ADVERTISEMENT

ಯುವತಿಯ ಚಿತ್ರ ತೆಗೆದ ಮಾಜಿ ಸೈನಿಕ ಸೆರೆ

​ಪ್ರಜಾವಾಣಿ ವಾರ್ತೆ
Published 4 ಮೇ 2017, 19:49 IST
Last Updated 4 ಮೇ 2017, 19:49 IST

ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಯಲ್ಲಿ  ಯುವತಿಯ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ಆರೋಪದಡಿ  ಸೆಂಥಿಲ್‌ (35) ಎಂಬುವರನ್ನು ಕಬ್ಬನ್‌ ಪಾರ್ಕ್‌ ಠಾಣೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಆರೋಪಿಯು ಮಾಜಿ ಸೈನಿಕರಾಗಿದ್ದು, ಕೆಲ ವರ್ಷಗಳ ಹಿಂದಷ್ಟೇ ಸ್ವಯಂ ನಿವೃತ್ತಿ ಪಡೆದಿದ್ದರು.‘ಸುದ್ದಿ ವಾಹಿನಿಯ ಇಂಟರ್ನಿಯಾಗಿರುವ  ಯುವತಿಯು ಮಾಹಿತಿ ಸಂಗ್ರಹಕ್ಕಾಗಿ ಮಂಡಳಿಯ ಕಚೇರಿಗೆ ಗುರುವಾರ ಸಂಜೆ 4 ಗಂಟೆಯ ಸುಮಾರಿಗೆ ಹೋಗಿದ್ದರು.  

ಅಧಿಕಾರಿ ಭೇಟಿಗಾಗಿ ಕಾಯುತ್ತ ಕುಳಿತಿದ್ದರು’ ‘ಈ ವೇಳೆ ಚಿತ್ರ ತೆಗೆದಿದ್ದನ್ನು ಗಮನಿಸಿದ ಯುವತಿಯು ಕಚೇರಿಯ ಸಿಬ್ಬಂದಿಗೆ ವಿಷಯ ತಿಳಿಸಿದ್ದರು. ಬಳಿಕ ಆರೋಪಿಯ ಮೊಬೈಲ್‌ ಪರಿಶೀಲಿಸಿದಾಗ 10ಕ್ಕೂ ಹೆಚ್ಚು ಚಿತ್ರಗಳಿರುವುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಮಹಿಳೆಯರ ಗೌರವಕ್ಕೆ ಧಕ್ಕೆ (ಐಪಿಸಿ 509)  ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ತಮಿಳು ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಆರೋಪಿಯು ಹೇಳಿದ್ದಾರೆ. ಈ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.