ADVERTISEMENT

ಡಿ.17ರಿಂದ ಬೆಂಗಳೂರು ಸಾಹಿತ್ಯ ಉತ್ಸವ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:59 IST
Last Updated 4 ಡಿಸೆಂಬರ್ 2016, 19:59 IST

ಬೆಂಗಳೂರು: ಐದನೇ ಆವೃತ್ತಿಯ ‘ಬೆಂಗಳೂರು ಸಾಹಿತ್ಯ ಉತ್ಸವ’ವು ನಗರದಲ್ಲಿ ಡಿ. 17 ಮತ್ತು 18ರಂದು ನಡೆಯಲಿದೆ. ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಹೋಟೆಲ್‌ ರಾಯಲ್‌ ಆರ್ಕಿಡ್‌ನಲ್ಲಿ ಉತ್ಸವವನ್ನು ಆಯೋಜಿಸಲಾಗಿದೆ.

ಪ್ರಸಕ್ತ ವಿದ್ಯಮಾನ, ಜಾಹೀರಾತು, ಚರಿತ್ರೆ, ಸಮಕಾಲೀನ ರಾಜಕೀಯ, ಯುವ ಸಾಹಿತ್ಯ, ಸಿನಿಮಾ, ಕವಿತೆ, ಅಪರಾಧ ವಿಷಯಗಳ ಕುರಿತು ಎರಡು ದಿನ ಚರ್ಚಾಗೋಷ್ಠಿಗಳು ನಡೆಯಲಿವೆ.

ಮೂರು ವಿಭಾಗಗಳಲ್ಲಿ ಪ್ರಶಸ್ತಿ: ಇದೇ ಮೊದಲ ಬಾರಿಗೆ ಮೂರು ವಿಭಾಗಗಳಲ್ಲಿ ಪ್ರಶಸ್ತಿ ನೀಡಲು ‘ಆಟ ಗಲಾಟಾ’ ಸಂಸ್ಥೆ ನಿರ್ಧರಿಸಿದೆ. ‘₹2 ಲಕ್ಷ ಮೊತ್ತದ ಈ ಪ್ರಶಸ್ತಿಯನ್ನು ಮೂವರ ಮಧ್ಯೆ ಸಮಾನವಾಗಿ ಹಂಚಿಕೆ ಮಾಡಲಾಗುವುದು’ ಎಂದು ತಿಳಿಸಿದೆ.

ಲಿಟ್‌ಮಾರ್ಟ್‌: ಯುವ ಲೇಖಕರು ತಮ್ಮ ಪುಸ್ತಕಗಳನ್ನು ಪರಿಚಯಿಸಿಕೊಳ್ಳಲು ಲಿಟ್‌ಮಾರ್ಟ್‌ ವೇದಿಕೆ ಒದಗಿಸುತ್ತದೆ.   ಲಿಟ್‌ಮಾರ್ಟ್‌ ಪಿಚ್‌ನಲ್ಲಿ 25 ಲೇಖಕರಿಗೆ ಮಾತ್ರ ಅವಕಾಶವಿದೆ. ಆಯ್ಕೆಯಾದ ಪುಸ್ತಕಗಳ ಲೇಖಕರ ಪಟ್ಟಿಯನ್ನು ಡಿ.6ರಂದು ಬಿಡುಗಡೆ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಪ್ರತಿನಿಧಿಗಳಾಗಿ ಹೆಸರು ನೋಂದಣಿ ಮಾಡಿಸಲು ಮತ್ತು ಹೆಚ್ಚಿನ ಮಾಹಿತಿಗೆ www.bangaloreliteraturefestival.org ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.