ADVERTISEMENT

ರಸೆಲ್‌ ಮಾರ್ಕೆಟ್‌: 30 ಅಂಗಡಿಗಳಿಗೆ ಬೀಗಮುದ್ರೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 20:15 IST
Last Updated 19 ಜುಲೈ 2017, 20:15 IST
ರಸೆಲ್‌ ಮಾರ್ಕೆಟ್‌: 30  ಅಂಗಡಿಗಳಿಗೆ ಬೀಗಮುದ್ರೆ
ರಸೆಲ್‌ ಮಾರ್ಕೆಟ್‌: 30 ಅಂಗಡಿಗಳಿಗೆ ಬೀಗಮುದ್ರೆ   

ಬೆಂಗಳೂರು: ಶಿವಾಜಿನಗರದ ರಸೆಲ್‌ ಮಾರ್ಕೆಟ್‌ನಲ್ಲಿ ಪರವಾನಗಿ ಇಲ್ಲದ, ಸ್ವಚ್ಛತೆ ಕಾಪಾಡದ 30 ಮಾಂಸದಂಗಡಿಗಳಿಗೆ ಬಿಬಿಎಂಪಿ ಬೀಗ ಹಾಕಿಸಿದೆ.

ಪಾಲಿಕೆಯ ಜಂಟಿ ಆಯುಕ್ತ (ಘನತ್ಯಾಜ್ಯ) ಸರ್ಫರಾಜ್‌ ಖಾನ್‌ ಅಧಿಕಾರಿಗಳೊಂದಿಗೆ ಮಂಗಳವಾರ ಮಾರುಕಟ್ಟೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರವಾನಗಿ ಹಾಜರುಪಡಿಸದ ಮತ್ತು ನೈರ್ಮಲ್ಯ ಕೊರತೆ ಕಂಡುಬಂದ ಮಾಂಸದಂಗಡಿಗಳಿಗೆ ಬೀಗ ಮುದ್ರೆ ಹಾಕಿಸಿದರು.

‘ರಸೆಲ್‌ ಮಾರ್ಕೆಟ್‌ನ ಮಾಂಸ ಮಾರಾಟಗಾರರು ತಮಿಳುನಾಡಿನಿಂದ ಮಾಂಸ ತಂದು, ಶೀತಲ ಪೆಟ್ಟಿಗೆಗಳಲ್ಲಿ ವಾರಾನುಗಟ್ಟಲೆ ದಾಸ್ತಾನು ಇಡುತ್ತಿದ್ದರು. ವ್ಯಾಪಾರಿಗಳು ಸ್ವಚ್ಛತೆ ಕಾಪಾಡದ ಬಗ್ಗೆಯೂ ಸ್ಥಳೀಯ ನಿವಾಸಿಗಳಿಂದ ಪಾಲಿಕೆಗೆ ದೂರುಗಳು ಬಂದಿದ್ದವು. ದಾಳಿ ವೇಳೆ ಮಾಂಸದಂಗಡಿಗಳಿಗೆ ಬೀಗ ಮುದ್ರೆ ಹಾಕದಂತೆ ಪ್ರಭಾವಿ ವ್ಯಕ್ತಿಗಳಿಂದ ಸಾಕಷ್ಟು ಒತ್ತಡ ಬಂದರೂ ಅಧಿಕಾರಿಗಳು ಜಗ್ಗದೆ, ಬಾಗಿಲು ಮುಚ್ಚಿಸಿದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.