ADVERTISEMENT

ಅಗ್ನಿಶಾಮಕ ಇಲಾಖೆ ಜಾಗೃತಿ ರ್‌್ಯಾಲಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2015, 20:08 IST
Last Updated 20 ಏಪ್ರಿಲ್ 2015, 20:08 IST

ಬೆಂಗಳೂರು: ರಾಷ್ಟ್ರೀಯ ಅಗ್ನಿಶಾಮಕ ಸೇವಾ ಸಪ್ತಾಹದ ಕೊನೆಯ ದಿನವಾದ ಸೋಮವಾರ ನಗರದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಜಾಗೃತಿ ರ್‌್ಯಾಲಿ ಆಯೋಜಿಸಿತ್ತು.

ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆಯಿಂದ ಆರಂಭವಾದ ರ್‌್ಯಾಲಿಯು ಎಂ.ಜಿ.ರಸ್ತೆ, ಕಬ್ಬನ್‌ ರಸ್ತೆ, ಮಣಿಪಾಲ್ ‘ಟಿ’ ಜಂಕ್ಷನ್‌ ಮೂಲಕ ಸಾಗಿ, ಅಣ್ಣಾ ಸ್ವಾಮಿ ಮೊದಲಿಯಾರ್‌ ರಸ್ತೆಯಲ್ಲಿರುವ ಇಲಾಖೆಯ ಕೇಂದ್ರ ಕಚೇರಿ ಬಳಿ ಮುಕ್ತಾಯವಾಯಿತು.

ರ್‌್ಯಾಲಿಯಲ್ಲಿ ವಿವಿಧ ಮಾದರಿಯ 20ಕ್ಕೂ ಅಧಿಕ ವಾಹನಗಳೊಂದಿಗೆ ಇಲಾಖೆ ಸಿಬ್ಬಂದಿಯ ಒಂದು ತುಕಡಿ ಮತ್ತು ಬ್ಯಾಂಡ್‌ ತಂಡದವರು ಹೆಜ್ಜೆ ಹಾಕಿದರು.ಅಗ್ನಿ ಅನಾಹುತ ತಡೆಗಟ್ಟುವ ಮತ್ತು  ಅನಾಹುತ ಸಂಭವಿಸಿದಾಗ ಅನು ಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ಇರುವ ಕರಪತ್ರಗಳನ್ನು ದಾರಿಯುದ್ದಕ್ಕೂ ಹಂಚಲಾಯಿತು.

ಸಪ್ತಾಹದ ಅಂಗವಾಗಿ ದೇವನ ಹಳ್ಳಿಯಲ್ಲಿರುವ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಸಂಸ್ಥೆ, ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕಮಾಂಡೊ ಆಸ್ಪತ್ರೆ ಮತ್ತು ಮಹದೇವಪುರದ ಹೈಪರ್‌ ಸಿಟಿ ಮಾಲ್‌ನಲ್ಲಿ ಅಗ್ನಿ ಆಕಸ್ಮಿಕದ ಅಣಕು ಪ್ರದರ್ಶನ  ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.