ADVERTISEMENT

ಸಂಭ್ರಮದ ಪಟಾಲಮ್ಮ ಜಾತ್ರಾ ಉತ್ಸವ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2014, 20:00 IST
Last Updated 23 ಏಪ್ರಿಲ್ 2014, 20:00 IST

ಯಲಹಂಕ: ರಾಜಾನುಕುಂಟೆ ಸಮೀಪದ ಅದ್ದಿಗಾನಹಳ್ಳಿಯಲ್ಲಿನ ಪಟಾಲಮ್ಮ ದೇವಿಯ ಜಾತ್ರಾ ಮಹೋತ್ಸವ ಬುಧವಾರ ವಿಜೃಂಭಣೆ ಯಿಂದ ನಡೆಯಿತು.

ಬೆಳಗ್ಗೆ 9.30 ಗಂಟೆಗೆ ಸುತ್ತಮುತ್ತಲ ಒಂಬತ್ತು ಗ್ರಾಮಗಳ ಪ್ರತಿ ಮನೆ ಯಿಂದ ಮಹಿಳೆಯರು ಆರತಿಯನ್ನು ಹೊತ್ತುತಂದು ಅದ್ದಿಗಾನಹಳ್ಳಿಯಲ್ಲಿ ಸೇರಿದರು. ನಂತರ ಪೂಜಾರ್‌ ಅಜ್ಜಪ್ಪನವರ ಕುಟುಂಬದವರಿಂದ ರಥ ಹಾಗೂ ಪಟಾಲಮ್ಮ ಉತ್ಸವ ದೇವಿಗೆ ಪೂಜೆ ನೆರವೇರಿಸಲಾಯಿತು.

ಅದ್ದಿಗಾನಹಳ್ಳಿಯಿಂದ 11.30 ಗಂಟೆಗೆ ಹೊರಟ ರಥ ಹಾಗೂ ಉತ್ಸ ವ ದೇವಿಯ ಮೆರವಣಿಗೆ, ಮಧ್ಯಾಹ್ನ 12.30 ಗಂಟೆಗೆ ದೇವಾಲಯಕ್ಕೆ ಆಗಮಿಸಿತು. ಮಹಿಳೆಯರು ಆರತಿಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

ಇದೇ ವೇಳೆಗೆ ಸಾದೇನಹಳ್ಳಿ ಹಾಗೂ ತರಹುಣಿಸೆ ಗ್ರಾಮಗಳಿಂದಲೂ ರಥಗಳನ್ನು ಆರತಿಗಳ ಸಮೇತ ಮೆರವಣಿಗೆ ಮೂಲಕ ದೇವಾಲಯದ ಬಳಿಗೆ ತರಲಾಯಿತು. ನಂತರ ದೇವಿಗೆ ಬೆಲ್ಲದ ಆರತಿ ಬೆಳಗಿ, ಪೂಜೆ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.