ADVERTISEMENT

ಮತದಾರರ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ಬೆಂಗಳೂರು: ಬಿಬಿಎಂಪಿ ಚುನಾವಣೆ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ಅಭಿವೃದ್ಧಿ ಸಮಿತಿಯಿಂದ ಜುಲೈ 6ರಂದು ಬೆಳಿಗ್ಗೆ 11ಕ್ಕೆ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಮತದಾರರ ಜಾಗೃತಿ ಜ್ಯೋತಿ ಬೆಳಗಲಿದ್ದಾರೆ. ನ್ಯಾ. ಎನ್. ಸಂತೋಷ್ ಹೆಗ್ಡೆ, ಕಾತ್ಯಾಯಿನಿ ಚಾಮರಾಜ್, ಡಾ. ಗೀತಾ ರಾಮಾನುಜಂ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.

ಪಾಲಿಕೆಯಲ್ಲಿ ಆಗಿರುವ ಸಾವಿರಾರು ಕೋಟಿ ವೆಚ್ಚಕ್ಕೆ ಲೆಕ್ಕ ಕೇಳುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಜಾಗೃತ ಮತದಾರರಿಂದಲೇ ಪಾರದರ್ಶಕ, ಜನಸ್ಪಂದನೆಯುಳ್ಳ ಆಡಳಿತ ರೂಪಿಸಲು ಸಾಧ್ಯ. ಪವಿತ್ರ ಮತ ಮಾರಿಕೊಳ್ಳದೆ ಉತ್ತರದಾಯಿತ್ವಕ್ಕೆ ಬದ್ಧವಾದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂಬುದು ಅಭಿಯಾನದ ಮುಖ್ಯ ಧ್ಯೇಯವಾಗಿದೆ ಎನ್ನುತ್ತಾರೆ ಸಂಘಟಕರು.

ಸಂಪರ್ಕಕ್ಕೆ: 99722 31707, 99802 34075

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.