ADVERTISEMENT

‘ಸಮಾನತೆಯ ಸಮಾಜದ ಹರಿಕಾರ ಬಸವಣ್ಣ’

​ಪ್ರಜಾವಾಣಿ ವಾರ್ತೆ
Published 17 ಮೇ 2017, 8:40 IST
Last Updated 17 ಮೇ 2017, 8:40 IST

ಬೆನಕಟ್ಟಿ (ತಾ.ಸವದತ್ತಿ): ‘ಸಮಾನತೆಯ ಮಹತ್ವವನ್ನು 12ನೇ ಶತಮಾನದಲ್ಲಿಯೇ  ಜಗಜ್ಯೋತಿ ಬಸವೇಶ್ವರರು ಜಗತ್ತಿಗೆ ತಿಳಿಸಿದ್ದರು. ಆ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ’ ಎಂದು ಮುನವಳ್ಳಿಯ ಮುರುಘೇಂದ್ರ ಸ್ವಾಮೀಜಿ ಹೇಳಿದರು.

ಅವರು ಸಮೀಪದ ಮದ್ಲೂರ ಗ್ರಾಮದಲ್ಲಿ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕರೆಪ್ಪ ಮುರಗೋಡ ಸಹೋದರರ ಮಕ್ಕಳ ಸಾಮೂಹಿಕ ವಿವಾಹ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ‘ಜಾತಿ, ಧರ್ಮದ ಸಂಕೋಲೆಯನ್ನು ಮುರಿದು, ಎಲ್ಲರೂ ಸಮಾನತೆಯಿಂದ ಬದುಕಬೇಕಾಗಿದೆ’ ಎಂದು ಹೇಳಿದರು.

ಗೋಕಾಕ ಶೂನ್ಯ ಸಂಪಾದನಾ ಮಠದ ಸುವರ್ಣಾದೇವಿ ಹೊಸಮಠ ಮಾತನಾಡಿ,  ಶ್ರೀಮಂತರು ತಮ್ಮ ಮಕ್ಕಳ ಮದುವೆಯಲ್ಲಿ ಬಡವರ ಮಕ್ಕಳ ಮದುವೆಯನ್ನೂ ಮಾಡಿದರೆ ಕಲ್ಯಾಣವಾಗುತ್ತದೆ ಎಂದರು.

ADVERTISEMENT

ಇಂಚಗೇರಿ ಮಠದ ಪ್ರಭೂಜಿ ಮಹಾರಾಜರು ಹಾಗೂ ಮಬನೂರ ಚಿಕ್ಕಶಿವಾನಂದ ಮಠದ ತುಕಾರಾಮ ಮಹಾರಾಜರು ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕರೆಪ್ಪ ಮುರಗೋಡ ಅಧ್ಯಕ್ಷತೆ ವಹಿಸಿದ್ದರು.

ಡಾ. ಎ. ಪಿ. ವಾಲಿ ಮಹಾರಾಜರು, ಶಾಸಕ ಆನಂದ ಮಾಮನಿ, ಮಾಜಿ ಶಾಸಕ ಸುಭಾಸ ಕೌಜಲಗಿ, ಸಿ. ಸಿ. ಪಾಟೀಲ, ಮಹಾದೇವಪ್ಪ ಯಾದವಾಡ, ಆರ್. ವಿ. ಪಾಟೀಲ, ಬಸವ ದಳದ ಗೌರವಾಧ್ಯಕ್ಷ ಆನಂದ ಚೋಪ್ರಾ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.