ADVERTISEMENT

ರಸ್ತೆ ಮೇಲೇ ಹೂಳು ಸಂಚಾರ ಗೋಳು

ಪ್ರಜಾವಾಣಿ ಕಾಳಜಿ ಅಪಾಯ ತಡೆಯೋಣ...

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ಪ್ರತಿಸಲ ಮಳೆ ಸುರಿದಾಗಲೂ ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಅನಾಹುತಗಳು ಸಂಭವಿಸುತ್ತಲೇ ಇವೆ. ಹೂಳು ತುಂಬಿದ ರಾಜಕಾಲುವೆಗಳು, ಸದಾ ಒಡಲು ತುಂಬಿಕೊಂಡು ರಸ್ತೆಗೆ ಕೊಳಚೆ ಚೆಲ್ಲುವ ಚರಂಡಿಗಳು, ಬಲಿಗಾಗಿ ಬಾಯ್ದೆರೆದು ಕುಳಿತ ಮ್ಯಾನ್ ಹೋಲ್‌ಗಳು, ರಸ್ತೆ ಗುಂಡಿಗಳು ಸಮಸ್ಯೆಯ ತೀವ್ರತೆ ಹೆಚ್ಚಿಸಿವೆ.

ರಸ್ತೆ ಹಾಗೂ ರಾಜಕಾಲುವೆಗಳು ದುರಸ್ತಿಗೊಂಡರೆ ಅನಾಹುತಗಳು ಗಣನೀಯವಾಗಿ ತಗ್ಗಲಿವೆ. ಹೀಗಾಗಿ ಅಪಾಯಕ್ಕೆ ತಡೆಯೊಡ್ಡಬೇಕೆನ್ನುವುದು ‘ಪ್ರಜಾವಾಣಿ’ ಕಾಳಜಿ. ಹಾಗೇ ಉಳಿದ ಹೂಳು, ಬಾಯ್ದೆರೆದ ರಸ್ತೆ ಗುಂಡಿ ಮತ್ತು ಮ್ಯಾನ್‌ ಹೋಲ್‌ಗಳ ಫೋಟೊ ಹಾಗೂ ಅದಕ್ಕೆ ಪೂರಕ ಮಾಹಿತಿಯನ್ನು ಹಂಚಿಕೊಳ್ಳುವಂತೆ ‘ಪ್ರಜಾವಾಣಿ’ ಓದುಗರಿಗೆ ಆಹ್ವಾನ ನೀಡುತ್ತಿದ್ದು, ಅಂತಹ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ.

ಇ–ಮೇಲ್‌: bangalore@prajavani.co.in ಸಂಪರ್ಕ ಸಂಖ್ಯೆ: 2588 0640

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.