ADVERTISEMENT

ಬಿಬಿಎಂಪಿ ಕಸದ ಲಾರಿ ಡಿಕ್ಕಿ: ರೈತ ಸಾವು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 20:25 IST
Last Updated 5 ಅಕ್ಟೋಬರ್ 2015, 20:25 IST
ಬಿಬಿಎಂಪಿ ಕಸ ವಿಲೇವಾರಿ ಲಾರಿಯೊಂದು ಡಿಕ್ಕಿ ಹೊಡೆದು ಮೃತಪಟ್ಟ ರೈತ ಮೃತ್ಯುಂಜಯ  ಅವರ ಶವವಿಟ್ಟು ರಾಷ್ಟ್ರೀಯ ಹೆದ್ದಾರಿ 206ರಲ್ಲಿ  ಪ್ರತಿಭಟನೆ ನಡೆಸಲಾಯಿತು
ಬಿಬಿಎಂಪಿ ಕಸ ವಿಲೇವಾರಿ ಲಾರಿಯೊಂದು ಡಿಕ್ಕಿ ಹೊಡೆದು ಮೃತಪಟ್ಟ ರೈತ ಮೃತ್ಯುಂಜಯ ಅವರ ಶವವಿಟ್ಟು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಪ್ರತಿಭಟನೆ ನಡೆಸಲಾಯಿತು   

ದೊಡ್ಡಬಳ್ಳಾಪುರ: ಬಿಬಿಎಂಪಿ ಕಸ ವಿಲೇವಾರಿ ಮಾಡುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ದ್ಯಾವಸಂದ್ರದಲ್ಲಿ ನಡೆದಿದೆ.

ದ್ಯಾವಸಂದ್ರದಲ್ಲಿನ ಬಿಬಿಎಂಪಿ ಕಸ ವಿಲೇವಾರಿ ಘಟಕದಲ್ಲಿ ಕಸ ಸುರಿದು ಲಾರಿ ವಾಪಸ್‌ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ದ್ಯಾವಸಂದ್ರ ಗ್ರಾಮದ ರೈತ ಮೃತ್ಯುಂಜಯ (55) ಮೃತಪಟ್ಟವರು. ತೀವ್ರ ಗಾಯಗೊಂಡಿದ್ದ ಮೃತ್ಯುಂ ಜಯ ಅವರನ್ನು ಯಲಹಂಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟರು.

ತುಮಕೂರು–ದೊಡ್ಡಬಳ್ಳಾಪುರ ರಸ್ತೆ ಬದಿಯಲ್ಲಿರುವ ತೋಟದಲ್ಲಿನ ಕೆಲಸ ಮುಗಿಸಿಕೊಂಡು ನಡೆದು ಹೋಗು ತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ‘ಕಸ ತುಂಬಿಕೊಂಡು ಬರುವ ಲಾರಿ ಚಾಲಕರು ಕುಡಿದ ಅಮ ಲಿನಲ್ಲಿ ಲಾರಿಗಳನ್ನು ಚಲಾಯಿಸುತ್ತಾರೆ. ಹೀಗಾಗಿ ಈ ಭಾಗದಲ್ಲಿ ಇತ್ತೀಚೆಗೆ ಅಪ ಘಾತಗಳು ಸಾಮಾನ್ಯವಾಗಿವೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿ ಸಿದರು. ಲಾರಿ ಚಾಲಕ ಪರಾರಿಯಾಗಿದ್ದಾನೆ.

ಲಾಠಿ ಪ್ರಹಾರ: ರೈತರ ಸಾವಿನ ಪ್ರಕರಣದಿಂದ ರೊಚ್ಚಿಗೆದ್ದು ರಸ್ತೆ ತಡೆ ನಡೆಸುತ್ತಿದ್ದ ಗ್ರಾಮಸ್ಥರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ ಪ್ರಸಂಗ ತಾಲ್ಲೂಕಿನ ದ್ಯಾವ ಸಂದ್ರದಲ್ಲಿ ಸೋಮವಾರ ಸಂಜೆ ನಡೆಯಿತು.

₹ 15 ಲಕ್ಷ ಪರಿಹಾರ : ಸೋಮವಾರ ಮಧ್ಯಾಹ್ನ 2 ಗಂಟೆಯಿಂದಲೂ ದ್ಯಾವ ಸಂದ್ರದ ಸಮೀಪ ತೋಟದ ಮನೆಯಲ್ಲಿ ಶಾಸಕ ಟಿ. ವೆಂಕಟರಮಣಯ್ಯ ಅವರ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಎಂಜಿನಿಯರ್‌ ಪರಮೇಶ್ವರಪ್ಪ, ಮೃತರ ಸಂಬಂಧಿಕರು ಹಾಗೂ ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಸತತ ಮೂರು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ ಮೃತರ ಕುಟುಂಬಕ್ಕೆ ₹ 15 ಲಕ್ಷ ಪರಿಹಾರ ನೀಡುವಂತೆ  ಅಧಿಕಾರಿಗಳಿಂದ ಕರಾರು ಪತ್ರ ಬರೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.