ADVERTISEMENT

ಹೈಕೋರ್ಟ್ ತರಾಟೆಯಿಂದ ಕಣ್ತೆರೆದ ಬಿಬಿಎಂಪಿ ಇಂದಿನಿಂದ ಫುಟ್‌ಪಾತ್ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2014, 19:52 IST
Last Updated 21 ಆಗಸ್ಟ್ 2014, 19:52 IST
ಹೈಕೋರ್ಟ್ ತರಾಟೆಯಿಂದ ಕಣ್ತೆರೆದ ಬಿಬಿಎಂಪಿ ಇಂದಿನಿಂದ ಫುಟ್‌ಪಾತ್ ತೆರವು ಕಾರ್ಯಾಚರಣೆ
ಹೈಕೋರ್ಟ್ ತರಾಟೆಯಿಂದ ಕಣ್ತೆರೆದ ಬಿಬಿಎಂಪಿ ಇಂದಿನಿಂದ ಫುಟ್‌ಪಾತ್ ತೆರವು ಕಾರ್ಯಾಚರಣೆ   

ಬೆಂಗಳೂರು: ನಗರದ ಹದಗೆಟ್ಟ ಪಾದಚಾರಿ ಮಾರ್ಗಗಳ ಸಮಸ್ಯೆ ಕುರಿತಂತೆ ಹೈಕೋರ್ಟ್‌ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡ ಪರಿಣಾಮ, ಬಿಬಿಎಂಪಿ ಶುಕ್ರವಾರದಿಂದ (ಆ.22) ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭಿಸುತ್ತಿದೆ.

ಶುಕ್ರವಾರ ರಾಮಕೃಷ್ಣ ನಗರ ಮುಖ್ಯರಸ್ತೆಯಿಂದ ಆರಂಭಗೊಳ್ಳುವ ಈ ಕಾರ್ಯಾಚರಣೆ  ಸೆ.3ರವರೆಗೆ ನಗರದ ವಿವಿಧ ವಾರ್ಡ್‌ಗಳಲ್ಲಿ ಹಂತ ಹಂತವಾಗಿ ನಡೆಯಲಿದೆ. ಈ ಕುರಿತಂತೆ ಪೂರ್ವಭಾವಿಯಾಗಿ ಬಿಬಿಎಂಪಿ ತೆರವು ಕಾರ್ಯಾಚರಣೆ ನಡೆಯುವ ವಾರ್ಡ್‌ಗಳಲ್ಲಿರುವ ಸಂಬಂಧಪಟ್ಟ ಪಾಲಿಕೆ ಸಿಬ್ಬಂದಿಗೆ ಮಾಹಿತಿ ಕಾರ್ಯಚರಣೆಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳುವಂತೆ ಮತ್ತು ಸ್ಥಳೀಯ ಪೊಲೀಸರ ನೆರವು ಪಡೆಯುವಂತೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.