ADVERTISEMENT

ಬೆಂಗಳೂರು–ಕ್ವಾಲಾಲಂಪುರಕ್ಕೆ ವಿಮಾನ ಸೇವೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 20:23 IST
Last Updated 13 ನವೆಂಬರ್ 2017, 20:23 IST

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎಎಲ್) 2017-18ನೇ ಸಾಲಿನ ಚಳಿಗಾಲದ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ವಿಮಾನಯಾನ ಸಂಸ್ಥೆ ಮಲಿಂಡೊ ಏರ್ ವಾರದಲ್ಲಿ ಎರಡು ದಿನ ಕ್ವಾಲಾಲಂಪುರಕ್ಕೆ ನೇರ ವಿಮಾನ ಸೇವೆಯನ್ನು ಆರಂಭಿಸಿದೆ.

ಡಿಎಚ್‍ಎಲ್ ಏವಿಯೇಷನ್ ಸಂಸ್ಥೆಯು (ಕಾರ್ಗೊ) ವಾರಕ್ಕೊಮ್ಮೆ ಬೆಂಗಳೂರಿನಿಂದ ಬಹರೇನ್‍ಗೆ ಹಾಗೂ ಜೆಟ್‌ ಏರ್‌ವೇಸ್ ಸಂಸ್ಥೆಯು ಅಮ್‍ಸ್ಟರ್‍ಡ್ಯಾಂಗೆ ವಿಮಾನ ಸೇವೆಯನ್ನು ಪ್ರಾರಂಭಿಸಿದೆ. ಡಿಸೆಂಬರ್ 20ರಿಂದ ಬೆಂಗಳೂರಿನಿಂದ ತಿರುಪತಿಗೆ ನಿತ್ಯ ಎರಡು ವಿಮಾನಗಳ ಹಾರಾಟ ಸೇವೆಗೆ ಇಂಡಿಗೊ ಸಂಸ್ಥೆಯು ಮುಂದಾಗಿದೆ.

2017-18ನೇ ಸಾಲಿನ ಚಳಿಗಾಲದ ಅವಧಿಯಲ್ಲಿ ಪ್ರತಿನಿತ್ಯ ವಾಯು ಮಾರ್ಗ ಸಂಚಾರ ದಟ್ಟಣೆ (ಎಟಿಎಂ) ಪ್ರಮಾಣವು 614 ಇದ್ದು, ಇದು 660ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಚಳಿಗಾಲದ ಅವಧಿಯಲ್ಲಿ ಯೋಜಿತ ಅಂತರರಾಷ್ಟ್ರೀಯ ಸಂಚಾರ ಸೇವೆಯು ಶೇ 7ರಷ್ಟು ಪ್ರಗತಿ ಕಾಣುವ ನಿರೀಕ್ಷೆಯಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.