ADVERTISEMENT

ಎರಡು ಕೃತಿ ಬಿಡುಗಡೆ

ಅನಂತಮೂರ್ತಿ ಗೌರವ ಮಾಲಿಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2013, 20:29 IST
Last Updated 28 ನವೆಂಬರ್ 2013, 20:29 IST
ಅಭಿನವ  ಪ್ರಕಾಶನವು  ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಅನಂತಮೂರ್ತಿ ಗೌರವ ಮಾಲಿಕೆಯ ಪ್ರಯುಕ್ತ ಹೊರತಂದಿರುವ ‘ನುಡಿಯೊಳಗಾಗಿ’, ‘ಜೆರೋನಿಮಾ’ ಕೃತಿಗಳನ್ನು ವಿಮರ್ಶಕ ಎಚ್‌.ಎಸ್‌.ರಾಘವೇಂದ್ರರಾವ್‌ ಬಿಡುಗಡೆ ಮಾಡಿದರು. ಲೇಖಕ ಓ.ಎಲ್‌.ನಾಗಭೂಷಣ ಸ್ವಾಮಿ, ಲೇಖಕಿ ಎಂ.ಎಸ್‌.ಆಶಾದೇವಿ, ‘ಪ್ರಜಾವಾಣಿ’ಯ ಮುಖ್ಯ ಉಪ ಸಂಪಾದಕ  ಎನ್‌.ಎ.ಎಂ.ಇಸ್ಮಾಯಿಲ್‌ ಚಿತ್ರದಲ್ಲಿದ್ದಾರೆ

ಬೆಂಗಳೂರು: ಅಭಿನವ  ಪ್ರಕಾಶನವು ಅನಂತಮೂರ್ತಿ ಗೌರವ ಮಾಲಿಕೆ­ಯಲ್ಲಿ  ಹೊರತಂದಿರುವ ‘ನುಡಿಯೊಳಗಾಗಿ’, ‘ಜೆರೋನಿಮಾ’ ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಗುರುವಾರ  ಬಿಡುಗಡೆ ಮಾಡಲಾಯಿತು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ವಿಮರ್ಶಕ ಎಚ್‌.ಎಸ್‌.ರಾಘವೇಂದ್ರ­ರಾವ್‌,  ‘ನುಡಿಯೊಳಗಾಗಿ ಕೃತಿಯು ನುಡಿಯಲ್ಲಿ ಮನುಷ್ಯ ಒಂದಾದ ರೀತಿಯನ್ನು ವಿವರಿಸುತ್ತದೆ. ಭಾಷೆಯ ಕುರಿತ ಅಂಕಣಗಳ ಬರಹವಾದರೂ ಅದರ ಜತೆಗೆ ಮಾಹಿತಿ, ಆಲೋಚನೆ, ಭಾವನೆ, ವಿಚಾರಗಳು  ಬೆಸೆದುಕೊಂಡಿವೆ’ ಎಂದರು.

ವಿಮರ್ಶಕಿ  ಎಂ.ಎಸ್‌.ಆಶಾದೇವಿ, ‘ಜೆರೋನಿಮಾ ಕೃತಿಯು ಸ್ವಾತಂತ್ರ್ಯ, ಸಮಾನತೆಯ ಬಗೆಗಿನ ಹೋರಾಟ ಮತ್ತು ಶೋಷಣೆಯ ಇನ್ನಿತರ ಮುಖಗಳನ್ನು ಬಿಚ್ಚಿಡುತ್ತದೆ’ ಎಂದು ಹೇಳಿದರು.

ಕೃತಿಗಳ ವಿವರ: ಓ.ಎಲ್‌.ನಾಗ­ಭೂಷಣ ಸ್ವಾಮಿ ಅವರ ‘ನುಡಿಯೊಳ­ಗಾಗಿ ಭಾಷಾ ಚಿಂತನೆ’. ಬೆಲೆ– ₨ 300. ‘ಜೆರೋನಿಮಾ ಆದಿವಾಸಿಯ ಆತ್ಮಕಥನ’ ಅನುವಾದ–ಪತ್ರಕರ್ತ ಎನ್‌.ಎ.ಎಂ.ಇಸ್ಮಾಯಿಲ್. ಬೆಲೆ–ರೂ75.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.