ADVERTISEMENT

ನೈರುತ್ಯ ರೈಲ್ವೆ ಬಳಕೆದಾರರ ಅಹವಾಲು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 29 ಮೇ 2015, 20:08 IST
Last Updated 29 ಮೇ 2015, 20:08 IST

ಬೆಂಗಳೂರು: ನೈರುತ್ಯ ರೈಲ್ವೆ  ವಿಭಾಗೀಯ ಕಚೇರಿಯಲ್ಲಿ ಶುಕ್ರವಾರ ‘ನೈರುತ್ಯ ರೈಲ್ವೆ ಬಳಕೆದಾರರ ಸಮನ್ವಯ ಸಮಿತಿ’ ಸಭೆ ನಡೆಯಿತು. ಮೈಸೂರು, ಕೋಲಾರ, ತುಮಕೂರು, ಯಶವಂತಪುರ, ಪೀಣ್ಯ ಮುಂತಾದ ಭಾಗಗಳ ರೈಲ್ವೆ ಬಳಕೆದಾರ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತುಮಕೂರಿನಿಂದ ಅರಸೀಕೆರೆಗೆ ಹೆಚ್ಚುವರಿ ರೈಲು ಓಡಿಸಬೇಕು. ತುಮಕೂರು ರೈಲು ನಿಲ್ದಾಣದ ದ್ವಿಚಕ್ರ ವಾಹನ ನಿಲ್ದಾಣವನ್ನು ಸರಿಪಡಿಸಬೇಕು. ಯಶವಂತಪುರದಲ್ಲಿ ಸ್ವಯಂಚಾಲಿತ ಸಂಕೇತ ವ್ಯವಸ್ಥೆ ಕಲ್ಪಿಸಬೇಕು. ಬಂಗಾರಪೇಟೆ –ಮೈಸೂರು ಮಾರ್ಗದಲ್ಲಿ  ಸಂಚರಿಸುವ ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಬೇಕು.  ರೈಲ್ವೆ ಬೋಗಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಬದಲು ಭದ್ರತಾ  ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಪ್ರಯಾಣಿಕರು ಮನವಿ ಮಾಡಿದರು.
ತುಮಕೂರು ರೈಲ್ವೆ ನಿಲ್ದಾಣದಲ್ಲಿ  ಮೇಲಂತಸ್ತಿನ ವಾಹನ ನಿಲುಗಡೆ ಸ್ಥಾಪನೆಗೆ ಅನುಮತಿ ಸಿಕ್ಕಿದೆ. ಸ
ದ್ಯದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು. ಉಳಿದಂತೆ ಹೆಚ್ಚುವರಿ ರೈಲು ಓಡಾಟದ ಬೇಡಿಕೆಗಳನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂಜೀವ್‌ ಅಗರವಾಲ್‌ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.