ADVERTISEMENT

‘ಐಎಎಸ್‌ ಅಧಿಕಾರಿಗಳು ಸಮಾಜದ ಋಣ ತೀರಿಸಲಿ’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2017, 19:30 IST
Last Updated 17 ಮಾರ್ಚ್ 2017, 19:30 IST
ಕೃತಿಯನ್ನು ಸುಭಾಷ್‌ ಚಂದ್ರ ಖುಂಟಿಅ (ಎಡದಿಂದ ಮೂರನೆಯವರು) ಬಿಡುಗಡೆ ಮಾಡಿದರು. ಪಿಎಸಿ ನಿರ್ದೇಶಕ ಗುರುಚರಣ್‌ ಗೊಲ್ಲರಕೇರಿ, ಎಂ.ಎನ್‌.ವೆಂಕಟಾಚಲಯ್ಯ ಹಾಗೂ ಸಿ.ಕೆ.ಮ್ಯಾಥ್ಯೂ ಇದ್ದಾರೆ. –ಪ್ರಜಾವಾಣಿ ಚಿತ್ರ
ಕೃತಿಯನ್ನು ಸುಭಾಷ್‌ ಚಂದ್ರ ಖುಂಟಿಅ (ಎಡದಿಂದ ಮೂರನೆಯವರು) ಬಿಡುಗಡೆ ಮಾಡಿದರು. ಪಿಎಸಿ ನಿರ್ದೇಶಕ ಗುರುಚರಣ್‌ ಗೊಲ್ಲರಕೇರಿ, ಎಂ.ಎನ್‌.ವೆಂಕಟಾಚಲಯ್ಯ ಹಾಗೂ ಸಿ.ಕೆ.ಮ್ಯಾಥ್ಯೂ ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಐಎಎಸ್‌ ಅಧಿಕಾರಿಗಳು ಇತರರಿಗಿಂತ ಹೆಚ್ಚಾಗಿ ಸಮಾಜದ ಋಣವನ್ನು ತೀರಿಸಬೇಕು’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಖುಂಟಿಅ ಹೇಳಿದರು.

ಪಬ್ಲಿಕ್‌ ಅಫೇರ್‍ಸ್‌ ಸೆಂಟರ್‌ (ಪಿಎಸಿ) ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಿಎಸಿಯ ಸಾರ್ವಜನಿಕ ನೀತಿ ಸಂಶೋಧನಾ ತಂಡದ ಮುಖ್ಯಸ್ಥ ಡಾ.ಸಿ.ಕೆ.ಮ್ಯಾಥ್ಯೂ ಅವರ ಸಂಪಾದಕತ್ವದ ‘ಇನ್‌ ದಿ ರೇರ್‌ ವಿವ್ ಮಿರರ್‌: ರಿಫ್ಲೆಕ್ಷನ್ ಆಫ್ ಚೀಫ್ ಸೆಕ್ರೆಟರೀಸ್’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘1972–79ರ ನಡುವಿನ ಬ್ಯಾಚ್‌ಗಳ ಐಎಎಸ್‌ ಅಧಿಕಾರಿಗಳು ತಮ್ಮ ಅನುಭವಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಕೃತಿ ನಾಗರಿಕ ಸೇವೆಗಳ ಒಳನೋಟಗಳನ್ನು ತೆರೆದಿಡುತ್ತದೆ’ ಎಂದರು.

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ ಮಾತನಾಡಿ, ‘ಹಿರಿಯ ಅಧಿಕಾರಿಗಳಿಗೆ ರಾಜಕಾರಣಿಗಳಿಗಿಂತ ಸಹೋದ್ಯೋಗಿಗಳನ್ನು ನಿಭಾಯಿಸುವುದು ಹೆಚ್ಚು ಕಷ್ಟ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನೀಡುವ ಜವಾಬ್ದಾರಿ ಅವರ ಮೇಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.