ADVERTISEMENT

ಮಧ್ಯಾಹ್ನ ಬಿಸಿಲು, ಸಂಜೆ ಮಳೆ...

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 19:47 IST
Last Updated 23 ಅಕ್ಟೋಬರ್ 2014, 19:47 IST

ಬೆಂಗಳೂರು: ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲಿನಿಂದ ಕಾದಿದ್ದ ನೆಲಕ್ಕೆ ಸಂಜೆ ವರುಣನ ಸ್ಪರ್ಶವಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಡಿನ­ಲ್ಲಿದ್ದವರು ನಿರಾಸೆ­ಗೊಳಗಾದರು. ಕೆಲ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.

ಖರೀದಿಗೆಂದು ಮಾರು­ಕಟ್ಟೆಗೆ ಬಂದ­ವರು ಬೇಗನೇ ಮನೆಗೆ ವಾಪಸಾ­ದರು. ಹವಾಮಾನ ಇಲಾಖೆಯ ಪ್ರಕಾರ ರಾತ್ರಿ 8.30ರ ವೇಳೆಗೆ ನಗರದಲ್ಲಿ 7.5 ಮಿ.ಮೀ ಮಳೆಯಾಗಿತ್ತು. ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 5.5 ಮಿ.ಮೀ ಹಾಗೂ ಯಲಹಂಕದಲ್ಲಿ 9 ಮಿ.ಮೀ ಮಳೆ ದಾಖಲಾಗಿತ್ತು.

ಟುಸ್ಸೆಂದ ಪಟಾಕಿ: ಹಬ್ಬದ ಸಡಗರಕ್ಕಾಗಿ ಪಟಾಕಿ ಖರೀದಿಸಿದವರು ಬುಧವಾರ ರಾತ್ರಿ ಅವುಗಳನ್ನು ಸಿಡಿಸಬೇಕೆನ್ನುವ ವೇಳೆಗೆ ಜೋರಾಗಿ ನಗರದ ಎಲ್ಲೆಡೆದ ಸುರಿದ ಮಳೆ ಪಟಾಕಿ ಸುಡುವ ಸಂಭ್ರಮಕ್ಕೆ ತಣ್ಣೀರು ಎರಚಿತು. ಪರಿಣಾಮ, ಮಳೆ ನಿಂತಾಗ ಅಲ್ಲಲ್ಲಿ ಪಟಾಕಿ ಸಿಡಿಸಿದ ಸಣ್ಣಪುಟ್ಟ ಸದ್ದುಗಳು ಕೇಳಿಬಂದವು.

‘ನಗರದಲ್ಲಿ ಬುಧವಾರ 18.1 ಮಿ.ಮೀ ಮಳೆಯಾಗಿದೆ’ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.