ADVERTISEMENT

ಜ.13ರಿಂದ ವಿಶ್ವ ತುಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 20:09 IST
Last Updated 16 ಅಕ್ಟೋಬರ್ 2017, 20:09 IST

ಬೆಂಗಳೂರು:ಅಖಿಲ ಭಾರತ ತುಳು ಒಕ್ಕೂಟವು 2018ರ ಜನವರಿ 13 ಮತ್ತು 14ರಂದು ವಿಶ್ವ ತುಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವನ್ನು ಸೆಂಟ್ರಲ್‌ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದೆ.

ಈ ಕುರಿತು ಸೋಮವಾರ ಇಲ್ಲಿ ಮಾಹಿತಿ ನೀಡಿದ ಸಾಹಿತಿ ಉದಯ ಧರ್ಮಸ್ಥಳ, ‘1983ರ ನಂತರ ತುಳು ಸಾಹಿತ್ಯ ಸಮ್ಮೇಳನಗಳು ನಡೆದಿಲ್ಲ. 2,500 ವರ್ಷಗಳ ಇತಿಹಾಸ ಇರುವ ತುಳು ಭಾಷೆಗೆ ಸರ್ಕಾರದಿಂದ ಸೂಕ್ತವಾದ ಸ್ಥಾನಮಾನ ದೊರೆತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಲ್ಲ ತುಳು ಭಾಷಿಕರನ್ನೂ ಒಗ್ಗೂಡಿಸಿ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವುದೇ ಸಮ್ಮೇಳನದ ಪ್ರಮುಖ ಉದ್ದೇಶ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.