ADVERTISEMENT

ವಿ–ಟೆಕ್ನಾಲಜಿ ಕ್ಯಾಂಪಸ್‌ ಡ್ರೈವ್‌ನಲ್ಲಿ ವಿ.ಎಸ್.ಎಂ.ಐ.ಟಿ. ವಿದ್ಯಾರ್ಥಿಗಳು ಆಯ್ಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:28 IST
Last Updated 3 ಫೆಬ್ರುವರಿ 2017, 6:28 IST
ವಿ–ಟೆಕ್ನಾಲಜಿ ಕ್ಯಾಂಪಸ್‌ ಡ್ರೈವ್‌ನಲ್ಲಿ ವಿ.ಎಸ್.ಎಂ.ಐ.ಟಿ. ವಿದ್ಯಾರ್ಥಿಗಳು ಆಯ್ಕೆ
ವಿ–ಟೆಕ್ನಾಲಜಿ ಕ್ಯಾಂಪಸ್‌ ಡ್ರೈವ್‌ನಲ್ಲಿ ವಿ.ಎಸ್.ಎಂ.ಐ.ಟಿ. ವಿದ್ಯಾರ್ಥಿಗಳು ಆಯ್ಕೆ   

ನಿಪ್ಪಾಣಿ: ಸ್ಥಳೀಯ ವಿ.ಎಸ್‌.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿ–ಟೆಕ್ನಾಲಜಿ ಕಂಪೆನಿ ಗುರುವಾರ ಕಾಲೇಜಿ ನಲ್ಲಿ ನಡೆಸಿದ ಕ್ಯಾಂಪಸ್‌ ಡ್ರೈವ್‌ನಲ್ಲಿ ಮಹಾ ವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ವೈಷ್ಣವಿ ಪಾಟೀಲ, ಅಸಾವರಿ ದೇವಲಾಪುರಕರ, ಅದೀಬಾ ಪಠಾಣ ಮತ್ತು ಜಿನ್ನತ್‌ ನಾಯಿಕ್‌ ಆಯ್ಕೆಗೊಂಡಿದ್ದಾರೆ.

ಸ್ಥಳೀಯ ಮಹಾವಿದ್ಯಾಲಯ ಸೇರಿದಂತೆ ನಿಡಸೋಸಿಯ ಹಿರಾಸುಗರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮತ್ತು ಕೊಲ್ಹಾಪುರದ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್‌ ಸಂದರ್ಶನದಲ್ಲಿ ಭಾಗವಹಿಸಿದ್ದರು.

ಲಿಖಿತ ಪರೀಕ್ಷೆ ಮೂಲಕ ಆರಂಭಗೊಂಡ ಈ ಆಯ್ಕೆ ಪ್ರಕ್ರಿಯೆಯಲ್ಲಿ ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನಗಳನ್ನು ಹಂತಹಂತವಾಗಿ ಹಮ್ಮಿಕೊಳ್ಳುವ ಮೂಲಕ ಕಂಪೆನಿಯು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿತು. ಸಂಸ್ಥೆಯ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಪ್ರಾಚಾರ್ಯ ಡಾ. ವಿ.ವಿ. ಕೋಹಿರ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.