ADVERTISEMENT

ತ್ಯಾಜ್ಯ ನಿರ್ವಹಣೆಗೆ ಸ್ವೀಡನ್‌ ಮಾದರಿ’

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 19:35 IST
Last Updated 22 ಸೆಪ್ಟೆಂಬರ್ 2014, 19:35 IST
ನಗರಾಭಿವೃದ್ಧಿ ಇಲಾಖೆ ಸೋಮವಾರ ಆಯೋಜಿಸಿದ್ದ ‘ಸುಸ್ಥಿರ ಸಾರಿಗೆ: ಭಾರತ -ಸ್ವೀಡನ್ ದೃಷ್ಟಿಕೋನ’ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸ್ವೀಡನ್‌ ಸಾರಿಗೆ ಸಚಿವಾಲಯದ ಹಿರಿಯ ಸಲಹೆಗಾರ  ಜೋನಸ್ ಹಾಫ್ಸ್‌ಟ್ರಾಮ್‌ ಅವರನ್ನು ಸ್ವಾಗತಿಸಿದರು. ನಗರಾಭಿವೃದ್ಧಿ ಸಚಿವ ವಿನಯ್‌ಕುಮಾರ್‌ ಸೊರಕೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಭಾರತದಲ್ಲಿನ ಸ್ವೀಡನ್‌ ರಾಯಭಾರಿ ಹೆರಾಲ್ಡ್ ಸ್ಯಾಂಡ್‌ಬರ್ಗ್ ಉಪಸ್ಥಿತರಿದ್ದರು	– ಪ್ರಜಾವಾಣಿ ಚಿತ್ರ
ನಗರಾಭಿವೃದ್ಧಿ ಇಲಾಖೆ ಸೋಮವಾರ ಆಯೋಜಿಸಿದ್ದ ‘ಸುಸ್ಥಿರ ಸಾರಿಗೆ: ಭಾರತ -ಸ್ವೀಡನ್ ದೃಷ್ಟಿಕೋನ’ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸ್ವೀಡನ್‌ ಸಾರಿಗೆ ಸಚಿವಾಲಯದ ಹಿರಿಯ ಸಲಹೆಗಾರ ಜೋನಸ್ ಹಾಫ್ಸ್‌ಟ್ರಾಮ್‌ ಅವರನ್ನು ಸ್ವಾಗತಿಸಿದರು. ನಗರಾಭಿವೃದ್ಧಿ ಸಚಿವ ವಿನಯ್‌ಕುಮಾರ್‌ ಸೊರಕೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಭಾರತದಲ್ಲಿನ ಸ್ವೀಡನ್‌ ರಾಯಭಾರಿ ಹೆರಾಲ್ಡ್ ಸ್ಯಾಂಡ್‌ಬರ್ಗ್ ಉಪಸ್ಥಿತರಿದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿನ ತ್ಯಾಜ್ಯ ನಿರ್ವಹಣೆಗೆ ಸ್ವೀಡನ್‌ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾ­ಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನವದೆಹಲಿಯ ಸ್ವೀಡನ್ ರಾಯಭಾರ ಕಚೇರಿ, ಬಿಸಿನೆಸ್ ಸ್ವೀಡನ್ ಮತ್ತು ರಾಜ್ಯ ನಗರಾಭಿವೃದ್ಧಿ ಇಲಾಖೆ ಆಯೋಜಿಸಿದ್ದ ‘ಸುಸ್ಥಿರ ಸಾರಿಗೆ: ಭಾರತ ಸ್ವೀಡನ್‌ ದೃಷ್ಟಿಕೋನ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ತ್ಯಾಜ್ಯ ನಿರ್ವಹಣೆಗೆ ಸ್ವೀಡನ್‌ ಮಾದರಿ­ಯಾಗಿದೆ. ಅಲ್ಲಿ ಶೇ 99 ತ್ಯಾಜ್ಯ ಮರುಬಳಕೆ­ಯಾಗುತ್ತಿದೆ. ಇತ್ತೀಚೆಗೆ ಸರ್ಕಾರದ ಅಧಿಕಾರಿಗಳ ತಂಡ ಸ್ವೀಡನ್‌ಗೆ ಭೇಟಿ ನೀಡಿ ಅಲ್ಲಿನ ತ್ಯಾಜ್ಯ ನಿರ್ವಹಣಾ ಘಟಕ, ಸಾರಿಗೆ ವ್ಯವಸ್ಥೆಗಳನ್ನು ವೀಕ್ಷಿ ಸಿದೆ. ಅದರ ಫಲವಾಗಿ ಸ್ವೀಡನ್‌ನ ಸಾರಿಗೆ ಮತ್ತು ತ್ಯಾಜ್ಯ ನಿರ್ವಹಣೆಯ  ತಜ್ಞರ ತಂಡ ಇಲ್ಲಿಗೆ  ಬಂದಿದ್ದು ಅವರ ಸಲಹೆ ಪಡೆಯಲಾಗುವುದು ಎಂದರು.

