ADVERTISEMENT

ನಿಧನ ವಾರ್ತೆ

​ಪ್ರಜಾವಾಣಿ ವಾರ್ತೆ
Published 23 ಮೇ 2013, 19:57 IST
Last Updated 23 ಮೇ 2013, 19:57 IST

ಸಿದ್ದಬಸಮ್ಮ
ಬೆಂಗಳೂರು:
ಚಿತ್ರ ನಟ ಡಾ.ಚಿಕ್ಕಹೆಜ್ಜಾಜಿ ಮಹಾದೇವ್ ಅವರ ತಾಯಿ ಸಿದ್ದಬಸಮ್ಮ (80) ಅವರು ಗುರುವಾರ ನಿಧನರಾದರು. ಮೃತರ ದೇಹ ಹಾಗೂ ಕಣ್ಣುಗಳನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಗಿದೆ.

ನಗರದ ಲಗ್ಗೆರೆ ಸಮೀಪದ ಎಂ.ಇ.ಐ ಕಾಲೋನಿಯ ಚಿಕ್ಕಹೆಜ್ಜಾಜಿ ಸಿದ್ದಲಿಂಗಯ್ಯ ಅವರ ಪತ್ನಿ ಸಿದ್ದಬಸಮ್ಮ ಅವರು ಸಂಗೀತ ಕಲಾವಿದೆಯಾಗಿದ್ದರು. ಅವರು ನಟರಾದ ಡಾ.ರಾಜ್‌ಕುಮಾರ್ ಹಾಗೂ ಲೋಕೇಶ್ ಅವರ ಮೇಲೆ ಅಪಾರ ಅಭಿಮಾನ ಹೊಂದಿದ್ದರು.

ಹೀಗಾಗಿ ಡಾ.ರಾಜ್‌ಕುಮಾರ್ ಅವರ ನೇತ್ರದಾನ ಹಾಗೂ ಲೋಕೇಶ್ ಅವರ ದೇಹದಾನದಿಂದ ಪ್ರೇರಣೆಗೊಂಡು ತಮ್ಮ  ದೇಹ ಹಾಗೂ ಕಣ್ಣುಗಳನ್ನು ನಿಧನ ನಂತರ ದಾನ ಮಾಡಲು 2011ರಲ್ಲಿ ನಿರ್ಧರಿಸಿದ್ದರು. ಅವರು ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.