು ಪರಿಸರ ಸ್ವಚ್ಛತೆಯ ಮೂಲಕ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಲು ಮುಂದಾಗಬೇಕು ಎಂದರು.

ದೇಶದ ಮುನ್ನಡೆಗೆ ಯುವಶಕ್ತಿಯು ಪ್ರಾಮಖ್ಯವಾಗಿದ್ದು. ಉತ್ತಮ ಚಿಂತನೆ, ಸದೃಢವಾದ ಯುವಪಡೆಯನ್ನು ಸತ್ಕಾರ್ಯಗಳಲ್ಲಿ ಬಳಸುವಲ್ಲಿ ಲಯನ್ಸ್‌ ಕ್ಲಬ್‌ವು ಮುತುವರ್ಜಿವಹಿಸಬೇಕು. ಯುವಶಕ್ತಿಯ ಸದ್ಬಳಿಕೆ ಮಾಡಿಕೊಳ್ಳಬೇಕು ಎಂದರು.

ಸಮಾಜ ಸೇವೆಯು ಪ್ರಚಾರಕ್ಕಾಗಿ ಇರಬಾರದು. ಸಮಾಜದ ಹಿತ ಹಾಗೂ ಮಾನವೀಯತೆಗೆ ಸ್ಪಂದಿಸುವ ಕಳಕಳಿಯು ಸಮಾಜ ಸೇವೆಯಲ್ಲಿ ಇರಬೇಕು. ಅದರಿಂದ ಪ್ರತಿಫಲ ಬಯಸಬಾರದು ಎಂದು ಸಲಹೆ ನೀಡಿದರು.

ಮೂಡಲಗಿ ಲಯನ್ಸ್‌ ಪರಿವಾರವು ಪ್ರತಿ ತಿಂಗಳು ಎರಡು ಬಾರಿ ಆಸ್ಪತ್ರೆಯ ರೋಗಿಗಳಿಗೆ ಏರ್ಪಡಿಸುವ ಅನ್ನದಾಸೋಹವು ಶ್ಲಾಘನೀಯ ಸೇವೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮೂಡಲಗಿ ಪರಿವಾರದಿಂದ ವೀರನಗೌಡ ಹಾಗೂ ಸುವರ್ಣಾ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು. ಲಯನ್ಸ್‌ ಕ್ಲಬ್‌ ಅಧ್ಯಕ್ಷ ವೆಂಕಟೇಶ ಸೋನವಾಲ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಂಜಯ ಮೋಕಾಶಿ, ಟಿ.ಬಿ. ಕೆಂಚರಡ್ಡಿ, ಪುಲಕೇಶಿ ಸೋನವಾಲ್ಕರ್, ಮಹಾಂತೇಶ ಹೊಸೂರ, ಸುರೇಂದ್ರ ಅದಾಪ್ಪಗೋಳ, ವಿಜಯಕುಮಾರ ಸೋನವಾಲ್ಕರ್, ಗಿರೀಶ ಆಸಂಗಿ, ಸುಭಾಷ ಬಾಲನಾಯ್ಕ, ಶಿವಾನಂದ ಗಾಡವಿ,

ಉದಯಕುಮಾರ ಜೋಕಿ, ಶಿವಾನಂದ ಕಿತ್ತೂರ, ಶ್ರೀಶೈಲ್‌ ಲೋಕಣ್ಣವರ, ಎಸ್.ಜಿ. ಮೇಲಾನಟ್ಟಿ, ಸಂದೀಪ ಸೋನವಾಲ್ಕರ್, ಸುರೇಶ ನಾವಿ, ವಿಶಾಲ ಶೀಲವಂತ ಇದ್ದರು. ಈರಣ್ಣ ಕೊಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ಮಹಾವೀರ ಸಲ್ಲಾಗೋಳ ನಿರೂಪಿಸಿದರು. ಡಾ. ಬಿ.ಸಿ. ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.