ನಗರದ ವಾಹನ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ  ಸೈಕಲ್‌ ಬಳಕೆಗೆ ಪ್ರೋತ್ಸಾಹ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು. ಭಾರತದಲ್ಲಿನ ಸ್ವೀಡನ್‌ ರಾಯಭಾರಿ ಎಚ್.ಇ.ಹೆರಾಲ್ಡ್ ಸ್ಯಾಂಡ್‌ಬರ್ಗ್ ಮಾತನಾಡಿ, ‘ಸ್ವೀಡನ್‌ ದೇಶದ ಕಂಪೆನಿಗಳು ೧೦೦ಕ್ಕೂ ಹೆಚ್ಚು ವರ್ಷಗಳಿಂದ ಭಾರತದಲ್ಲಿವೆ. ೧೩೫ ಕಂಪೆನಿಗಳು ನೇರವಾಗಿ ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸಿವೆ.  ನಾವು ಪರಿಸರ ಸಂರ ಕ್ಷಣೆಯ ಪರಿಹಾರೋಪಾಯಗಳನ್ನು ಹಂಚಿ­ಕೊಳ್ಳಲು ಸಿದ್ಧರಿದ್ದೇವೆ. ಸಾರಿಗೆ  ವಲಯದಲ್ಲಿ ನಮ್ಮ ಸಂಬಂಧ ವಿಸ್ತರಿಸಲು ಒದೊಂದು ಒಳ್ಳೆಯ ಅವಕಾಶ’ ಎಂದರು.

ಸ್ವೀಡನ್‌ ಸಾರಿಗೆ ಸಚಿವಾಲಯದ ಹಿರಿಯ ಸಲಹೆಗಾರ  ಜೋನಾಸ್ ಹಾಫ್ಸ್‌ಟ್ರಾಮ್ ಮಾತ­­ನಾಡಿ, ‘ಸುಸ್ಥಿರ ಪರಿಹಾರಗಳನ್ನು ಪ್ರೋತ್ಸಾಹಿ­ಸುವವರ ಜೊತೆಗೆ ನಾವು ಸದಾ ಇರುತ್ತೇವೆ.  ನಮ್ಮ ಆದ್ಯತೆ ತ್ಯಾಜ್ಯ ಮರುಬಳಕೆ ಮತ್ತು ಸಾರಿಗೆ ದಟ್ಟಣೆ ಕಡಿಮೆ ಮಾಡುವುದು’ ಎಂದರು.

ನಗರಾಭಿವೃದ್ಧಿ ಸಚಿವ  ವಿನಯ್ ಕುಮಾರ್ ಸೊರಕೆ ಮಾತನಾಡಿ,   ‘ರಾಜ್ಯದಲ್ಲಿ 230 ಪಟ್ಟಣಗಳಿದ್ದು, 135 ಪಟ್ಟಣಗಳ ಸಮಗ್ರ ಅಭಿ ವೃದ್ಧಿಗೆ  ನೀಲನಕ್ಷೆ ಸಿದ್ಧಪಡಿಸಲಾಗಿದೆ.  ಅವ್ಯವ ಹಾರ ತಡೆಯಲು ಟೌನ್‌ ಪ್ಲಾನಿಂಗ್‌ ಕಮಿಷನ್‌  ನೇಮಕ ಮಾಡಲಾಗುವುದು ಎಂದರು.
ಭೂಸಾರಿಗೆ ಆಯುಕ್ತರಾದ ವಿ.ಮಂಜುಳಾ,  ಈಶಾನ್ಯ ಸಾರಿಗೆ ವಿಭಾಗೀಯ ಸಂಚಾರ ನಿಯಂ­ತ್ರಣ ಅಧಿಕಾರಿ  ಬಸಲಿಂಗಪ್ಪ ಬೀಡಿ, ಬಿಎಂಆರ್‌­ಸಿಎಲ್‌  ಹೆಚ್ಚುವರಿ ಮುಖ್ಯ ಎಂಜಿನಿಯರ್‌ ಕೆ.ಆರ್‌.ಶಿವಾನಂದ, ಪಶ್ಚಿಮ ವಲಯ ಎಸಿಪಿ ಸೈಯದ್‌ ಅಶ್ರಫ್‌ ಪಾಶಾ, ಬೆಂಗಳೂರು ಜಲ­ಮಂಡಳಿ  ಅಧ್ಯಕ್ಷ ಅಂಜುಂ ಪರ್ವೇಜ್‌ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಸಾರಿಗೆ ಸಚಿವ   ರಾಮಲಿಂಗಾ ರೆಡ್ಡಿ,  ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ಸತ್ಯಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.